ತ್ರಿಶೂರ್: ಒಂದೇ ದಿನ 3 ATM ದರೋಡೆ; 65 ಲಕ್ಷ ರೂ ದೋಚಿದ ಗ್ಯಾಂಗ್!

ಮಧ್ಯರಾತ್ರಿ 2: 30 ರ ವೇಳೆಗೆ ಗ್ಯಾಸ್ ಕಟ್ಟರ್ ನ್ನು ಬಳಕೆ ಮಾಡಿ ಮಾಪ್ರಾಣಾಮ್ ನಲ್ಲಿ ದರೋಡೆ ಮಾಡಲಾಗಿದೆ.
Police personnel inspecting ATM machines from which thieves looted cash
ದರೋಡೆಯಾದ ಎಟಿಎಂ ನ್ನು ಪರಿಶೀಲಿಸುತ್ತಿರುವ ಪೊಲೀಸರು online desk
Updated on

ತ್ರಿಶೂರ್: ತ್ರಿಶೂರ್ ನಲ್ಲಿ ರಾತ್ರೋರಾತ್ರಿ 5 ಮಂದಿ ಇದ್ದ ದರೋಡೆ ಗ್ಯಾಂಗ್ ಎಸ್ ಬಿ ಐ ಎಟಿಎಂ ಲೂಟಿ ಮಾಡಿ 65 ಲಕ್ಷ ರೂಪಾಯಿಗಳನ್ನು ದರೋಡೆ ಮಾಡಿದೆ. ಒಂದೇ ಬಾರಿಗೆ 3 ಬೇರೆ ಬೇರೆ ಪ್ರದೇಶಗಳ ಎಟಿಎಂ ಗಳಲ್ಲಿ ತಡ ರಾತ್ರಿ ಈ ದರೋಡೆ ನಡೆದಿದೆ.

ಮಧ್ಯರಾತ್ರಿ 2: 30 ರ ವೇಳೆಗೆ ಗ್ಯಾಸ್ ಕಟ್ಟರ್ ನ್ನು ಬಳಕೆ ಮಾಡಿ ಮಾಪ್ರಾಣಾಮ್ ನಲ್ಲಿ ದರೋಡೆ ಮಾಡಲಾಗಿದೆ. ಕ್ಯಾಶ್ ಟ್ರೇ ನ್ನು ತುಂಡರಿಸಿ ದರೋಡೆ ಮಾಡಲಾಗಿದ್ದು, ಬ್ಯಾಂಕ್ ಅಧಿಕಾರಿಗಳು ಮಾಹಿತಿ ಸಿಗುತ್ತಿದ್ದಂತೆಯೇ ಪೊಲೀಸರಿಗೆ ತಿಳಿಸಿದ್ದಾರೆ. ಸ್ಪ್ರೇ ಪೇಂಟ್ ಬಳಸಿ ಸಿಸಿಟಿವಿ ಕ್ಯಾಮರಾಗಳನ್ನು ಮುಚ್ಚಲಾಗಿತ್ತು. ಆದರೆ ಸ್ಥಳೀಯ ಹೊಟೆಲ್ ಬಳಿ ಇದ್ದ ಸಿಸಿಟಿವಿ ಮೂಲಕ ಮುಖ ಮುಚ್ಚಿಕೊಂಡಿರುವ ದರೋಡೆ ಕೋರರು ಎಟಿಎಂ ನತ್ತ ಧಾವಿಸುತ್ತಿರುವುದು ಪತ್ತೆಯಾಗಿದೆ.

Police personnel inspecting ATM machines from which thieves looted cash
ಕೇರಳದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು: ತ್ರಿಶೂರ್ ಡಿಸಿಸಿ ಕಚೇರಿಯಲ್ಲಿ ಜಗಳ, ಪ್ರಕರಣ ದಾಖಲು

ಬೆಳಗಿನ ಜಾವ 3.15ರ ಸುಮಾರಿಗೆ ಕೊಳಜಿ ಎಸ್‌ಬಿಐ ಎಟಿಎಂನಲ್ಲಿ ದರೋಡೆ ಮಾಡಿದ ನಂತರ ಶೋರನೂರು ರಸ್ತೆಯಲ್ಲಿರುವ ಎಸ್‌ಬಿಐ ಎಟಿಎಂ ನ್ನು ಅದೇ ರೀತಿಯಲ್ಲಿ ಲೂಟಿ ಮಾಡಲಾಗಿದೆ.

ಪೊಲೀಸರು ತನಿಖೆ ಆರಂಭಿಸಿದರು. ಫೋರೆನ್ಸಿಕ್ ತಂಡ ಮತ್ತು ಶ್ವಾನ ದಳ ಸ್ಥಳಕ್ಕೆ ಆಗಮಿಸಿದೆ. ಕೃತ್ಯಕ್ಕೆ ಗ್ಯಾಂಗ್ ಬಿಳಿ ಬಣ್ಣದ ಹುಂಡೈ ಕ್ರೆಟಾ ಕಾರನ್ನು ಬಳಸಿರುವ ಶಂಕೆ ವ್ಯಕ್ತವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com