ಹಿಮಾಚಲ ಪ್ರದೇಶ: ರಾಜ್ಯದಲ್ಲಿ 'ಯೋಗಿ ಮಾಡಲ್' ಅಳವಡಿಸಲು ಮುಂದಾದ ಕಾಂಗ್ರೆಸ್ ಸಚಿವನಿಗೆ ಹೈಕಮಾಂಡ್ ಎಚ್ಚರಿಕೆ!

ಸಚಿವ ವಿಕ್ರಮಾದಿತ್ಯ ಸಿಂಗ್ ಅವರನ್ನು ದೆಹಲಿಗೆ ಕರೆಸಿದ್ದ ಕಾಂಗ್ರೆಸ್ ಹೈಕಮಾಂಡ್ ಛೀಮಾರಿ ಹಾಕಿತ್ತು. ಇದರ ಬೆನ್ನಲ್ಲೇ ಯೂ-ಟರ್ನ್ ಹೊಡೆದಿರುವ ಹಿಮಾಚಲ ಪ್ರದೇಶ ಇಂತಹ ಆದೇಶ ಹೊರಡಿಸಿಲ್ಲ ಎಂದು ಹೇಳಿದೆ.
ಯೋಗಿ ಆದಿತ್ಯನಾಥ-ವಿಕ್ರಮಾದಿತ್ಯ ಸಿಂಗ್
ಯೋಗಿ ಆದಿತ್ಯನಾಥ-ವಿಕ್ರಮಾದಿತ್ಯ ಸಿಂಗ್
Updated on

ಧರ್ಮಶಾಲಾ (ಹಿಮಾಚಲಪ್ರದೇಶ): ಹಿಮಾಚಲ ಪ್ರದೇಶದ ಆಹಾರ ಮಳಿಗೆಗಳ ಮೇಲೆ ಮಾಲೀಕರ ಹೆಸರು ಮತ್ತು ವಿಳಾಸವನ್ನು ಬರೆಯುವ ವಿವಾದಾತ್ಮಕ ಆದೇಶದ ನಂತರ, ಸಚಿವ ವಿಕ್ರಮಾದಿತ್ಯ ಸಿಂಗ್ ಅವರನ್ನು ದೆಹಲಿಗೆ ಕರೆಸಿದ್ದ ಕಾಂಗ್ರೆಸ್ ಹೈಕಮಾಂಡ್ ಛೀಮಾರಿ ಹಾಕಿತ್ತು. ಇದರ ಬೆನ್ನಲ್ಲೇ ಯೂ-ಟರ್ನ್ ಹೊಡೆದಿರುವ ಹಿಮಾಚಲ ಪ್ರದೇಶ ಇಂತಹ ಆದೇಶ ಹೊರಡಿಸಿಲ್ಲ ಎಂದು ಹೇಳಿದೆ.

ನಿನ್ನೆ ವಿಕ್ರಮಾದಿತ್ಯ ಸಿಂಗ್ ಇಲಾಖೆಯೇ ಈ ಆದೇಶ ಹೊರಡಿಸಿತ್ತು. ವಾಸ್ತವವಾಗಿ, ಈ ಹಿಂದೆ ಕನ್ವರ್ ಯಾತ್ರೆಯ ಸಂದರ್ಭದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರದ ಇದೇ ರೀತಿಯ ಆದೇಶವನ್ನು ಹೊರಡಿಸಿತ್ತು. ಅಂದು ಈ ನಿರ್ಧಾರವನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿತ್ತು.

ಮೂಲಗಳ ಪ್ರಕಾರ, ಈ ವಿಷಯದ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡದಂತೆ PWD ಮತ್ತು ನಗರಾಭಿವೃದ್ಧಿ ಸಚಿವ ವಿಕ್ರಮಾದಿತ್ಯ ಸಿಂಗ್ ಅವರನ್ನು ಎಚ್ಚರಿಸಲಾಗಿತ್ತು. ವಿಕ್ರಮಾದಿತ್ಯನ ಈ ನಡೆಗೆ ಪಕ್ಷದ ವರಿಷ್ಠ ಮಲ್ಲಿಕಾರ್ಜುನ ಖರ್ಗೆ ತೀವ್ರ ಕೋಪಗೊಂಡಿದ್ದಾರೆ ಎನ್ನಲಾಗುತ್ತಿದೆ.

ಹಿಮಾಚಲ ನಗರಾಭಿವೃದ್ಧಿ ಸಚಿವಾಲಯದ ಈ ಆದೇಶವನ್ನು ಕಾಂಗ್ರೆಸ್ ನಾಯಕ ಟಿಎಸ್ ಸಿಂಗ್ ದೇವ್ ಕೂಡ ಟೀಕಿಸಿದ್ದಾರೆ. ಇದು ಖಂಡನೀಯ ಮತ್ತು ತಾರತಮ್ಯದ ಹೆಜ್ಜೆ ಎಂದು ಆರೋಪಿಸಿದ್ದರು. 'ಈ ರೀತಿ ಏಕೆ ಮಾಡಲಾಗಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಏಕೆಂದರೆ ಉತ್ತರ ಪ್ರದೇಶ ಸರ್ಕಾರವು ಕನ್ವರ್ ಯಾತ್ರೆಯ ಸಂದರ್ಭದಲ್ಲಿ ಇದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡಿತ್ತು. ಒಬ್ಬ ವ್ಯಕ್ತಿಯ ಅಂಗಡಿಯಲ್ಲಿ ಹೆಸರನ್ನು ಬರೆಯುವ ಅವಶ್ಯಕತೆ ಏನು? ಇದರ ಹಿಂದಿನ ತರ್ಕ ನನಗೆ ಅರ್ಥವಾಗುತ್ತಿಲ್ಲ. ನೀವು ಒಬ್ಬ ವ್ಯಕ್ತಿಯನ್ನು ಮಾರಾಟ ಮಾಡುತ್ತಿಲ್ಲ. ನೀವು ಬ್ರಾಂಡ್ ಅನ್ನು ಮಾರಾಟ ಮಾಡುತ್ತಿದ್ದೀರಿ. ಆದ್ದರಿಂದ, ಯಾವುದೇ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸುವ ಅಗತ್ಯವಿಲ್ಲ ಎಂದು ಹೇಳಿದ್ದರು.

ಯೋಗಿ ಆದಿತ್ಯನಾಥ-ವಿಕ್ರಮಾದಿತ್ಯ ಸಿಂಗ್
ತಿರುಪತಿ ಲಡ್ಡು ವಿವಾದ ಬೆನ್ನಲ್ಲೆ ಯೋಗಿ ದಿಟ್ಟ ಹೆಜ್ಜೆ: ಆಹಾರ ಕಲಬೆರಕೆ ವಿರುದ್ಧ ಸಮರ ಸಾರಿದ ಸಿಎಂ!

ಎಐಡಿಯುಎಫ್ ಶಾಸಕ ರಫೀಕುಲ್ ಇಸ್ಲಾಂ ಕೂಡ ಅಂಗಡಿಗಳ ಮೇಲೆ ಹೆಸರು ಮತ್ತು ವಿಳಾಸಗಳನ್ನು ಬರೆಯುವ ಆದೇಶವನ್ನು ಟೀಕಿಸಿದರು. ಕಾಂಗ್ರೆಸ್ ಕೂಡ ಈಗ ಬಿಜೆಪಿ ಹಾದಿಯಲ್ಲಿ ಸಾಗಿದೆ ಎಂದರು. ಕಾಂಗ್ರೆಸ್ ಯುಪಿ ಮಾದರಿಯನ್ನು ಅಳವಡಿಸಿಕೊಂಡಿದೆ ಎಂದು ಎಐಡಿಯುಎಫ್ ನಾಯಕ ಆರೋಪಿಸಿದರು. ಇದರಲ್ಲಿ ಅಂಗಡಿ ಮಾಲೀಕರು ಮತ್ತು ವ್ಯವಸ್ಥಾಪಕರ ಹೆಸರನ್ನು ಬರೆಯಲು ಸಿಎಂ ಯೋಗಿ ಆದೇಶಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com