Casual Images
ಸಾಂದರ್ಭಿಕ ಚಿತ್ರ

ಮಧ್ಯಪ್ರದೇಶ: ನವವಿವಾಹಿತೆ ಅಪಹರಿಸಿ ಗ್ಯಾಂಗ್ ರೇಪ್; 8 ಕಿರಾತಕರಿಗೆ ಜೀವಾವಧಿ ಶಿಕ್ಷೆ

2024 ಅಕ್ಟೋಬರ್ 21 ರಂದು ನವ ವಿವಾಹಿತ ದಂಪತಿಯನ್ನು ಅಪರಾಧಿಗಳು ಅಪಹರಿಸಿದ್ದರು. ಅವರಲ್ಲಿ ಆರು ಮಂದಿ ಪತಿ ಮುಂದೆಯೇ ಅತ್ಯಾಚಾರ ಮಾಡಿದ್ದರು.
Published on

ರೇವಾ: ಪತಿಯೊಂದಿಗೆ ಹೊರಗೆ ಹೋಗಿದ್ದ ನವ ವಿವಾಹಿತೆಯನ್ನು ಅಪಹರಿಸಿ ಗ್ಯಾಂಗ್ ರೇಪ್ ನಡೆಸಿದ್ದ 8 ಜನರಿಗೆ ಮಧ್ಯಪ್ರದೇಶದ ರೇವಾದ ಸ್ಥಳೀಯ ನ್ಯಾಯಾಲಯವೊಂದು ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರತಿಯೊಬ್ಬ ಅಪರಾಧಿಗೂ ತಲಾ ರೂ. 2,30,000 ದಂಡ ವಿಧಿಸಿದೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಈ ಘಟನೆ ನಡೆದಿತ್ತು.

ಎಂಟು ಆರೋಪಿಗಳನ್ನು ತಪಿತಸ್ಥರೆಂದು ಪರಿಗಣಿಸಿದ ನ್ಯಾಲ್ಕನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಪದ್ಮಾ ಜಾತವ್ ಅವರು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ ಎಂದು ಪಬ್ಲಿಕ್ ಪ್ಲಾಸಿಕ್ಯೂಟರ್ ವಿಕಾಸ್ ದ್ವಿವೇದಿ ಸುದ್ದಿಸಂಸ್ಥೆ ಪಿಟಿಐ ಗೆ ತಿಳಿಸಿದ್ದಾರೆ.

ಸಾಕ್ಷ್ಯಗಳು ಹಾಗೂ ಸಾಕ್ಷಿಗಳ ಹೇಳಿಕೆ ಪರಿಶೀಲಿಸಿದ ಬಳಿಕ ಅಪರಾಧಿಗಳು ಜೀವನವಿಡೀ ಜೈಲಿನಲ್ಲಿಯೇ ಇರುತ್ತಾರೆ ಎಂದು ನ್ಯಾಯಾಲಯ ತೀರ್ಪು ನೀಡಿರುವುದಾಗಿ ಅವರು ಹೇಳಿದರು.

Casual Images
ಮಧ್ಯ ಪ್ರದೇಶ: ಕಾಲೇಜು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್! ಅಪ್ರಾಪ್ತ ಸೇರಿ ನಾಲ್ವರ ಬಂಧನ

2024 ಅಕ್ಟೋಬರ್ 21 ರಂದು ನವ ವಿವಾಹಿತ ದಂಪತಿಯನ್ನು ಅಪರಾಧಿಗಳು ಅಪಹರಿಸಿದ್ದರು. ಅವರಲ್ಲಿ ಆರು ಮಂದಿ ಪತಿ ಮುಂದೆಯೇ ಅತ್ಯಾಚಾರ ಮಾಡಿದ್ದರು. ಮದ್ಯ ಸೇವಿಸಿದ್ದ ಕಿರಾತಕರು ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು ಪ್ರಾಸಿಕ್ಯೂಶನ್ ಹೇಳಿದೆ.

ಆರೋಪಿಗಳಿಗೆ ಬಿಎನ್ ಎಸ್ ಸೆಕ್ಷನ್ 70 ( ಸಾಮೂಹಿಕ ಅತ್ಯಾಚಾರ) ಸೇರಿದಂತೆ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com