ತಿರುಪತಿ: ತಿರುಪತಿ ಲಡ್ಡು ತಯಾರಿಕೆಯಲ್ಲಿ ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆರೋಪಿಸುವ ಮೂಲಕ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ವೆಂಕಟೇಶ್ವರ ಸ್ವಾಮಿಗೆ ಕಳಂಕ ತಂದಿದ್ದಾರೆ. ಅವರು ಮಾಡಿರುವ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಸೆಪ್ಟೆಂಬರ್ 28 ರಂದು ಆಂಧ್ರಪ್ರದೇಶದಾದ್ಯಂತ ದೇವಾಲಯಗಳಲ್ಲಿ ನಡೆಯುವ ಪೂಜೆಯಲ್ಲಿ ಭಾಗವಹಿಸುವಂತೆ ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಬುಧವಾರ ಕರೆ ನೀಡಿದ್ದಾರೆ.
ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರ ವೆಂಕಟೇಶ್ವರ ದೇವಸ್ಥಾನವನ್ನು ಸಹ ಬಿಡಲಿಲ್ಲ ಮತ್ತು ಲಡ್ಡುಗಳನ್ನು ತಯಾರಿಸಲು ಕಳಪೆ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಿದೆ ಎಂದು ಎನ್‌ಡಿಎ ಶಾಸಕಾಂಗ ಪಕ್ಷದ ಸಭೆಯಲ್ಲಿ ಚಂದ್ರಬಾಬು ನಾಯ್ಡು ಆರೋಪಿಸಿದ್ದರು.
"ಸೆಪ್ಟೆಂಬರ್ 28 ರ ಶನಿವಾರ ಚಂದ್ರಬಾಬು ಮಾಡಿದ ಈ ಪಾಪ ನಿವಾರಣೆಗೆ ದೇವಸ್ಥಾನಗಳಲ್ಲಿ ರಾಜ್ಯಾದ್ಯಂತ ಪೂಜೆ ಸಲ್ಲಿಸುವಂತೆ YSRCP ಕರೆ ನೀಡುತ್ತಿದೆ" ಎಂದು ಮಾಜಿ ಸಿಎಂ ಜಗನ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸದಿದ್ದರೂ, ನಾಯ್ಡು ಉದ್ದೇಶಪೂರ್ವಕವಾಗಿ, ರಾಜಕೀಯ ಲಾಭಕ್ಕಾಗಿ ಸುಳ್ಳು ಆರೋಪ ಮಾಡಿದ್ದಾರೆ. ತಿರುಪತಿ ದೇವಸ್ಥಾನದ ಪಾವಿತ್ರ್ಯದ ವಿರುದ್ಧ ಸರ್ಕಾರ ಷಡ್ಯಂತ್ರ ನಡೆಸಿದೆ. ತಿರುಪತಿ ಲಡ್ಡುವಿನ ಪಾವಿತ್ರ್ಯತೆ ಉಳಿಸಲು ಮತ್ತು ರಾಜಕೀಯ ಕಾರಣದಿಂದ ಮಾಡಲಾದ ಆರೋಪಗಳನ್ನು ತೊಡೆದು ಹಾಕಲು ಈ ಪೂಜೆ ಕೈಗೊಳ್ಳಲಾಗಿದೆ ಎಂದು ಜಗನ್ ಹೇಳಿದ್ದಾರೆ.
Advertisement