ಹೈದರಾಬಾದ್: ಮದರಸಾಗಳ ಬಗ್ಗೆ ಹೇಳಿಕೆ ನೀಡಿದ್ದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ವಿರುದ್ಧ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ.
ಮದರಸಾಗಳು ತನ್ನ ವಿದ್ಯಾರ್ಥಿಗಳಿಗೆ AK-47 ರೈಫಲ್ ಗಳ ತರಬೇತಿ ನೀಡುತ್ತಿದೆ ಎಂದು ಬಂಡಿ ಸಂಜಯ್ ಹೇಳಿದ್ದರು. ಎಐಎಂಐಎಂ ಕೇಂದ್ರ ಕಚೇರಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಓವೈಸಿ, ಮುಸ್ಲಿಮರೆಡೆಗೆ ಸಚಿವರಿಗೇಕೆ ಅಷ್ಟೋಂದು ಕೋಪ ಎಂದು ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲದೇ ಸಚಿವರ ವಿರುದ್ಧ ವಾಗ್ದಾಳಿ ನಡೆಸಿರುವ ಓವೈಸಿ ನಿಮಗೆ ಇಸ್ಲಾಮೋಫೋಬಿಯಾದ ಸಮಸ್ಯೆ ಇದೆ ಎಂದು ಟೀಕಿಸಿದ್ದಾರೆ.
ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಮುಸ್ಲಿಮರು ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ ಮತ್ತು ಬ್ರಿಟಿಷರ ವಿರುದ್ಧ ಹೋರಾಡಲು ಮದರಸಾಗಳು 'ಫತ್ವಾ' (ನೋಟಿಸ್) ನೀಡಿದ್ದವು ಎಂದು ಓವೈಸಿ ಹೇಳಿದ್ದಾರೆ.
Advertisement