ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಹಾಡಿರುವ 'ಪೂಜಿಸಲೆಂದೇ ಹೂಗಳ ತಂದೆ' ಹಾಡಿಗೆ ಪ್ರಧಾನಿ ಮೋದಿ ಮೆಚ್ಚುಗೆ

ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮಲಲ್ಲಾ ಪ್ರಾಣಪ್ರತಿಷ್ಠಾನ ಕಾರ್ಯಕ್ರಮ ನೆರವೇರಲಿದ್ದು, ಅದಕ್ಕೆ ಪೂರ್ವ ತಯಾರಿ ಈಗಾಗಲೇ ನಡೆಯುತ್ತಿವೆ. ರಾಮ ಮಂದಿರ ಉದ್ಘಾಟನೆ ಬಗ್ಗೆ ಹತ್ತು ಹಲವು ವಿಷಯಗಳನ್ನು ಪ್ರಧಾನಿ ಮೋದಿಯವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್
ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್
Updated on

ನವದೆಹಲಿ: ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮಲಲ್ಲಾ ಪ್ರಾಣಪ್ರತಿಷ್ಠಾನ ಕಾರ್ಯಕ್ರಮ ನೆರವೇರಲಿದ್ದು, ಅದಕ್ಕೆ ಪೂರ್ವ ತಯಾರಿ ಈಗಾಗಲೇ ನಡೆಯುತ್ತಿವೆ. ರಾಮ ಮಂದಿರ ಉದ್ಘಾಟನೆ ಬಗ್ಗೆ ಹತ್ತು ಹಲವು ವಿಷಯಗಳನ್ನು ಪ್ರಧಾನಿ ಮೋದಿಯವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಪ್ರತಿದಿನ ಪ್ರಧಾನಿ ಮೋದಿ ಅವರು ಭಗವಾನ್ ರಾಮನ ಸ್ತೋತ್ರವನ್ನು ಟ್ವೀಟ್ ಮಾಡುತ್ತಿದ್ದು, ದಕ್ಷಿಣ ಭಾರತ ಮೂಲದ ಪ್ರಸ್ತುತ ಅಮೆರಿಕದಲ್ಲಿರುವ ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಅವರು ವರ್ಷದ ಹಿಂದೆ ಹಾಡಿ ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದ ಪೂಜಿಸಲೆಂದೆ ಹೂಗಳ ತಂದೆ ಹಾಡಿನ ಯೂಟ್ಯೂಬ್ ಕೊಂಡಿಯನ್ನು ಹಂಚಿಕೊಂಡು ಈ ಹಾಡು ಎಷ್ಟೊಂದು ಸುಮಧುರವಾಗಿದೆ ಮತ್ತು ಶಿವಶ್ರೀಯವರ ನಿರೂಪಣೆ ಕೂಡ ಅದ್ಭುತವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ಕನ್ನಡದ ವರನಟ ಡಾ.ರಾಜ್​ಕುಮಾರ್ ಹಾಗೂ ಕಲ್ಪನಾ ನಟನೆಯ ‘ಎರಡು ಕನಸು’ ಸಿನಿಮಾದ ‘ಪೂಜಿಸಲೆಂದೆ ಹೂಗಳ ತಂದೆ..’ ಹಾಡು ಹಲವರಿಗೆ ಫೇವರಿಟ್. ಈ ಹಾಡನ್ನು ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ತಮ್ಮದೇ ಶೈಲಿಯಲ್ಲಿ ಹಾಡಿ ಯೂಟ್ಯೂಬ್​ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದರು. ಈ ಹಾಡಿನ ಲಿಂಕ್​ನ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಈ ಹಾಡಿನ ಬಗ್ಗೆ ಹಾಗೂ ಶಿವಶ್ರೀ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಯಾರು ಈ ಶಿವಶ್ರೀ?: ಶಿವಶ್ರೀ ಅವರು ಕಲಾವಿದರ ಕುಟುಂಬದಿಂದ ಬಂದವರು. ಅವರಿಗೆ ಸಣ್ಣ ವಯಸ್ಸಿನಿಂದಲೇ ಸಂಗೀತದ ಬಗ್ಗೆ ಒಲವು ಇತ್ತು. ಶಾಸ್ತ್ರೀಯ ಸಂಗೀತ, ಭರತನಾಟ್ಯವನ್ನು ಅವರು ಕಲಿತಿದ್ದಾರೆ. ಶಿವಶ್ರೀ ಅವರ ತಾತ ಖ್ಯಾತ ಸಂಗೀತಕಾರರಾಗಿದ್ದರು. ಶಿವಶ್ರೀ ಅವರ ತಂದೆ ಖ್ಯಾತ ಮೃದಂಗ ವಾದಕ ವಿದ್ವಾನ್ ಸೀರ್ಕಾಜಿ ಜೆ. ಸ್ಕಂದಪ್ರಸಾದ್. ಶಿವಶ್ರೀ ಅವರು ಎ.ಎಸ್. ಮುರಳಿ ಮತ್ತು ಆಚಾರ್ಯ ಚೂಡಾಮಣಿ ಅವರಲ್ಲಿ ಸಂಗೀತ  ಕಲಿತಿದ್ದಾರೆ. ರೋಜಾ ಕಣ್ಣನ್ ಅವರಿಂದ ಭರತನಾಟ್ಯ ತರಬೇತಿ ಪಡೆದಿದ್ದಾರೆ.

ಶಿವಶ್ರೀ ಅವರು ಬಯೋ-ಇಂಜಿನಿಯರಿಂಗ್ ಪದವೀಧರೆ ಆಗಿದ್ದಾರೆ. ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಎಂಎ ಭರತನಾಟ್ಯ ಮತ್ತು ಮದ್ರಾಸ್ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತ ಡಿಪ್ಲೊಮಾ ಪಡೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com