ಗುವಾಹಟಿ: ಕುಕಿ ಉಗ್ರರಿಂದ ಅಪಹರಣಕ್ಕೊಳಗಾಗಿರುವ ತಮ್ಮನ್ನು ರಕ್ಷಿಸುವಂತೆ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರಿಗೆ ಮೈತೇಯಿ ಯುವಕರಿಬ್ಬರು ಮನವಿ ಮಾಡಿದ್ದಾರೆ.
ಇಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ವಿಡಿಯೋ ಮೂಲಕ ಮನವಿ ಮಾಡಲಾಗಿದೆ. ಅಪಹರಣಕ್ಕೊಳಗಾದವರಲ್ಲಿ ಒಬ್ಬ ತಮ್ಮ ಅಪಹರಣಕಾರರ ಬೇಡಿಕೆಗಳನ್ನು ಈಡೇರಿಸುವ ಮೂಲಕ ತಮ್ಮ ಜೀವಗಳನ್ನು ಉಳಿಸುವಂತೆ ಸಿಂಗ್‌ಗೆ ತೀವ್ರ ಮನವಿ ಮಾಡಿದರು. ಆದರೆ ಕುಕಿಗಳ ಬೇಡಿಕೆಗಳು ಏನೆಂದು ತಿಳಿದುಬಂದಿಲ್ಲ.
ವಿಡಿಯೋ ಹೊರಬಿದ್ದ ಕೆಲವೇ ಗಂಟೆಗಳ ನಂತರ ಬಿರೇನ್ ಸಿಂಗ್ ಅವರು ವಿವಿಧ ಪಕ್ಷಗಳ ಶಾಸಕರೊಂದಿಗೆ ಸಭೆ ನಡೆಸಿದರು. ಅಪಹರಣಕ್ಕೀಡಾಗಿರುವವರನ್ನು ಸುರಕ್ಷಿತ ಬಿಡುಗಡೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದರು. ಇಂದು ನನ್ನ ಸೆಕ್ರೆಟರಿಯೇಟ್‌ನಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಎಲ್ಲಾ ಶಾಸಕರೊಂದಿಗೆ ಸಭೆ ನಡೆಸಿದ್ದೇನೆ. ರಾಜ್ಯದ ಪ್ರಸ್ತುತ ಪರಿಸ್ಥಿತಿಯನ್ನು ಉದ್ದೇಶಿಸಿ, ವಿಶೇಷವಾಗಿ ಕುಕಿ ಉಗ್ರಗಾಮಿಗಳು ಇಬ್ಬರು ಅಮಾಯಕ ಯುವಕರ ಅಪಹರಣದ ರಕ್ಷಣೆಯ ಮೇಲೆ ಕೇಂದ್ರೀಕರಿಸಲಾಗಿತ್ತು ಸಿಂಗ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
"ನಾವು ಇಂತಹ ಹೇಯ ಕೃತ್ಯಗಳನ್ನು ಖಂಡಿಸುತ್ತೇವೆ ಮತ್ತು ನಮ್ಮ ಸರ್ಕಾರವು ಸಂತ್ರಸ್ತರ ಸುರಕ್ಷಿತ ಬಿಡುಗಡೆಗೆ ಕೆಲಸ ಮಾಡುತ್ತಿದೆ" ಎಂದು ಅವರು ಬರೆದಿದ್ದಾರೆ. ನಿಂಗೋಂಬಮ್ ಜಾನ್ಸನ್ ಸಿಂಗ್, ಒಯಿನಮ್ ಥೋಯಿಥೋಯ್ ಸಿಂಗ್ ಮತ್ತು ತೊಕ್ಚೋಮ್ ತೊಯ್ತೊಯ್ಬಾ ಸಿಂಗ್ ಎಂಬ ಮೂವರು ಯುವಕರು ಶುಕ್ರವಾರ ಇಂಫಾಲ್ ಕಣಿವೆಯ ತೌಬಲ್ ಜಿಲ್ಲೆಯಲ್ಲಿ ತಮ್ಮ ಮನೆಯಿಂದ ದ್ವಿಚಕ್ರ ವಾಹನದಲ್ಲಿ ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ನಾಪತ್ತೆಯಾಗಿದ್ದರು ಎಂದು ವರದಿಯಾಗಿದೆ.
ಕಳೆದ ವರ್ಷ ಮೇ 3ರಂದು ಮೈತೇಯಿ ಮತ್ತು ಕುಕಿಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ ಸುಮಾರು 250 ಜನರು ಸಾವನ್ನಪ್ಪಿದ್ದು 60,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ನಿರಾಶ್ರಿತರಾದ ಬಹುಪಾಲು ಜನರು ಇನ್ನೂ ಪರಿಹಾರ ಶಿಬಿರಗಳಲ್ಲಿದ್ದಾರೆ.
Advertisement