
ತಿರುಮಲ: ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಹಾಗೂ ತಂಪು ಪಾನೀಯ ಮೇಲಿನ ನಿರ್ಬಂಧವನ್ನು ರದ್ದುಗೊಳಿಸಬೇಕೆಂಬ ಬೇಡಿಕೆ ಹೆಚ್ಚುತ್ತಿರುವ ನಡುವೆ ಟೆಟ್ರಾ ಪ್ಯಾಕ್ ನೀರಿನ ಬಾಟಲಿ ಬಿಡುಗಡೆ ತಿರುಮಲ ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿ (TTD) ಮುಂದಾಗಿದೆ. ಈಗಿರುವ ಗಾಜಿನ ನೀರಿನ ಬಾಟಲಿಗಳನ್ನು ಬದಲಾಯಿಸಲು ಟಿಟಿಡಿ ಚಿಂತಿಸುತ್ತಿದೆ ಎನ್ನಲಾಗಿದೆ.
ಏಳು ಬೆಟ್ಟಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವು ಆತಂಕಕಾರಿ ಮಟ್ಟವನ್ನು ತಲುಪಿದೆ ಎಂದು ಅಧಿಕೃತ ವರದಿಗಳು ಹೇಳಿವೆ. ವಾರದ ದಿನಗಳಲ್ಲಿ ಸುಮಾರು ಒಂದು ಲಕ್ಷ ಪ್ಲಾಸ್ಟಿಕ್ ಬಾಟಲಿಗಳು ಮತ್ತು ವಾರಾಂತ್ಯದಲ್ಲಿ 1.25 ಲಕ್ಷ ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆಯಲಾಗುತಿತ್ತು.
ಇದಕ್ಕೆ ಪ್ರತಿಯಾಗಿ ದೇವಾಲಯದ ಪರಿಸರವನ್ನು ಕಾಪಾಡಲು ಟಿಟಿಡಿ ಪಿಇಟಿ ಬಾಟಲಿಗಳು, ಕ್ಯಾರಿ ಬ್ಯಾಗ್‌ಗಳು, ಸ್ಯಾಚೆಟ್‌ಗಳು ಮತ್ತಿತರ ಪ್ಲಾಸ್ಟಿಕ್ ವಸ್ತುಗಳು ಒಳಗೊಂಡಂತೆ ಸಂಪೂರ್ಣ ಪ್ಲಾಸ್ಟಿಕ್ ನಿಷೇಧವನ್ನು ಜಾರಿಗೆ ತಂದಿತು.ಆ ಸಮಯದಲ್ಲಿ ಟಿಟಿಡಿ, ವೆಗೆಸ್ನಾ ಫೌಂಡೇಶನ್ ಸಹಯೋಗದೊಂದಿಗೆ, ವಿವಿಧ ಸಭೆಗಳ ನಂತರ ನಿರಂತರ ಕುಡಿಯುವ ನೀರನ್ನು ಒದಗಿಸಲು ಜಲ ಪ್ರಸಾದ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಿತು. ನಂತರ, ಟಿಟಿಡಿ ತಿರುಮಲದಲ್ಲಿ ಗಾಜಿನ ಬಾಟಲಿಯ ಕುಡಿಯುವ ನೀರಿಗೆ ಮಾತ್ರ ಅವಕಾಶ ನೀಡಿತು.
ಪ್ರಸ್ತುತ, ತಿರುಮಲದಲ್ಲಿ ದಿನಕ್ಕೆ ಸುಮಾರು 50,000 ಲೀಟರ್ ಬಾಟಲಿ ನೀರು ಮಾರಾಟವಾಗುತ್ತದೆ. ಪ್ರತಿದಿನ ಐದು ಟ್ರಕ್ ಗಾಜಿನ ನೀರಿನ ಬಾಟಲಿಗಳಿಗೆ ಟಿಟಿಡಿ ಅನುಮತಿ ನೀಡಿದೆ. ಇದು ವಾರಾಂತ್ಯದಲ್ಲಿ ದುಪ್ಪಟ್ಟಾಗುವ ಸಾಧ್ಯತೆಯಿದೆ.ಹಿಂದಿನ YSRP ಸರ್ಕಾರದ ಅವಧಿಯಲ್ಲಿ ಆಡಳಿತ ಪಕ್ಷಕ್ಕೆ ನಿಕಟವಾಗಿರುವ ನಾಯಕರು ಗಾಜಿನ ಬಾಟಲಿ ಪೂರೈಕೆ ವ್ಯವಹಾರವನ್ನು ನಿಯಂತ್ರಿಸಿದ್ದರೆ, ಟಿಡಿಪಿ ನಾಯಕರು ಈಗ ಅದನ್ನೇ ಮುಂದುವರಿಸುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳುತ್ತವೆ.
ಪ್ಲಾಸ್ಟಿಕ್ ನೀರಿನ ಬಾಟಲಿಗಳು ಮತ್ತು ತಂಪು ಪಾನೀಯಗಳ ಮರುಪರಿಚಯಕ್ಕೆ ಲಾಬಿ ಹೆಚ್ಚುತ್ತಿರುವಂತೆಯೇ, TTD ಯ ಕಾರ್ಯನಿರ್ವಾಹಕ ಅಧಿಕಾರಿ (EO) ಮತ್ತು ಹೆಚ್ಚುವರಿ EO ಜೈವಿಕ ವಿಘಟನೀಯ ಪ್ಯಾಕೇಜಿಂಗ್ ಕಂಪನಿಗಳನ್ನು ಆಹ್ವಾನಿಸಿದ್ದಾರೆ.
ಮೂರು ಹೊಸ ಕಂಪನಿಗಳು ಪ್ಯಾಕೇಜಿಂಗ್ ಕುರಿತು ಪ್ರಾತ್ಯಕ್ಷಿಕೆ ನೀಡಿವೆ. ಅವುಗಳಲ್ಲಿ ಒಂದನ್ನು ಶೀಘ್ರದಲ್ಲೇ ಅಂತಿಮಗೊಳಿಸಬಹುದು. ತಿರುಮಲದಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಮರು ಪರಿಚಯಿಸುವ ಸಾಧ್ಯತೆಯಿಲ್ಲ" ಎಂದು ಹಿರಿಯ ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಯ್ಯ ಚೌಧರಿ ಸ್ಪಷ್ಟಪಡಿಸಿದ್ದಾರೆ.
Advertisement