
ಜೈಪುರ: ರಾಜಸ್ಥಾನದ ಜೈಪುರದಲ್ಲಿ ಸೋಮವಾರ ಸಂಜೆ ಭಯಾನಕ ಹಿಟ್ ಅಂಡ್ ರನ್ ಘಟನೆ ನಡೆದಿದೆ. ನಹರ್‌ಗಢ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕಾರು ಚಾಲಕ ಉಸ್ಮಾನ್ ಖಾನ್ ಚಲಾಯಿಸುತ್ತಿದ್ದ ಕಾರೊಂದು ಎದುರುಗಡೆ ಬರುತ್ತಿದ್ದ ಹಲವು ಮೊಬೈಕ್ ಸವಾರರು ಹಾಗೂ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ.
ಪರಿಣಾಮವಾಗಿ ಮೂವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳದಲ್ಲಿದ್ದವರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದಾಗ್ಯೂ, ಕಾರು ನಿಲ್ಲಿಸದೆ ಅಲ್ಲಿಂದ ಪರಾರಿಯಾಗಿದ್ದ ಚಾಲಕ ಉಸ್ಮಾನ್ ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಸಂಪೂರ್ಣ ಅಪಘಾತದ ಸಿಸಿಟಿವಿ ದೃಶ್ಯಾವಳಿ ಸಿಕ್ಕಿದ್ದು, ಕಾರಿನ ಅನಿಯಂತ್ರಿತ ವೇಗ ಮತ್ತು ಡಿಕ್ಕಿಯ ದೃಶ್ಯ ಸ್ಪಷ್ಟವಾಗಿ ಗೋಚರಿಸುತ್ತದೆ. ಪೊಲೀಸರು ಘಟನೆ ಕುರಿತು ಮುಂದಿನ ತನಿಖೆ ಕೈಗೊಂಡಿದ್ದಾರೆ. ಈ ಮಧ್ಯೆ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕೆಂದು ಹಿಂದೂ ಸಮುದಾಯದವರು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.
Advertisement