ಹೆರಿಗೆ ನಂತರ ನೋವಿನಲ್ಲೂ Sex ಗೆ ಒತ್ತಾಯ, Escorts ಜೊತೆ ಲೈಂಗಿಕ ಕ್ರಿಯೆಗೆ ಪೀಡನೆ: ಶ್ರೀಮಂತ ಉದ್ಯಮಿ ಪ್ರಸನ್ನ ಶಂಕರ್ ವಿಕೃತ ಮುಖ ಬಿಚ್ಚಿಟ್ಟ ಪತ್ನಿ!

ತನ್ನ ಪತಿ ಲೈಂಗಿಕ ಕಾರ್ಯಕರ್ತರನ್ನು ಆಕರ್ಷಿಸಿ, ಎಸ್ಕಾರ್ಟ್ ಸೆಕ್ಸ್ ಗೆ ಒತ್ತಾಯಿಸಿದ್ದಾರೆ ಎಂಬ ಆರೋಪವನ್ನು ದಿವ್ಯ ಶಶಿಧರ್ ಹೊರಿಸಿದ್ದಾರೆ.
Chennai Techie Prasanna Sankar Case
ಟೆಕ್ಕಿ ಪ್ರಸನ್ನ ಶಂಕರ್ ಮತ್ತು ಪತ್ನಿ ದಿವ್ಯಾonline desk
Updated on

ಚೆನ್ನೈ ಮೂಲದ ಟೆಕ್ಕಿ ಪ್ರಸನ್ನ ಶಂಕರ್ ಪತ್ನಿಯ ವಿರುದ್ಧ ಕಿರುಕುಳ ಆರೋಪ ಮಾಡಿ ಪೊಲೀಸರು ಲಂಚಕ್ಕಾಗಿ ಸತಾಯಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದ ಉದ್ಯಮಿ ಪ್ರಸನ್ನ ಶಂಕರ್ ವಿರುದ್ಧ ಈಗ ಅವರ ಪತ್ನಿ ಗಂಭೀರ ಆರೋಪ ಮಾಡಿದ್ದಾರೆ.

ಮಗನ ಪಾಲನೆಗಾಗಿ ಹೋರಾಟ ನಡೆಯುತ್ತಿರುವ ನಡುವೆ, ಕೋಟ್ಯಾಧಿಪತಿ ತಂತ್ರಜ್ಞಾನ ಉದ್ಯಮಿ ಪ್ರಸನ್ನ ಶಂಕರ್ ತನ್ನ ಪತ್ನಿಯ ಮೇಲೆ ಕಿರುಕುಳದ ಆರೋಪ ಹೊರಿಸಿದ ವಾರಗಳ ನಂತರ, ತನ್ನ ಪತಿ ಲೈಂಗಿಕ ಕಾರ್ಯಕರ್ತರನ್ನು ಆಕರ್ಷಿಸಿ, ಎಸ್ಕಾರ್ಟ್ ಸೆಕ್ಸ್ ಗೆ ಒತ್ತಾಯಿಸಿದ್ದಾರೆ ಎಂಬ ಆರೋಪವನ್ನು ದಿವ್ಯ ಶಶಿಧರ್ ಹೊರಿಸಿದ್ದಾರೆ.

ಫೋರ್ಬ್ಸ್‌ನ ಇತ್ತೀಚಿನ ಅಂದಾಜಿನ ಪ್ರಕಾರ $1.3 ಬಿಲಿಯನ್ ಮೌಲ್ಯದ ರಿಪ್ಲಿಂಗ್ ಸಹ-ಸಂಸ್ಥಾಪಕ ಶಂಕರ್, ತಮ್ಮ ಪತ್ನಿ ದಿವ್ಯಾ ಶಶಿಧರ್ ತಮ್ಮ ಮಗನನ್ನು "ಅಪಹರಿಸಿದ್ದಾರೆ" ಎಂದು ಆರೋಪಿಸಿ ದೂರು ದಾಖಲಿಸಿದ ನಂತರ, ಚೆನ್ನೈ ಕಾನೂನು ಜಾರಿ ಸಂಸ್ಥೆಗಳಿಂದ "ತಪ್ಪಿಸಿಕೊಂಡು ಹೋಗುತ್ತಿದ್ದೇನೆ" ಎಂದು ಇತ್ತೀಚೆಗೆ ಎಕ್ಸ್‌ಗೆ ಹೇಳಿಕೆ ನೀಡಿದ ನಂತರ ಸುದ್ದಿಯಾಗಿದ್ದರು. ಪೊಲೀಸರು "ಯಾವುದೇ ಎಫ್‌ಐಆರ್ ಇಲ್ಲದೆ" ತಮ್ಮ ಸೆಲ್ ಫೋನ್ ಸ್ಥಳ, ಕಾರು, ಯುಪಿಐ ಮತ್ತು ಐಪಿ ವಿಳಾಸವನ್ನು ಅಕ್ರಮವಾಗಿ ಟ್ರ್ಯಾಕ್ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಶಶಿಧರ್ ತಮ್ಮ ಮಗನ ಪಾಲನೆಗಾಗಿ ಹೋರಾಡಲು ಪ್ರಯತ್ನಿಸುತ್ತಿರುವಾಗಲೇ ತನ್ನ ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದರು ಎಂದು ಪ್ರಸನ್ನ ಶಂಕರ್ ಹೇಳಿದ್ದಾರೆ.

ಈಗ ಪ್ರಸನ್ನ ಶಂಕರ್ ಪತ್ನಿಯೂ ಗಂಭೀರ ಆರೋಪ ಮಾಡಿದ್ದು, "ಓಪನ್ ಮ್ಯಾರೇಜ್ (ಮುಕ್ತ ವಿವಾಹೇತರ ಸಂಬಂಧ), ಎಸ್ಕಾರ್ಟ್ ಸೆಕ್ಸ್ ಗಳಿಗೆ ತನ್ನ ಪತಿ ಪೀಡಿಸುತ್ತಿದ್ದರು ಎಂಬ ಅಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಡಿಸೆಂಬರ್ 2019 ರಲ್ಲಿ ಶಶಿಧರ್ ಅವರಿಗೆ ಇಮೇಲ್ ಮಾಡಿದ ಶಂಕರ್, ಛಾಯಾಚಿತ್ರಗಳು ಮತ್ತು ದರಗಳನ್ನು ಕೇಳಲು ಹಲವಾರು ಎಸ್ಕಾರ್ಟ್‌ಗಳನ್ನು ಸಂಪರ್ಕಿಸುವುದಾಗಿ ತಿಳಿಸಿದ್ದರು.

ಶಂಕರ್ ಲೈಂಗಿಕ ಕಾರ್ಯಕರ್ತರನ್ನು ಆಹ್ವಾನಿಸಿದ್ದರು, ವಿವಾಹೇತರ ಸಂಬಂಧಗಳಿಗೆ ಒಪ್ಪಿಕೊಳ್ಳುವಂತೆ ಒತ್ತಡ ಹೇರಿದರು ಮತ್ತು ಗುಪ್ತವಾಗಿ ರೆಕಾರ್ಡ್ ಮಾಡಲು ಅವರ ಮನೆಯಲ್ಲಿ ಕ್ಯಾಮೆರಾಗಳನ್ನು ಇರಿಸಿದ್ದರು ಎಂದು ದಿವ್ಯಾ ಶಶಿಧರ್ ಹೇಳಿರುವುದನ್ನು ದಿ ಸ್ಯಾನ್ ಫ್ರಾನ್ಸಿಸ್ಕೋ ಸ್ಟ್ಯಾಂಡರ್ಡ್ ವರದಿ ಮಾಡಿದೆ. ಅವರು ತಮ್ಮ ಹೋರಾಟದ ನೂರಾರು ಪುಟಗಳ ನ್ಯಾಯಾಲಯದ ದಾಖಲೆಗಳು ಮತ್ತು ಇಮೇಲ್‌ಗಳು, ಫೋಟೋಗಳು ಮತ್ತು ಇತರ ದಾಖಲೆಗಳೊಂದಿಗೆ ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದಾರೆ.

Chennai Techie Prasanna Sankar Case
ಹೆಂಡ್ತಿ ಕಾಟ, ಪೊಲೀಸರ ಹಾವಳಿ: Chennai Techie ಅಳಲು; ಅವನೊಬ್ಬ 'ಕಾಮ ಪಿಪಾಸು' ಎಂದ ಪತ್ನಿ; ಜಗತ್ತಿನಲ್ಲೇ ಅತಿ ಹೆಚ್ಚು ಚರ್ಚೆಯಾದ ಕೇಸ್‌!

ಅವರು ದಿ ಸ್ಯಾನ್ ಫ್ರಾನ್ಸಿಸ್ಕೋ ಸ್ಟ್ಯಾಂಡರ್ಡ್ ಗೆ ನೀಡಿದ ಸಂದರ್ಶನದಲ್ಲಿ, ಶಂಕರ್ ತನ್ನ ಅಪಾರ ಸಂಪತ್ತನ್ನು ತೆರಿಗೆಯಿಂದ ರಕ್ಷಿಸಿಕೊಳ್ಳಲು ತನ್ನನ್ನು ಮತ್ತು ಅವರ 9 ವರ್ಷದ ಮಗನನ್ನು ದೇಶದಿಂದ ದೇಶಕ್ಕೆ ಎಳೆದುಕೊಂಡು ಹೋಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ತನ್ನ ಗಂಡನಿಂದ ನಿಯಂತ್ರಿಸಲ್ಪಡುವ ತನ್ನ ಕಷ್ಟವನ್ನು ವಿವರಿಸಿರುವ ದಿವ್ಯಾ ಶಶಿಧರ್ "ನನ್ನ ಜೀವನದ ಅತ್ಯಂತ ಕೆಟ್ಟ ದುಃಸ್ವಪ್ನ ಎಂದರೆ ಅದು 2016 ರಲ್ಲಿ ಹೆರಿಗೆಯಾದ ಕೂಡಲೇ ಶಂಕರ್ ತನ್ನನ್ನು ನೋವಿನಲ್ಲೂ ಲೈಂಗಿಕತೆ"ಗೆ ಒತ್ತಾಯಿಸಿದ್ದರು. ಲೈಂಗಿಕ ಕ್ರಿಯೆ ಪುರುಷರ "ಪ್ರಾಥಮಿಕ ಅಗತ್ಯ" ಎಂದು ಹೇಳಿ ಪೀಡಿಸಿದ್ದರು. ನಿರಾಕರಿಸಿದಾಗ, ಶಂಕರ್ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದರು ಎಂದು ಹೇಳಿದ್ದಾರೆ.

ಲೈಂಗಿಕತೆ ನನಗೆ ಮೂಲಭೂತ ಅಗತ್ಯ. ನೀನು ಅದಕ್ಕೆ ಸಹಕರಿಸಬೇಕು ನೀನು ಎಷ್ಟು ನೋವಿನಲ್ಲಿದ್ದೀಯಾ ಎಂಬುದು ಮುಖ್ಯವಲ್ಲ," ಎಂದು ಪ್ರಸನ್ನ ಶಂಕರ್ ಹೇಳಿದ್ದನ್ನು ದಿವ್ಯಾ ಶಶಿಧರ್ ಬಹಿರಂಗಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com