ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ: ಸೋಮವಾರ ಅಯೋಧ್ಯೆಗೆ 100 ಚಾರ್ಟರ್ಡ್ ವಿಮಾನ ಆಗಮನ

ರಾಮ ಮಂದಿರ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಸೋಮವಾರ ಸುಮಾರು 100 ಚಾರ್ಟರ್ಡ್ ವಿಮಾನಗಳು ಹಾಗೂ 50 ಬ್ಯುಸಿನೆಸ್​ ಜೆಟ್‌ ಗಳು ಆಗಮಿಸಿದ್ದವು.
ವಿಶೇಷ ವಿಮಾನದಲ್ಲಿ ಅಯೋಧ್ಯೆಗೆ ಪ್ರಯಾಣಿಸಿದ ಮಾಜಿ ಪ್ರಧಾನಿ ದೇವೇಗಡ ಹಾಗೂ ಕುಟುಂಬ
ವಿಶೇಷ ವಿಮಾನದಲ್ಲಿ ಅಯೋಧ್ಯೆಗೆ ಪ್ರಯಾಣಿಸಿದ ಮಾಜಿ ಪ್ರಧಾನಿ ದೇವೇಗಡ ಹಾಗೂ ಕುಟುಂಬ

ಅಯೋಧ್ಯೆ: ರಾಮ ಮಂದಿರ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಸೋಮವಾರ ಸುಮಾರು 100 ಚಾರ್ಟರ್ಡ್ ವಿಮಾನಗಳು ಹಾಗೂ 50 ಬ್ಯುಸಿನೆಸ್​ ಜೆಟ್‌ ಗಳು ಆಗಮಿಸಿದ್ದವು.

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸುಮಾರು 8,000 ಗಣ್ಯರಿಗೆ ಆಹ್ವಾನ ನೀಡಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ಅಯೋಧ್ಯೆಯ ನೂತನ ರಾಮ ಮಂದಿರದಲ್ಲಿ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು.

ಸೋಮವಾರ ಅಯೋಧ್ಯೆಗೆ ವಿವಿಧ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ 100 ಚಾರ್ಟರ್ಡ್ ವಿಮಾನಗಳನ್ನು ಕಾಯ್ದಿರಿಸಿದ್ದಾರೆ ಮತ್ತು ಅವುಗಳಲ್ಲಿ ಸುಮಾರು 50 ಬ್ಯುಸಿನೆಸ್ ಜೆಟ್‌ಗಳು ಎಂದು ಬ್ಯುಸಿನೆಸ್ ಏರ್‌ಕ್ರಾಫ್ಟ್ ಆಪರೇಟರ್ಸ್ ಅಸೋಸಿಯೇಶನ್ ಅಧ್ಯಕ್ಷ ಕ್ಯಾಪ್ಟನ್ ಆರ್‌ಕೆ ಬಾಲಿ ಅವರು ಹೇಳಿದ್ದಾರೆ.

ಅಯೋಧ್ಯೆ ವಿಮಾನ ನಿಲ್ದಾಣವು ಸೋಮವಾರ ಸುಮಾರು 100 ವಿಮಾನಗಳನ್ನು ನಿರ್ವಹಿಸಿದೆ ಎಂದು ಪ್ರಮುಖ ಖಾಸಗಿ ಜೆಟ್ ಆಪರೇಟರ್‌ನ ಕಾರ್ಯನಿರ್ವಾಹಕರೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com