ನವದೆಹಲಿ: ಐಐಟಿ ಧನ್ಬಾದ್ ನಲ್ಲಿ ಶುಲ್ಕ ಪಾವತಿಸಲು ಹಣವಿಲ್ಲದೇ ಪ್ರವೇಶ ಪಡೆಯಲು ಸಾಧ್ಯವಾಗದ ಪರಿಸ್ಥಿತಿ ಎದುರಿಸುತ್ತಿದ್ದ ದಲಿತ ಯುವಕನ ನೆರವಿಗೆ ಸುಪ್ರೀಂ ಕೋರ್ಟ್ ಧಾವಿಸಿದೆ.
ಸಂಸ್ಥೆಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ಬಿಟೆಕ್ ಕೋರ್ಸ್ ಗೆ ಆತನಿಗೆ ಪ್ರವೇಶ ಕಲ್ಪಿಸುವುದಕ್ಕೆ ಸೂಚನೆ ನೀಡಿದ್ದು, ಇಂತಹ ಯುವ ಪ್ರತಿಭಾನ್ವಿತ ಯುವಕರು ಬಿಟ್ಟು ಹೋಗುವುದಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ನ್ಯಾ.ಡಿವೈ ಚಂದ್ರಚೂಡ್ ಹಾಗೂ ನ್ಯಾ. ಜೆಬಿ ಪರ್ದಿವಾಲ ಹಾಗೂ ನ್ಯಾ. ಮನೋಜ್ ಮಿಶ್ರಾ ಅವರಿದ್ದ ಪೀಠ ಹೇಳಿದೆ.
ಅತುಲ್ ಕುಮಾರ್ ಗೆ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಬಿಟೆಕ್ ಕೋರ್ಸ್‌ಗೆ ಪ್ರವೇಶ ನೀಡುವುದಕ್ಕೆ ಐಐಟಿ ಧನ್‌ಬಾದ್‌ಗೆ ಸೂಚನೆ ನೀಡಲು ಉನ್ನತ ನ್ಯಾಯಾಲಯ ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ತನ್ನ ಅಸಾಮಾನ್ಯ ಅಧಿಕಾರವನ್ನು ಬಳಸಿದೆ. "ಪ್ರವೇಶವನ್ನು ಪಡೆಯಲು ಎಲ್ಲಾ ಅರ್ಹತೆ ಪಡೆದ ಗುಂಪಿಗೆ ಸೇರಿದ ಅರ್ಜಿದಾರರಂತಹ ಪ್ರತಿಭಾವಂತ ವಿದ್ಯಾರ್ಥಿಯನ್ನು ಬಿಡಬಾರದು ಎಂದು ನಾವು ಭಾವಿಸುತ್ತೇವೆ ಎಂದು ಕೋರ್ಟ್ ಹೇಳಿದೆ.
ಐಐಟಿ ಧನ್‌ಬಾದ್‌ಗೆ ಅಭ್ಯರ್ಥಿಗೆ ಪ್ರವೇಶ ನೀಡುವಂತೆ ನಾವು ನಿರ್ದೇಶಿಸುತ್ತೇವೆ ಮತ್ತು ಶುಲ್ಕವನ್ನು ಪಾವತಿಸಿದರೆ ಅವರಿಗೆ ಪ್ರವೇಶ ನೀಡಲಾಗುತ್ತಿದ್ದ ಅದೇ ಬ್ಯಾಚ್‌ನಲ್ಲಿ ಪ್ರವೇಶ ಕಲ್ಪಿಸಬೇಕು, ”ಎಂದು ಪೀಠ ಆದೇಶದಲ್ಲಿ ಹೇಳಿದೆ. ನ್ಯಾಯದ ಹಿತದೃಷ್ಟಿಯಿಂದ ಯಾವುದೇ ಆದೇಶವನ್ನು ಹೊರಡಿಸಲು ನ್ಯಾಯಾಲಯಕ್ಕೆ ಸಂವಿಧಾನದ 142 ನೇ ವಿಧಿ ಉನ್ನತ ಅಧಿಕಾರವನ್ನು ನೀಡುತ್ತದೆ.
18 ವರ್ಷದ ಅತುಲ್ ಕುಮಾರ್ ಪೋಷಕರು ಜೂನ್ 24 ರೊಳಗೆ ಸ್ವೀಕಾರ ಶುಲ್ಕವಾಗಿ ರೂ 17,500 ಠೇವಣಿ ಮಾಡಲು ವಿಫಲರಾಗಿದ್ದರು.
Advertisement