ಲೋಕಸಭೆಯಲ್ಲಿ ವಕ್ಫ್ ಮಸೂದೆ ಅಂಗೀಕಾರ ವಿರೋಧಿಸಿ ಡಿಎಂಕೆ ಸುಪ್ರೀಂ ಕೋರ್ಟ್ ಮೊರೆ: ಎಂ.ಕೆ ಸ್ಟಾಲಿನ್

ದೇಶದಲ್ಲಿ ಬಹುಸಂಖ್ಯಾತ ಪಕ್ಷಗಳ ವಿರೋಧದ ಹೊರತಾಗಿಯೂ ಕೆಲವು ಮಿತ್ರಪಕ್ಷಗಳ ಆದೇಶದ ಮೇರೆಗೆ ತಿದ್ದುಪಡಿಯನ್ನು ಅಂಗೀಕರಿಸುವುದು ಸಂವಿಧಾನದ ರಚನೆಯ ಮೇಲಿನ ದಾಳಿ ಎಂದು ಹೇಳಿದ್ದಾರೆ.
Tamil Nadu Chief Minister MK Stalin speaks in the state assembly in Chennai, Thursday, April 3, 2025.
ಕಪ್ಪು ಬ್ಯಾಡ್ಜ್ ಧರಿಸಿ ಬಂದು ತಮಿಳು ನಾಡು ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್
Updated on

ಚೆನ್ನೈ: ಲೋಕಸಭೆಯಲ್ಲಿ ವಕ್ಫ್ ಮಸೂದೆ ಅಂಗೀಕಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್, ನಮ್ಮ ಪಕ್ಷವು ಮಸೂದೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಲಿದೆ ಎಂದು ತಿಳಿಸಿದ್ದಾರೆ.

ವಕ್ಫ್ ಮಸೂದೆ ಅಂಗೀಕಾರವನ್ನು ವಿರೋಧಿಸಿ ಕಪ್ಪು ಬ್ಯಾಡ್ಜ್ ಧರಿಸಿ ವಿಧಾನಸಭೆಗೆ ಬಂದ ಸಿಎಂ ಸ್ಟಾಲಿನ್, ದೇಶದಲ್ಲಿ ಬಹುಸಂಖ್ಯಾತ ಪಕ್ಷಗಳ ವಿರೋಧದ ಹೊರತಾಗಿಯೂ ಕೆಲವು ಮಿತ್ರಪಕ್ಷಗಳ ಆದೇಶದ ಮೇರೆಗೆ ತಿದ್ದುಪಡಿಯನ್ನು ಅಂಗೀಕರಿಸುವುದು ಸಂವಿಧಾನದ ರಚನೆಯ ಮೇಲಿನ ದಾಳಿ ಎಂದು ಹೇಳಿದ್ದಾರೆ.

ಇದು ಧಾರ್ಮಿಕ ಸಾಮರಸ್ಯವನ್ನು ಕದಡುವ ಕೃತ್ಯ. ಇದನ್ನು ಎತ್ತಿ ತೋರಿಸಲು, ನಾವು ಇಂದಿನ ವಿಧಾನಸಭೆ ಕಲಾಪಗಳಲ್ಲಿ ಕಪ್ಪು ಬ್ಯಾಡ್ಜ್ ಧರಿಸಿ ಭಾಗವಹಿಸುತ್ತಿದ್ದೇವೆ ಎಂದು ಸದನ ಸದಸ್ಯರಿಗೆ ತಿಳಿಸಿದ್ದಾರೆ.

ಈ ವಿವಾದಾತ್ಮಕ ತಿದ್ದುಪಡಿಯ ವಿರುದ್ಧ ಡಿಎಂಕೆ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಾಗುವುದು. ವಕ್ಫ್ ಮಂಡಳಿಯ ಸ್ವಾಯತ್ತತೆಯನ್ನು ನಾಶಪಡಿಸುವ ಮತ್ತು ಅಲ್ಪಸಂಖ್ಯಾತ ಮುಸ್ಲಿಂ ಜನಸಂಖ್ಯೆಗೆ ಬೆದರಿಕೆ ಹಾಕುವ ಕೇಂದ್ರ ಸರ್ಕಾರದ ಕಾನೂನಿನ ವಿರುದ್ಧ ತಮಿಳುನಾಡು ಹೋರಾಡಲಿದೆ ಎಂದು ಸ್ಟಾಲಿನ್ ಹೇಳಿದಾಗ ಡಿಎಂಕೆ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.

Tamil Nadu Chief Minister MK Stalin speaks in the state assembly in Chennai, Thursday, April 3, 2025.
ವಕ್ಫ್ ಮಸೂದೆ ಮುಸ್ಲಿಮರ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತದೆ ಎಂಬ ವದಂತಿ ಹರಡಲಾಗುತ್ತಿದೆ: ಅಮಿತ್ ಶಾ

ಪ್ರಸ್ತಾವಿತ ತಿದ್ದುಪಡಿಯು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಜೊತೆಗೆ ಭಾರತದ ಧಾರ್ಮಿಕ ಸಾಮರಸ್ಯದ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಅದರ ವಿರುದ್ಧ ಮಾರ್ಚ್ 27 ರಂದು ರಾಜ್ಯ ವಿಧಾನಸಭೆಯು ಈಗಾಗಲೇ ನಿರ್ಣಯವನ್ನು ಅಂಗೀಕರಿಸಿದೆ ಎಂದು ಹೇಳಿದರು.

232 ಸಂಸದರು ವಿರುದ್ಧ ಮತ ಚಲಾಯಿಸಿದರೂ ವಕ್ಫ್ ಕಾಯ್ದೆಯ ತಿದ್ದುಪಡಿಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಿದರು. ಕೇವಲ 288 ಸದಸ್ಯರು ಮಾತ್ರ ಅದರ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಹೇಳಿದರು.

ಈ ಮಸೂದೆಯನ್ನು ಕೇವಲ ವಿರೋಧಿಸುವುದು ಮಾತ್ರವಲ್ಲ, ಸಂಪೂರ್ಣವಾಗಿ ಹಿಂಪಡೆಯಬೇಕು ಎಂಬುದು ನಮ್ಮ ನಿಲುವಾಗಿದೆ ಎಂದರು.

Tamil Nadu Chief Minister MK Stalin speaks in the state assembly in Chennai, Thursday, April 3, 2025.
Watch | ವಕ್ಫ್ ತಿದ್ದುಪಡಿ ಮಸೂದೆ ಮಂಡನೆ: ಹಿಂದುಳಿದ ಮುಸ್ಲಿಮರು, ಮಹಿಳೆಯರಿಗೂ ಸ್ಥಾನ!

ಬಹುಪಾಲು ಪಕ್ಷಗಳ ವಿರೋಧದ ಹೊರತಾಗಿಯೂ ಕೆಲವೇ ಕೆಲವು ಸಮ್ಮಿಶ್ರ ಪಕ್ಷಗಳ ಬೆಂಬಲದೊಂದಿಗೆ ನಸುಕಿನ ಜಾವ 2 ಗಂಟೆಗೆ ಮಸೂದೆಯನ್ನು ಅಂಗೀಕರಿಸುವುದು ಸಂವಿಧಾನದ ಮೇಲಿನ ದಾಳಿ ಎಂದು ಅವರು ಆರೋಪಿಸಿದರು. ಈ ಕ್ರಮವು ಕೋಮು ಸಾಮರಸ್ಯವನ್ನು ಕದಡುತ್ತದೆ ಎಂದು ಟೀಕಿಸಿದರು. ಇದನ್ನು ವಿರೋಧಿಸಿ ಇಂದು ಕಪ್ಪು ಬ್ಯಾಡ್ಜ್ ಧರಿಸಿದ್ದೇವೆ ಎಂದರು.

ಮಸೂದೆಯು ವಕ್ಫ್ ಮಂಡಳಿಯ ಸ್ವಾಯತ್ತತೆಯನ್ನು ನಾಶಪಡಿಸಿ ಮುಸ್ಲಿಂ ಸಮುದಾಯಕ್ಕೆ ಬೆದರಿಕೆ ಹಾಕುತ್ತದೆ ಎಂದು ಆರೋಪಿಸಿದ ಅವರು, ತಮಿಳುನಾಡು ಇದರ ವಿರುದ್ಧ ಹೋರಾಟ ಮಾಡಿ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ನಾವು ಕಾನೂನು ಕ್ರಮಗಳ ಮೂಲಕ ಮಸೂದೆಯನ್ನು ತಡೆಯುತ್ತೇವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com