ಪವನ್ ಕಲ್ಯಾಣ್
ಪವನ್ ಕಲ್ಯಾಣ್

ನನ್ನ ಮಕ್ಕಳು ಆರ್ಥೋಡಾಕ್ಸ್ ಕ್ರಿಶ್ಚಿಯನ್; ನಾನು ಮತಾಂತರಗೊಂಡಿದ್ದೇನೆ: DCM ಪವನ್ ಕಲ್ಯಾಣ್ ವಿಡಿಯೋ ವೈರಲ್

ವೈರಲ್ ವಿಡಿಯೋದಲ್ಲಿ, ಪವನ್ ಕಲ್ಯಾಣ್ ತನ್ನ ಮಕ್ಕಳು ಆರ್ಥೋಡಾಕ್ಸ್ ಕ್ರಿಶ್ಚಿಯನ್ನರು ಎಂದು ಒಪ್ಪಿಕೊಳ್ಳುತ್ತಾರೆ. ನಾನು ಚರ್ಚ್‌ಗಳಿಗೆ ಹೋಗಿದ್ದೇನೆ. ಬ್ಯಾಪ್ಟೈಜ್ ಆಗಿದ್ದೇನೆ ಎಂದು ಬಹಿರಂಗಪಡಿಸಿದ್ದು ಕ್ರಿಶ್ಚಿಯನ್ ಧರ್ಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
Published on

ಹೈದರಾಬಾದ್: ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ವಿಚಾರ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ತನಿಖೆಗೂ ಆಗ್ರಹಿಸಿದ್ದಾರೆ. ಈ ಮಧ್ಯೆ ಪವನ್ ಕಲ್ಯಾಣ್ ಅವರ ಹಿಂದಿನ ವಿಡಿಯೋವೊಂದು ವೈರಲ್ ಆಗುತ್ತಿದೆ.

ನಟ ಪವನ್ ಕಲ್ಯಾಣ್ ಕ್ರಿಶ್ಚಿಯನ್ ಧರ್ಮದ ಬಗ್ಗೆ ಚರ್ಚಿಸುತ್ತಿರುವ ಹಳೆಯ ವೀಡಿಯೊ ಮತ್ತೆ ಕಾಣಿಸಿಕೊಂಡಿದೆ. ಇತ್ತೀಚೆಗೆ ಹಿಂದೂಗಳ ಅವಹೇಳನ ಬಗ್ಗೆ ಭಾವುಕರಾಗಿ ಮಾತನಾಡಿದ ಪವನ್ ಕಲ್ಯಾಣ್, ಹಿಂದೂ ಆಚರಣೆಗಳ ಬಗ್ಗೆ ಮಾಡಿದ ಹಾಸ್ಯಗಳನ್ನು ಟೀಕಿಸಿದರು. ಆದರೆ ಈಗ ಕ್ರಿಶ್ಚಿಯನ್ ಧರ್ಮದ ಬಗ್ಗೆ ಅವರ ಹಿಂದಿನ ಹೇಳಿಕೆಗಳು ವೈರಲ್ ಆಗುತ್ತಿವೆ.

ವೈರಲ್ ವಿಡಿಯೋದಲ್ಲಿ, ಪವನ್ ಕಲ್ಯಾಣ್ ತನ್ನ ಮಕ್ಕಳು ಆರ್ಥೋಡಾಕ್ಸ್ ಕ್ರಿಶ್ಚಿಯನ್ನರು ಎಂದು ಒಪ್ಪಿಕೊಳ್ಳುತ್ತಾರೆ. ನಾನು ಚರ್ಚ್‌ಗಳಿಗೆ ಹೋಗಿದ್ದೇನೆ. ಬ್ಯಾಪ್ಟೈಜ್ ಆಗಿದ್ದೇನೆ ಎಂದು ಬಹಿರಂಗಪಡಿಸಿದ್ದು ಕ್ರಿಶ್ಚಿಯನ್ ಧರ್ಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಅದಕ್ಕೆ ಪೂರಕವೆಂಬಂತೆ ಯೇಸುವಿನ ಜನ್ಮಸ್ಥಳವಾದ ಬೆಥ್ ಲೆಹೆಮ್ಗೆ ಸ್ವಂತ ಭೇಟಿ ನೀಡಿದ್ದಾಗಿ ಹೇಳಿಕೊಂಡಿದ್ದಾರೆ.

ಪವನ್ ಕಲ್ಯಾಣ್
ತಿರುಪತಿ ಲಡ್ಡು ವಿವಾದ ಬೆನ್ನಲ್ಲೆ ಯೋಗಿ ದಿಟ್ಟ ಹೆಜ್ಜೆ: ಆಹಾರ ಕಲಬೆರಕೆ ವಿರುದ್ಧ ಸಮರ ಸಾರಿದ ಸಿಎಂ!

ಇದು ಅವರ ಇತ್ತೀಚಿನ ಹೇಳಿಕೆಗಳಿಗೆ ತೀವ್ರವಾಗಿ ವ್ಯತಿರಿಕ್ತವಾಗಿದೆ. ತಿರುಪತಿ ಲಡ್ಡು ವಿವಾದದ ಬಳಿಕ ಹಿಂದೂ ನಂಬಿಕೆಗಳನ್ನು ಗೌರವಿಸುವಂತೆ ಜನರನ್ನು ಒತ್ತಾಯಿಸಿದರು. ಯೇಸು ಅಥವಾ ಇಸ್ಲಾಂ ಬಗ್ಗೆ ಯಾಕೆ ಅಪಹಾಸ್ಯ ಮಾಡಲ್ಲ ಎಂದು ಪ್ರಶ್ನಿಸಿದರು. ತಿರುಪತಿ ಲಡ್ಡು ವಿಚಾರಕ್ಕೆ ಸಂಬಂಧಿಸಿದಂತೆ ವಿವಾದದ ನಂತರ, ಕಲ್ಯಾಣ್ ಹಿಂದೂ ರಾಷ್ಟ್ರೀಯತೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ.

ಕ್ರಿಶ್ಚಿಯನ್ ಧರ್ಮ ಆಚರಣೆ ಮಾಡುತ್ತಿರುವ ಪವನ್ ಕಲ್ಯಾಣ್ ಹೀಗ ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಅವರು 'ನಿಜವಾದ ಹಿಂದೂ ಅಲ್ಲ' ಎಂದು ಲೇಬಲ್ ಮಾಡುವ ಕಾಮೆಂಟ್‌ಗಳು ಗೋಚರಿಸುತ್ತಿವೆ. ಪ್ರತಿಕ್ರಿಯೆಗಳು ಹೆಚ್ಚಾದಂತೆ, ಧರ್ಮದೊಂದಿಗಿನ ನಟನ ಸಂಕೀರ್ಣ ಸಂಬಂಧವು ಸಾರ್ವಜನಿಕ ಗಮನವನ್ನು ಸೆಳೆಯುವುದನ್ನು ಮುಂದುವರೆಸಿದೆ.

X

Advertisement

X
Kannada Prabha
www.kannadaprabha.com