ಸುಂಕ ಏರಿಕೆಯಿಂದ ಷೇರು ಪೇಟೆ ತತ್ತರ: ಟ್ರಂಪ್ ಭ್ರಮೆ ಕಳಚಿದ್ದು, ಮೋದಿ ಎಲ್ಲಿಯೂ ಕಾಣಿಸುತ್ತಿಲ್ಲ- ರಾಹುಲ್ ಟೀಕೆ

ಭಾರತ ವಾಸ್ತವವನ್ನು ಒಪ್ಪಿಕೊಳ್ಳಬೇಕು ಮತ್ತು ಎಲ್ಲಾ ಭಾರತೀಯರಿಗೆ ಕೆಲಸ ಮಾಡಿ ಚೇತರಿಸಿಕೊಳ್ಳುವ, ಉತ್ಪಾದನಾ ಆಧಾರಿತ ಆರ್ಥಿಕತೆ ನಿರ್ಮಾಣ ಬಿಟ್ಟು ಬೇರೆ ದಾರಿಯಿಲ್ಲ ಎಂದು ಅವರು ಹೇಳಿದ್ದಾರೆ.
Rahul Gandhi
ರಾಹುಲ್ ಗಾಂಧಿ
Updated on

ನವದೆಹಲಿ: ಅಮೆರಿಕದ ಪ್ರತೀಕಾರದ ಸುಂಕದ ಪರಿಣಾಮ ಭಾರತದ ಷೇರು ಮಾರುಕಟ್ಟೆ ತತ್ತರಿಸುವಂತಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭ್ರಮೆಯನ್ನು ಕಳಚಿದ್ದು, ಪ್ರಧಾನಿ ನರೇಂದ್ರ ಮೋದಿ "ಎಲ್ಲಿಯೂ ಕಾಣಿಸುತ್ತಿಲ್ಲ" ಎಂದು ಕಾಂಗ್ರೆಸ್ ರಾಹುಲ್ ಗಾಂಧಿ ಸೋಮವಾರ ವಾಗ್ದಾಳಿ ನಡೆಸಿದ್ದಾರೆ.

ಭಾರತ ವಾಸ್ತವವನ್ನು ಒಪ್ಪಿಕೊಳ್ಳಬೇಕು ಮತ್ತು ಎಲ್ಲಾ ಭಾರತೀಯರಿಗೆ ಕೆಲಸ ಮಾಡಿ ಚೇತರಿಸಿಕೊಳ್ಳುವ, ಉತ್ಪಾದನಾ ಆಧಾರಿತ ಆರ್ಥಿಕತೆ ನಿರ್ಮಾಣ ಬಿಟ್ಟು ಬೇರೆ ದಾರಿಯಿಲ್ಲ ಎಂದು ಅವರು ಹೇಳಿದ್ದಾರೆ.

ಆರ್ಥಿಕತೆಯನ್ನು ನಿಭಾಯಿಸುವ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಟೀಕೆಗಳನ್ನು ಮಾಡುತ್ತಲೇ ಇದೆ. ಬೆಲೆ ಏರಿಕೆ, ಖಾಸಗಿ ಹೂಡಿಕೆ ಮತ್ತು ಕಡಿಮೆ ವೇತನದ ಸಮಸ್ಯೆಗಳು ಸಾಮಾನ್ಯ ಜನರನ್ನು ತೀವ್ರವಾಗಿ ಬಾಧಿಸುತ್ತಿವೆ.

ಈ ತಿಂಗಳ ಆರಂಭದಲ್ಲಿ ವಿರೋಧ ಪಕ್ಷವು ಒಂದು ದಶಕದ ಅವಧಿಯ ನೈಜ ಆದಾಯದ ನಿಶ್ಚಲತೆ, ಸಾಲದ ವಿಸ್ತರಣೆ ಮತ್ತು ತೀವ್ರ ಅಸಮಾನತೆ ಆರ್ಥಿಕತೆಗೆ ಪ್ರಮುಖ ಬೆದರಿಕೆಗಳಾಗಿರುವುದಾಗಿ ಹೇಳಿತ್ತು. ಅವುಗಳನ್ನು ಪ್ರಧಾನಿ ಮೋದಿ ಗಂಭೀರವಾಗಿ ಪರಿಗಣಿಸಲಿಲ್ಲ. ಟ್ರಂಪ್ ಭ್ರಮೆ ಕಳಚಿದ್ದು, ಮೋದಿ ಎಲ್ಲಿಯೂ ಕಾಣಿಸುತ್ತಿಲ್ಲ ಎಂದು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ರಾಹುಲ್ ಗಾಂಧಿ ಫೋಸ್ಟ್ ಮಾಡಿದ್ದಾರೆ.

Rahul Gandhi
Trump ಹುಚ್ಚಾಟಕ್ಕೆ 10 ಸೆಕೆಂಡ್ ಗಳಲ್ಲಿ 20 ಲಕ್ಷ ಕೋಟಿ ರೂ ಉಡೀಸ್! ಭಾರತೀಯ ಮಾರುಕಟ್ಟೆಯಲ್ಲಿ ಕಂಡರಿಯದ ನಷ್ಟ!

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಹೆಚ್ಚಳ ಮತ್ತು ಚೀನಾದ ಪ್ರತೀಕಾರದ ನಂತರ ಸೋಮವಾರ ಸೆನ್ಸೆಕ್ಸ್ 70 ಪಾಯಿಂಟ್ ಕುಸಿತದೊಂದಿಗೆ ರೂ. 2,226 ಅಂಶಗಳಷ್ಟು ಇಳಿಕೆಯೊಂದಿಗೆ ಭಾರತದ ಷೇರು ಮಾರುಕಟ್ಟೆ ಪಾತಾಳಕ್ಕೆ ಕುಸಿದಿತ್ತು. ಬಿಎಸ್‌ಇ ಸೆನ್ಸೆಕ್ಸ್ 79 ಪಾಯಿಂಟ್ ಅಥವಾ ಶೇ. 2,226 ಕುಸಿತದೊಂದಿಗೆ 73,137ರಲ್ಲಿ ವಹಿವಾಟು ಅಂತ್ಯಗೊಳಿಸಿತು. ಮೂರನೇ ದಿನವೂ ತೀವ್ರ ಕುಸಿತವನ್ನು ದಾಖಲಿಸಿದೆ.

NSE ನಿಫ್ಟಿ 742. 85 ಅಂಕಗಳು ಅಥವಾ ಶೇ. 3.24 ರಷ್ಟು ಕುಸಿದು 22,161ರಲ್ಲಿತ್ತು. ಹಿಂದೂಸ್ತಾನ್ ಯೂನಿಲಿವರ್ ಹೊರತುಪಡಿಸಿ ಎಲ್ಲಾ ಸೆನ್ಸೆಕ್ಸ್ ಷೇರುಗಳು ನಷ್ಟದೊಂದಿಗೆ ಕೊನೆಗೊಂಡಿತು. ಟಾಟಾ ಸ್ಟೀಲ್ ಷೇರು ಶೇ. 7. 33 ರಷ್ಟು ಕುಸಿದಿದೆ, ನಂತರ ಲಾರ್ಸೆನ್ ಮತ್ತು ಟೂಬ್ರೋ ಶೇ. 5,78 ರಷ್ಟು ಕಿಸಿದಿದೆ.

ಏಷ್ಯನ್ ಮಾರುಕಟ್ಟೆಗಳಲ್ಲಿ, ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕವು ಶೇಕಡಾ 13 ಕ್ಕಿಂತ ಹೆಚ್ಚು ಕುಸಿದಿದೆ, ಟೋಕಿಯೊದ ನಿಕ್ಕಿ 225 ಶೇಕಡಾ 8 ರಷ್ಟು ಕುಸಿದಿದೆ, ಶಾಂಘೈ ಎಸ್‌ಎಸ್‌ಇ ಕಾಂಪೋಸಿಟ್ ಸೂಚ್ಯಂಕ ಶೇಕಡಾ 7 ಕ್ಕಿಂತ ಕಡಿಮೆಯಾಗಿದೆ ಮತ್ತು ದಕ್ಷಿಣ ಕೊರಿಯಾದ ಕೋಸ್ಪಿ ಶೇಕಡಾ 5 ಕ್ಕಿಂತ ಹೆಚ್ಚು ಕುಸಿದಿದೆ. ಯುರೋಪಿಯನ್ ಮಾರುಕಟ್ಟೆಗಳು ಕೂಡ ಭಾರೀ ಒತ್ತಡಕ್ಕೆ ಒಳಗಾಗಿದ್ದು, ಶೇಕಡಾ 6 ರಷ್ಟು ಕುಸಿತದೊಂದಿಗೆ ವಹಿವಾಟು ನಡೆಸುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com