ಕಳೆದ ವರ್ಷ BJP ಗೆ ಅತಿ ಹೆಚ್ಚು ದೇಣಿಗೆ; BSP ಗೆ ಶೂನ್ಯ! ಕಾಂಗ್ರೆಸ್ ಗೆ ಎಷ್ಟು?

ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್‌ಗಳ (ಎಡಿಆರ್) ವರದಿಯ ಪ್ರಕಾರ ಬಿಜೆಪಿ ಪ್ರಸಕ್ತ ಹಣಕಾಸು ವರ್ಷ ಬಿಜೆಪಿಗೆ ಒಟ್ಟು 8,358 ದೇಣಿಗೆಗಳಿಂದ 2,243 ಕೋಟಿ ರೂ.ಗಳಷ್ಟು ಹಣ ಹರಿದುಬಂದಿದೆ.
BJP
ಬಿಜೆಪಿ online desk
Updated on

ನವದೆಹಲಿ: 2023-24ರ ಹಣಕಾಸು ವರ್ಷದಲ್ಲಿ ರಾಷ್ಟ್ರೀಯ ಪಕ್ಷಗಳು ಬಿಜೆಪಿ ಅತ್ಯಧಿಕ ಮೊತ್ತವನ್ನು ಪಡೆದುಕೊಂಡಿದೆ.

ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್‌ಗಳ (ಎಡಿಆರ್) ವರದಿಯ ಪ್ರಕಾರ ಬಿಜೆಪಿ ಪ್ರಸಕ್ತ ಹಣಕಾಸು ವರ್ಷ ಬಿಜೆಪಿಗೆ ಒಟ್ಟು 8,358 ದೇಣಿಗೆಗಳಿಂದ 2,243 ಕೋಟಿ ರೂ.ಗಳಷ್ಟು ಹಣ ಹರಿದುಬಂದಿದೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮಾಹಿತಿಯ ಆಧಾರದ ಮೇಲೆ ಪ್ರಕಟಗೊಂಡ ವರದಿ 20,000 ರೂ.ಗಿಂತ ಹೆಚ್ಚಿನ ರಾಜಕೀಯ ದೇಣಿಗೆಗಳಲ್ಲಿನ ಪ್ರವೃತ್ತಿಯನ್ನು ವಿವರಿಸಿದೆ. ರಾಷ್ಟ್ರೀಯ ಪಕ್ಷಗಳಿಗೆ ಒಟ್ಟು ಘೋಷಿತ ದೇಣಿಗೆಗಳು 12,547 ಕೊಡುಗೆಗಳಿಂದ 2,544.28 ಕೋಟಿ ರೂ ಹರಿದುಬಂದಿದೆ.

ಬಿಜೆಪಿಯ ಘೋಷಿತ ದೇಣಿಗೆಗಳು ಮಾತ್ರ ಒಟ್ಟು ಶೇಕಡಾ 88 ರಷ್ಟಿದೆ. 1,994 ದೇಣಿಗೆಗಳಿಂದ 281.48 ಕೋಟಿ ರೂ.ಗಳೊಂದಿಗೆ ಕಾಂಗ್ರೆಸ್ ಬಿಜೆಪಿಗಿಂತಲೂ ಬಹಳ ದೂರದಲ್ಲಿದೆ. ಆಮ್ ಆಡ್ಮಿ ಪಾರ್ಟಿ (ಎಎಪಿ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ), ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಇಪಿ)ಗಳಿಗೆ ಸಣ್ಣ ಮೊತ್ತದ ದೇಣಿಗೆ ಬಂದಿದೆ. ಆದರೆ ಬಹುಜನ್ ಸಮಾಜ ಪಕ್ಷ (ಬಿಎಸ್‌ಪಿ) ಮತ್ತೊಮ್ಮೆ 20,000 ರೂ.ಗಳಿಗಿಂತ ಮೇಲ್ಪಟ್ಟ ಮೊತ್ತದ ವಿಭಾಗದಲ್ಲಿ ಶೂನ್ಯ ದೇಣಿಗೆಗಳನ್ನು ದಾಖಲಿಸಿದೆ.

BJP
Tirumala: ತಿರುಪತಿ ಅನ್ನಪ್ರಸಾದ ಟ್ರಸ್ಟ್‌ಗೆ 2,200 ಕೋಟಿ ರೂ ದೇಣಿಗೆ!

"ಕಾರ್ಪೊರೇಟ್/ವ್ಯವಹಾರ ಕ್ಷೇತ್ರಗಳಿಂದ 102 ದೇಣಿಗೆಗಳ ಮೂಲಕ ಕಾಂಗ್ರೆಸ್ ಒಟ್ಟು 190.3263 ಸಿಆರ್ ಮತ್ತು ಎಫ್‌ವೈ 2023-24ರ ಅವಧಿಯಲ್ಲಿ 1,882 ವೈಯಕ್ತಿಕ ದಾನಿಗಳ ಮೂಲಕ 90.899 ಕೋಟಿ ರೂ. ಗಳಿಸಿದೆ.

2023-24ನೇ ಹಣಕಾಸು ವರ್ಷದಲ್ಲಿ ಎಲ್ಲಾ ರಾಷ್ಟ್ರೀಯ ಪಕ್ಷಗಳು ಘೋಷಿಸಿದ ಎಲ್ಲಾ ಕಾರ್ಪೊರೇಟ್ ದೇಣಿಗೆಗಳ ಒಟ್ಟು ಮೊತ್ತಕ್ಕಿಂತ (ರೂ. 197.97 ಕೋಟಿ) ಒಂಬತ್ತು ಪಟ್ಟು ಹೆಚ್ಚು ಅಂದರೆ 2064.58 ಕೋಟಿ ರೂ.ಗಳು ಬಿಜೆಪಿಗೆ ಬಂದಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com