
ಜಮ್ಮು: ಯೋಧರನ್ನು ಕರೆದೊಯ್ಯುತ್ತಿದ್ದ ವಾಹನವೊಂದು ರಸ್ತೆಯಲ್ಲಿ ಸ್ಕೀಡ್ ಆಗಿ ಕಣಿವೆಗೆ ಉರುಳಿ ಬಿದ್ದ ಪರಿಣಾಮ ಓರ್ವ ಯೋಧ ಹುತಾತ್ಮರಾಗಿದ್ದು, ಇತರ ಆರು ಮಂದಿ ಗಾಯಗೊಂಡಿರುವ ಘಟನೆ ಜಮ್ಮು-ಕಾಶ್ಮೀರದ ಕಥುವಾದಲ್ಲಿ ನಡೆದಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಮಚೇಡಿ-ಬಿಲ್ಲವರ್ ರಸ್ತೆಯ ಸುಕ್ರಲಾ ದೇವಿ ದೇವಸ್ಥಾನ ಬಳಿ ಶುಕ್ರವಾರ ಅಪಘಾತ ನಡೆದಿದೆ. ಯೋಧರು ದೂರದ ಪ್ರದೇಶವೊಂದರ ಗಸ್ತಿನಲ್ಲಿದ್ದಾಗ ಈ ಘಟನೆ ನಡೆದಿದೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಏಳು ಸೈನಿಕರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಪೈಕಿ ಓರ್ವ ಯೋಧ ರಾಮಕಿಶೋರ್ ಹುತಾತ್ಮರಾಗಿರುವುದಾಗಿ ವೈದ್ಯರು ಘೋಷಿಸಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ.
ಸೇನೆಯ ರೈಸಿಂಗ್ ಸ್ಟಾರ್ ಕಾರ್ಪ್ಸ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹುತಾತ್ಮ ಯೋಧನಿಗೆ ಶ್ರದ್ಧಾಂಜಲಿ ಸಲ್ಲಿಸಿದೆ. ಈ ಕರ್ತವ್ಯ ನಿರತ ಹುತಾತ್ಮ ಯೋಧನ ಘಟನೆ ದುರದೃಷ್ಟಕರವಾಗಿದ್ದು,ಅವರ ಅಕಾಲಿಕ ನಿಧನಕ್ಕೆ ವಿಷಾದಿಸುತ್ತೇವೆ. ಈ ಸಮಯದಲ್ಲಿ ಭಾರತೀಯ ಸೇನೆಯು ದುಃಖತಪ್ತ ಕುಟುಂಬದೊಂದಿಗೆ ಒಗ್ಗಟ್ಟಿನಿಂದ ನಿಂತಿದೆ ಮತ್ತು ಅವರ ಬೆಂಬಲಕ್ಕೆ ಬದ್ಧವಾಗಿದೆ ಎಂದು ಫೋಸ್ಟ್ ಮಾಡಿದೆ.
Advertisement