2024ರ ಚುನಾವಣೆ 'ಹಿಂದೂ ಹೃದಯ ಸಾಮ್ರಾಟ್' ಮೋದಿ vs ಸಾಮಾನ್ಯರ ಸಮಸ್ಯೆ: ThinkEdu ನಲ್ಲಿ ತರೂರ್

2024ರ ಸಾರ್ವತ್ರಿಕ ಚುನಾವಣೆಯು ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಹಿಂದೂ ಹೃದಯ ಸಾಮ್ರಾಟ್’ ಎಂದು ಬಿಂಬಿಸುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಪ್ರಸ್ತಾಪಿಸುತ್ತಿರುವ ಸಾಮಾನ್ಯ ಜನರ ಮೇಲೆ ಪರಿಣಾಮ...
ಥಿಂಕ್‌ಎಡುವಿನಲ್ಲಿ ತರೂರ್
ಥಿಂಕ್‌ಎಡುವಿನಲ್ಲಿ ತರೂರ್
Updated on

ಚೆನ್ನೈ: 2024ರ ಸಾರ್ವತ್ರಿಕ ಚುನಾವಣೆಯು ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಹಿಂದೂ ಹೃದಯ ಸಾಮ್ರಾಟ್’ ಎಂದು ಬಿಂಬಿಸುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಪ್ರಸ್ತಾಪಿಸುತ್ತಿರುವ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ನಡುವಿನ ಘರ್ಷಣೆಯಾಗಿದೆ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಶಶಿ ತರೂರ್ ಅವರು ಬುಧವಾರ ಹೇಳಿದ್ದಾರೆ.

ಇಂದು ಚೆನ್ನೈನಲ್ಲಿ SASTRA ವಿಶ್ವವಿದ್ಯಾಲಯ ಪ್ರಸ್ತುತಪಡಿಸಿದ ಎರಡು ದಿನಗಳ ಥಿಂಕ್‌ಎಡು ಕಾನ್‌ಕ್ಲೇವ್ 2024 ರಲ್ಲಿ ಮಾತನಾಡಿದ ಶಶಿ ತರೂರ್, ದೇಶದ ಆರ್ಥಿಕ ಸ್ಥಿತಿಯನ್ನು ಗಮನಿಸಿದರೆ ಸಾಮಾನ್ಯ ಜನ ಒಂದು ದಶಕದ ಹಿಂದಿನ ಸ್ಥಿತಿಗಿಂತ ಈಗ ಉತ್ತಮವಾಗಿದ್ದಾರೆಯೇ? ಎಂದು ಪ್ರಶ್ನಿಸಿದರು ಮತ್ತು ಹೆಚ್ಚುತ್ತಿರುವ ನಿರುದ್ಯೋಗ ಹಾಗೂ ಹಣದುಬ್ಬರದ ಸಂಪೂರ್ಣ ವಾಸ್ತವತೆಯ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸಿದರು.

"ಪ್ರಪಂಚದ ಪ್ರಮುಖ ಆರ್ಥಿಕತೆಗಳಲ್ಲಿ ಭಾರತ ಅತಿದೊಡ್ಡ ಆರ್ಥಿಕ ಬೆಳವಣಿಗೆ ಸಾಧಿಸುತ್ತಿದೆ ಎಂದು ಕೇಂದ್ರ ಸರ್ಕಾರ ಹೆಮ್ಮೆಪಡುತ್ತದೆ. ಮತ್ತೊಂದೆಡೆ, ನಿರುದ್ಯೋಗವು ದಾಖಲೆಯ ಕೇಳಮಟ್ಟದಲ್ಲಿದೆ ಮತ್ತು ಹಣದುಬ್ಬರವೂ ಹೆಚ್ಚಿದೆ. ಭಾರತದಲ್ಲಿ ಕೇವಲ 15 ಕೋಟಿ ಬಡವರಿದ್ದಾರೆ ಎಂದು NITI ಆಯೋಗ್ ಹೇಳುತ್ತದೆ. ಆದರೂ ದೇಶದ 81 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡಬೇಕಾಗಿದೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಭಾರತ ವೈವಿಧ್ಯಮಯ ಪ್ರಜಾಪ್ರಭುತ್ವವನ್ನು ಹೊಂದಿದೆ. ಜಾತಿ, ಧರ್ಮ, ಧರ್ಮ, ಭಾಷೆ, ಪ್ರದೇಶ ಅಥವಾ ಚರ್ಮದ ಬಣ್ಣವನ್ನು ಲೆಕ್ಕಿಸದೆ ಪ್ರತಿಯೊಬ್ಬ ನಾಗರಿಕರನ್ನು ಬಿಜೆಪಿ ಸಮಾನವಾಗಿ ಪರಿಗಣಿಸುವುದಿಲ್ಲ ಎಂದು ತರೂರ್ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com