ಯುಪಿಎ ಬಿಟ್ಟ ಸವಾಲುಗಳನ್ನು ಎನ್‌ಡಿಎ ದಿಟ್ಟವಾಗಿ ಎದುರಿಸಿದೆ: ದೇಶದ ಆರ್ಥಿಕತೆ ಕುರಿತು 'ಶ್ವೇತಪತ್ರ' ಮಂಡಿಸಿದ ನಿರ್ಮಲಾ ಸೀತಾರಾಮನ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಲೋಕಸಭೆಯಲ್ಲಿ 'ದೇಶದ ಆರ್ಥಿಕ ಪರಿಸ್ಥಿತಿ ಕುರಿತ ಶ್ವೇತಪತ್ರ'ವನ್ನು ಮಂಡಿಸಿದರು. ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತ 2004 ಮತ್ತು 2014 ರ ನಡುವೆ 10 ವರ್ಷಗಳ ವರ್ಷಗಳ ಅಧಿಕಾರಾವಧಿಯಲ್ಲಿ ರಾಷ್ಟ್ರ ಜಾಗತಿಕವಾಗಿ ಐದು ಆರ್ಥಿಕತೆಗಳ ಗುಂಪಿಗೆ ಸೇರಿದೆ ಎಂದು ಸರ್ಕಾರ ಪ್ರತಿಪಾದಿಸಿದೆ.
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Updated on

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಲೋಕಸಭೆಯಲ್ಲಿ 'ದೇಶದ ಆರ್ಥಿಕ ಪರಿಸ್ಥಿತಿ ಕುರಿತ ಶ್ವೇತಪತ್ರ'ವನ್ನು ಮಂಡಿಸಿದರು. ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತ 2004 ಮತ್ತು 2014 ರ ನಡುವೆ 10 ವರ್ಷಗಳ ವರ್ಷಗಳ ಅಧಿಕಾರಾವಧಿಯಲ್ಲಿ ರಾಷ್ಟ್ರ ಜಾಗತಿಕವಾಗಿ ಐದು ಆರ್ಥಿಕತೆಗಳ ಗುಂಪಿಗೆ ಸೇರಿದೆ ಎಂದು ಸರ್ಕಾರ ಪ್ರತಿಪಾದಿಸಿದೆ.

ಒಂದು ದಶಕದಲ್ಲಿ ಯುಪಿಎ ಸರ್ಕಾರ ಬಿಟ್ಟುಹೋದ ಸವಾಲುಗಳನ್ನು ಎನ್ ಡಿಎ ಸರ್ಕಾರ ಯಶಸ್ವಿಯಾಗಿ ನಿವಾರಿಸಿದೆ ಮತ್ತು ಭಾರತವನ್ನು ಸುಸ್ಥಿರ ಉನ್ನತ ಬೆಳವಣಿಗೆಯ ಹಾದಿಯಲ್ಲಿ ಇರಿಸಲು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಶ್ವೇತಪತ್ರದಲ್ಲಿ ತಿಳಿಸಲಾಗಿದೆ.

2014 ರಲ್ಲಿ ಮೋದಿ ಸರ್ಕಾರ ಅಧಿಕಾರ ವಹಿಸಿಕೊಂಡಾಗ, ಆರ್ಥಿಕತೆಯು "ದುರ್ಬಲ ಸ್ಥಿತಿಯಲ್ಲಿತ್ತು. ಸಾರ್ವಜನಿಕ ಹಣಕಾಸು ಕೆಟ್ಟ ಸ್ಥಿತಿಯಲ್ಲಿತ್ತು. ಹಣಕಾಸು ನಿರ್ವಹಣೆ ಸರಿಯಿರಲಿಲ್ಲ, ಹಣಕಾಸು ಆಶಿಸ್ತು ಮತ್ತು ವ್ಯಾಪಕ ಭ್ರಷ್ಟಾಚಾರವಿತ್ತು.ಇದು ಬಿಕ್ಕಟ್ಟಿನ ಪರಿಸ್ಥಿತಿಯಾಗಿತ್ತು. ಆರ್ಥಿಕತೆಯನ್ನು ಹಂತ ಹಂತವಾಗಿ ಸರಿಪಡಿಸುವ ಮತ್ತು ಆಡಳಿತ ವ್ಯವಸ್ಥೆಗಳನ್ನು ಕ್ರಮಬದ್ಧಗೊಳಿಸುವ ಜವಾಬ್ದಾರಿಯು ಅಗಾಧವಾಗಿತ್ತು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿದ  59 ಪುಟಗಳ ಶ್ವೇತಪತ್ರದಲ್ಲಿ ಹೇಳಲಾಗಿದೆ. 

ಸರ್ಕಾರದ ಶ್ವೇತಪತ್ರದ ಪ್ರಕಾರ, 2014 ರಲ್ಲಿ ಭಾರತೀಯ ಆರ್ಥಿಕತೆಯು "ಬಿಕ್ಕಟ್ಟಿನಲ್ಲಿತ್ತು. ಆ ಸಮಯದಲ್ಲಿ ಶ್ವೇತಪತ್ರವನ್ನು ಬಿಡುಗಡೆ ಮಾಡಿದ್ದರೆ "ನಕಾರಾತ್ಮಕ ನಿರೂಪಣೆ" ಮತ್ತು "ಹೂಡಿಕೆದಾರರ ವಿಶ್ವಾಸವನ್ನು ಅಲುಗಾಡಿಸುವಂತಿತ್ತು. ಎನ್ ಡಿಎ ಸರ್ಕಾರ ರಾಜಕೀಯ ಮತ್ತು  ಸ್ಥಿರತೆಯ ಲಾಭವನ್ನು ಪಡೆದುಕೊಂಡಿದ್ದು,  ಹಿಂದಿನ ಯುಪಿಎ ಆಡಳಿತಕ್ಕಿಂತ ಭಿನ್ನವಾಗಿ ಹೆಚ್ಚಿನ ಆರ್ಥಿಕ ಒಳಿತು ಸಾಧಿಸುವ ಗುರಿಯೊಂದಿಗೆ "ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿತು. ಯುಪಿಎ ಸರ್ಕಾರ ಆರ್ಥಿಕ ಚಟುವಟಿಕೆಗಳನ್ನು ಸುಗಮಗೊಳಿಸಲು "ದಯನೀಯವಾಗಿ ವಿಫಲವಾಗಿ, ಆರ್ಥಿಕ ಅಭಿವೃದ್ಧಿಗೆ ಅಡೆತಡೆಗಳನ್ನು ಸೃಷ್ಟಿಸಿತ್ತು ಎಂದು ಶ್ವೇತಪತ್ರ ಹೇಳಿದೆ.

ಎನ್ ಡಿಎ ಸರ್ಕಾರದ ಆರ್ಥಿಕ ನಿರ್ವಹಣೆ ಹಾಗೂ ಉತ್ತಮ ಆಡಳಿತದಿಂದಾಗಿ 2014ರ ಹಿಂದಿನ ಯುಗದಲ್ಲಿನ ಎಲ್ಲಾ ಸವಾಲುಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಲ್ಲಲಾಗಿದೆ. 2047ರೊಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಬೇಕಾಗಿರುವುದಿಂದ ಅನೇಕ ಕ್ರಮ ಕೈಗೊಳ್ಳಲಾಗಿದೆ. ಯುದ್ಧ ವಿಮಾನಗಳು, ಜಲಾಂತರ್ಗಾಮಿ ನೌಕೆಗಳು, ರಾತ್ರಿ ಹೋರಾಟದ ಗೇರ್‌ಗಳು ಮತ್ತು ವಿವಿಧ ಉಪಕರಣಗಳ ನವೀಕರಣ ಮತ್ತು ಸ್ವಾಧೀನಕ್ಕೆ ಸರ್ಕಾರದಿಂದ ವಿಳಂಬವಾಗಿರುವುದಾಗಿಯೂ ಶ್ವೇತಪತ್ರದಲ್ಲಿ ಉಲ್ಲೇಖಿಸಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com