ಹರಿಯಾಣ ವಿಧಾನಸಭಾ ಚುನಾವಣೆ: ಮುಖ್ಯಮಂತ್ರಿ ಆಯ್ಕೆ ಕುರಿತು ಹೈಕಮಾಂಡ್ ಅಂತಿಮ ನಿರ್ಧಾರ- ಹೂಡಾ

ಹರಿಯಾಣ ಕಾಂಗ್ರೆಸ್ ನಲ್ಲಿನ ಆಂತರಿಕ ಭಿನ್ನಾಭಿಪ್ರಾಯವನ್ನು ತಳ್ಳಿ ಹಾಕಿದ ಹೂಡಾ, ಕಾಂಗ್ರೆಸ್ ಒಗ್ಗಟ್ಟಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಅನೇಕ ಆಕಾಂಕ್ಷಿಗಳಿರುವುದರಿಂದ ಪಕ್ಷ ಹೆಚ್ಚಿನ ಶಕ್ತಿ ಪಡೆಯುತ್ತದೆ ಎಂದು ಹೇಳಿದರು.
ಭೂಪಿಂದರ್ ಸಿಂಗ್ ಹೂಡಾ
ಭೂಪಿಂದರ್ ಸಿಂಗ್ ಹೂಡಾ
Updated on

ಚಂಡೀಗಢ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ "ಭಾರಿ ಜನಾದೇಶ" ದೊರೆಯಲಿದೆ ಎಂದು ಭವಿಷ್ಯ ನುಡಿದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ಮುಖ್ಯಮಂತ್ರಿ ಆಯ್ಕೆ ಕುರಿತು ಹೈಕಮಾಂಡ್ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

ಹರಿಯಾಣ ಕಾಂಗ್ರೆಸ್ ನಲ್ಲಿನ ಆಂತರಿಕ ಭಿನ್ನಾಭಿಪ್ರಾಯವನ್ನು ತಳ್ಳಿ ಹಾಕಿದ ಹೂಡಾ, ಕಾಂಗ್ರೆಸ್ ಒಗ್ಗಟ್ಟಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಅನೇಕ ಆಕಾಂಕ್ಷಿಗಳಿರುವುದರಿಂದ ಪಕ್ಷ ಹೆಚ್ಚಿನ ಶಕ್ತಿ ಪಡೆಯುತ್ತದೆ ಎಂದು ಹೇಳಿದರು.

ತಮ್ಮ ಮಗ ದೀಪೇಂದರ್ ಹೂಡಾ ಅವರಿಗಿಂತ ನಾನು ಮುಖ್ಯಮಂತ್ರಿ ಸ್ಥಾನದ ಮೊದಲ ಆಕಾಂಕ್ಷಿ. ನಾನು ರಾಜಕೀಯಿಂದ ನಿವೃತ್ತಿಯಾಗಿಲ್ಲ ಅಥವಾ ದುರ್ಬಲವಾಗಿಲ್ಲ ಎಂದು ಹೂಡಾ, ಪಿಟಿಐ ಸಂದರ್ಶನಕ್ಕೆ ತಿಳಿಸಿದರು.

ಮುಖ್ಯಮಂತ್ರಿ ಹುದ್ದೆಗೆ ಹಿರಿಯ ನಾಯಕರಾದ ಕುಮಾರಿ ಸೆಲ್ಜಾ ಮತ್ತು ರಣದೀಪ್ ಸುರ್ಜೆವಾಲಾ ಹೆಸರು ಕೇಳಿಬರುತ್ತಿರುವ ಕುರಿತು ಪ್ರತಿಕ್ರಿಯಿಸಿದ ಹೂಡಾ, ಇದು ಒಳ್ಳೆಯದು, ರಾಜಕೀಯದಲ್ಲಿ ಮಹತ್ವಾಕಾಂಕ್ಷೆ ಇಲ್ಲದಿದ್ದರೆ, ರಾಜಕೀಯವು ಸ್ಥಬ್ದವಾಗುತ್ತದೆ. ಈ ಬಾರಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದರು.

ಭೂಪಿಂದರ್ ಸಿಂಗ್ ಹೂಡಾ
ಹರಿಯಾಣದಲ್ಲಿ ಕಾಂಗ್ರೆಸ್ ಸ್ವಂತ ಬಲದಿಂದ ಗೆಲ್ಲುವ ಸಾಮರ್ಥ್ಯ ಹೊಂದಿದೆ, ಮೈತ್ರಿ ಮಾತುಕತೆ ಇಲ್ಲ: ಹೂಡಾ

ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿಗೆ ಇರುವ ಸಾಧ್ಯತೆಗಳ ಕುರಿತು ಮಾತನಾಡಿದ 77 ವರ್ಷದ ಹೂಡಾ, ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ ಮತ್ತು ನಮಗೆ ಎಲ್ಲಾ ವರ್ಗಗಳಿಂದ ಅಪಾರ ಬೆಂಬಲ ಸಿಗುತ್ತಿದೆ.ಅದರ ಆಧಾರದ ಮೇಲೆ ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com