ವಕ್ಫ್ ಮಸೂದೆ, ಮತಾಂತರ ವಿರೋಧಿ ಕಾನೂನಿಗೆ ಕಾಂಗ್ರೆಸ್ ವಿರೋಧ; ವಿದೇಶಾಂಗ ನೀತಿ 'ದುರ್ಬಲ' ಎಂದ CWC

ನಾವು ಭಾರತವನ್ನು ವಿಭಜಿಸಲು ಬಿಡುವುದಿಲ್ಲ ಅಥವಾ ಅದನ್ನು ವಿಭಜಿಸಲು ಪ್ರಯತ್ನಿಸುವವರು ತಮ್ಮ ಪೈಶಾಚಿಕ ಯೋಜನೆಗಳಲ್ಲಿ ಯಶಸ್ವಿಯಾಗಲು ಅವಕಾಶ ನೀಡುವುದಿಲ್ಲ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯೂಸಿ) ಸಭೆ
ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯೂಸಿ) ಸಭೆ
Updated on

ಅಹಮದಾಬಾದ್: ವಿವಾದಾತ್ಮಕ ವಕ್ಫ್ ಮಸೂದೆ ಮತ್ತು ಮತಾಂತರ ವಿರೋಧಿ ಕಾನೂನುಗಳಿಗೆ ಕಾಂಗ್ರೆಸ್ ತನ್ನ ವಿರೋಧವನ್ನು ಪುನರುಚ್ಚರಿಸಿದ್ದು, ಕೊನೆಯವರೆಗೂ ಧಾರ್ಮಿಕ, ಭಾಷಾ, ಜಾತಿ ಆಧಾರಿತ ಮತ್ತು ಪ್ರಾದೇಶಿಕ ವಿಭಜನೆಯ ರಾಜಕೀಯದ ವಿರುದ್ಧ ಹೋರಾಡಲು ಬದ್ಧ ಎಂದು ಮಂಗಳವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯೂಸಿ) ಸಭೆ ನಿರ್ಣಯ ತೆಗೆದುಕೊಂಡಿದೆ.

"ನಾವು ಭಾರತವನ್ನು ವಿಭಜಿಸಲು ಬಿಡುವುದಿಲ್ಲ ಅಥವಾ ಅದನ್ನು ವಿಭಜಿಸಲು ಪ್ರಯತ್ನಿಸುವವರು ತಮ್ಮ ಪೈಶಾಚಿಕ ಯೋಜನೆಗಳಲ್ಲಿ ಯಶಸ್ವಿಯಾಗಲು ಅವಕಾಶ ನೀಡುವುದಿಲ್ಲ. ನಮ್ಮ ಮಾರ್ಗ ಸ್ಪಷ್ಟವಾಗಿದೆ: ದ್ವೇಷವನ್ನು ಬಿಟ್ಟುಬಿಡಿ, ಭಾರತವನ್ನು ಒಗ್ಗೂಡಿಸಿ" ಎಂದು ನಿರ್ಣಯ ತೆಗೆದುಕೊಂಡಿರುವುದಾಗಿ ಸಿಡಬ್ಲ್ಯೂಸಿಯಲ್ಲಿ ಭಾಗವಹಿಸಿದ್ದವರು ತಿಳಿಸಿದ್ದಾರೆ.

ಮತಾಂತರ ವಿರೋಧಿ ಕಾನೂನು ಮತ್ತು ವಕ್ಫ್ ಮಂಡಳಿಯ ಕಾನೂನು ತಿದ್ದುಪಡಿ ಬಿಜೆಪಿಯ ಧ್ರುವೀಕರಣ ತಂತ್ರದ ಭಾಗವಾಗಿದೆ ಎಂದು ಮೂಲಗಳು ತಿಳಿಸಿವೆ.

ಇದಲ್ಲದೆ, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವೆ ನಿಕಟ ಸಂಬಂಧ ಮುಂದುವರೆಸುವುದನ್ನು ಕಾಂಗ್ರೆಸ್ ಬೆಂಬಲಿಸುತ್ತದೆ. ಆದರೆ ಅದು ಎಂದಿಗೂ ಭಾರತದ ರಾಷ್ಟ್ರೀಯ ಹಿತಾಸಕ್ತಿ ಹಾಳುಮಾಡಬಾರದು ಎಂದು ನಿರ್ಣಯ ಹೇಳಿದೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯೂಸಿ) ಸಭೆ
ಬಿಜೆಪಿಯಿಂದ ಗಾಂಧಿ ಸಂಸ್ಥೆಗಳ ಸ್ವಾಧೀನ ಖಂಡಿಸಿದ ಖರ್ಗೆ, ಮಹಾನ್ ನಾಯಕರ ವಿರುದ್ಧದ ಪಿತೂರಿ ಎದುರಿಸುವುದಾಗಿ ಪ್ರತಿಜ್ಞೆ

ವಿದೇಶಾಂಗ ನೀತಿಯ ವಿಷಯದಲ್ಲಿ, ಚರ್ಚೆಯ ನಂತರ ನಾಳೆ ಅಂಗೀಕರಿಸಬೇಕಾದ ನಿರ್ಣಯದಲ್ಲಿ, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ವಿದೇಶಾಂಗ ನೀತಿಯು ಅತ್ಯಂತ "ದುರ್ಬಲ" ಮತ್ತು "ಅಸಹಾಯಕ" ಎಂದು ಟೀಕಿಸಲಾಗಿದೆ ಮತ್ತು ಇದು "ಸ್ವೀಕಾರಾರ್ಹವಲ್ಲ" ಎಂದು ಹೇಳಿದ್ದಾರೆ.

"ಪ್ರಧಾನಿ ಮೋದಿ ವಾಷಿಂಗ್ಟನ್ ಡಿ.ಸಿ.ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಪ್ರಧಾನಿಯವರ ಸಮ್ಮುಖದಲ್ಲಿ ನಮ್ಮನ್ನು ಸಾರ್ವಜನಿಕವಾಗಿ ಅವಮಾನಿಸಲಾಯಿತು ಮತ್ತು ನಮ್ಮ ದೇಶವನ್ನು 'ಸುಂಕ ದುರುಪಯೋಗ ಮಾಡುವವರು' ಎಂದು ಹಣೆಪಟ್ಟಿ ಕಟ್ಟಲಾಯಿತು. ಭಾರತೀಯ ವಲಸಿಗರನ್ನು ಪ್ರಾಣಿಗಳಂತೆ ನಡೆಸಿಕೊಳ್ಳಲಾಯಿತು ಮತ್ತು ಅಮೆರಿಕದಿಂದ ಕೈಗೆ ಕೋಳಗಳನ್ನು ಹಾಕಿ ಗಡೀಪಾರು ಮಾಡಲಾಯಿತು. ದುರದೃಷ್ಟವಶಾತ್, ವಿದೇಶಾಂಗ ಸಚಿವರು ಸಹ ಸಂಸತ್ತಿನಲ್ಲಿ ಅಮೆರಿಕ ನಮ್ಮ ವಲಸಿಗರ ಮೇಲೆ ನಡೆಸಿದ ಈ ಅಮಾನವೀಯ ವರ್ತನೆಯನ್ನು ಸಮರ್ಥಿಸಿಕೊಂಡರು" ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯೂಸಿ) ಸಭೆ
ಮೋದಿ ತವರು ರಾಜ್ಯದಿಂದಲೇ ದೇಶಕ್ಕೆ ಬಲವಾದ ಸಂದೇಶ ರವಾನಿಸುತ್ತೇವೆ: ಮಲ್ಲಿಕಾರ್ಜುನ ಖರ್ಗೆ

"ಏಪ್ರಿಲ್ 3, 2025 ರಿಂದ, ಅಮೆರಿಕಕ್ಕೆ ರಫ್ತು ಮಾಡುವ ಭಾರತೀಯ ಸರಕುಗಳ ಮೇಲೆ ಶೇ. 27ಕ್ಕೂ ಹೆಚ್ಚು ಸುಂಕವನ್ನು ವಿಧಿಸಿದೆ. ಇದು ಭಾರತದ ವಿದೇಶಿ ವ್ಯಾಪಾರದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಮತ್ತೊಂದೆಡೆ, ಅಮೆರಿಕವು ಅಮೆರಿಕದ ಸರಕುಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಲು ಒತ್ತಾಯಿಸುತ್ತಿದೆ. ವಿಶೇಷವಾಗಿ ಕೃಷಿ, ಮದ್ಯಪಾನ ಪಾನೀಯಗಳು, ಆಟೋಮೊಬೈಲ್‌ಗಳು ಮತ್ತು ಔಷಧೀಯ ವಸ್ತುಗಳಂತಹ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಭಾರತೀಯ ರೈತರಿಗೆ ಮಾತ್ರವಲ್ಲದೆ ನಮ್ಮ ಕ್ರಿಯಾತ್ಮಕ ದೇಶಿ ಆಟೋಮೊಬೈಲ್ ಮತ್ತು ಔಷಧೀಯ ಕೈಗಾರಿಕೆಗಳಿಗೂ ಗಂಭೀರ ಹೊಡೆತ ನೀಡುತ್ತದೆ" ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com