ಪಂಜಾಬ್‌: ಪಾಕ್ ಗಡಿಯಲ್ಲಿ ಚೀನಾ ನಿರ್ಮಿತ ಮತ್ತೊಂದು ಡ್ರೋನ್ ಹೊಡೆದುರುಳಿಸಿದ ಬಿಎಸ್ ಎಫ್!

ಪಂಜಾಬ್‌ನ ಗುರುದಾಸ್‌ಪುರದ ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿಯ ಬಳಿ ಗಡಿ ಭದ್ರತಾ ಪಡೆ ಮತ್ತೊಂದು ಚೀನಾ ನಿರ್ಮಿತ ಡ್ರೋನ್ ಅನ್ನು ಹೊಡೆದುರುಳಿಸಿದೆ ಎಂದು ಪಡೆ ಶನಿವಾರ ತಿಳಿಸಿದೆ.
ಹೊಡೆದುರುಳಿಸಲಾದ ಡ್ರೋನ್
ಹೊಡೆದುರುಳಿಸಲಾದ ಡ್ರೋನ್

ಗುರುದಾಸ್ ಪುರ: ಪಂಜಾಬ್‌ನ ಗುರುದಾಸ್‌ಪುರದ ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿಯ ಬಳಿ ಗಡಿ ಭದ್ರತಾ ಪಡೆ ಮತ್ತೊಂದು ಚೀನಾ ನಿರ್ಮಿತ ಡ್ರೋನ್ ಅನ್ನು ಹೊಡೆದುರುಳಿಸಿದೆ ಎಂದು ಪಡೆ ಶನಿವಾರ ತಿಳಿಸಿದೆ.

ಪಾಕಿಸ್ತಾನದಿಂದ ಭಾರತದ ಭೂಪ್ರದೇಶವನ್ನು ಪ್ರವೇಶಿಸುತ್ತಿದ್ದ ಕ್ವಾಡ್‌ಕಾಪ್ಟರ್ ಡ್ರೋನ್ ಗುರುದಾಸ್‌ಪುರ ಜಿಲ್ಲೆಯ ರೊಸ್ಸಿ ಗ್ರಾಮದ ಬಳಿ ಗಡಿಯಲ್ಲಿ ಚಲಿಸುತ್ತಿದ್ದಾಗ ಶುಕ್ರವಾರ ರಾತ್ರಿ ಬಿಎಸ್‌ಎಫ್ ಪಡೆ ಹೊಡೆದುರುಳಿಸಿದೆ. ತ್ವರಿತಗತಿಯಲ್ಲಿ ಡ್ರೋನ್ ಗೆ ಗುಂಡು ಹಾರಿಸಿ ಯಶಸ್ವಿಯಾಗಿ ಧ್ವಂಸಗೊಳಿಸಲಾಯಿತು ಎಂದು ಬಿಎಸ್ ಎಫ್ ತಿಳಿಸಿದೆ.

ಹಾನಿಗೊಳಗಾದ ಡ್ರೋನ್ ನಿಯಂತ್ರಣ ಕಳೆದುಕೊಂಡು ಕೃಷಿ  ಜಮೀನಿನ ಮೇಲೆ ಬಿದ್ದಿತು. ಬೀಳುವ ಪ್ರದೇಶವನ್ನು ತಕ್ಷಣವೇ ಬಿಎಸ್ಎಫ್ ಪಡೆಗಳು ಸುತ್ತುವರೆದಿದ್ದು, ವ್ಯಾಪಕ ಶೋಧವನ್ನು ನಡೆಸಲಾಯಿತು. ಬಳಿಕ ಭಾಗಶಃ ಮುರಿದ ಸ್ಥಿತಿಯಲ್ಲಿ ಒಂದು ಸಣ್ಣ ಡ್ರೋನ್ ಅನ್ನು ಯಶಸ್ವಿಯಾಗಿ ವಶಪಡಿಸಿಕೊಳ್ಳಲಾಯಿತು. ಕೃಷಿ ಭೂಮಿ ಮೇಲೆ ಬಿದ್ದ ಡ್ರೋನ್ ಕ್ವಾಡ್ ಕಾಪ್ಟರ್, ಚೀನಾದಿಂದ ತಯಾರಿಸಲ್ಪಟ್ಟಿದೆ ಎಂದು ಗಡಿ ಭದ್ರತಾ ಪಡೆ ತಿಳಿಸಿದೆ.

ಬಿಎಸ್ಎಫ್ ಪಡೆಗಳ ಅನುಕರಣೀಯ ಶೂಟೌಟ್ ಕೌಶಲ್ಯದೊಂದಿಗೆ ತೀಕ್ಷ್ಣವಾದ ಅವಲೋಕನ ಮತ್ತು ತ್ವರಿತ ಪ್ರತಿಕ್ರಿಯೆಯಿಂದ ಡ್ರೋನ್ ದೇಶದೊಳಗೆ ಪ್ರವೇಶಿಸದಂತೆ ತಡೆಯಲಾಗಿದೆ ಎಂದು ಸೇನೆ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com