
ಉತ್ತರ ಪ್ರದೇಶ: ಮದುವೆಗೆ ಕೇವಲ 9 ದಿನಗಳು ಬಾಕಿ ಇರುವಾಗಲೇ ವಧುವಿನ ತಾಯಿಯೊಂದಿಗೆ ವರ ಓಡಿಹೋದ ವಿಚಿತ್ರ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ.
ಓಡಿ ಹೋದ ವರ, ತನ್ನ ಭಾವಿ ಅತ್ತೆಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ ಯಾರಿಗೂ ಅವರಿಬ್ಬರ ಸಂಬಂಧದ ಬಗ್ಗೆ ತಿಳಿದಿರಲಿಲ್ಲ. ವರನೊಂದಿಗೆ ಪರಾರಿಯಾಗುವಾಗ ವಧುವಿನ ತಾಯಿ, ಮಗಳ ಆಭರಣಗಳು ಮತ್ತು ಮದುವೆಗಾಗಿ ಉಳಿಸಿದ್ದ ಹಣವನ್ನೂ ತೆಗೆದುಕೊಂಡು ಹೋಗಿದ್ದಾಳೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಪರಾರಿಯಾದ ಮಹಿಳೆ, ಯುವಕನೊಂದಿಗೆ ತನ್ನ ಮಗಳ ಮದುವೆಯನ್ನು ಮಾಡಿಸಲು ಮುಂದಾಗಿದ್ದಳು. ಮದುವೆಯ ಸಿದ್ಧತೆಗಳ ನೆಪದಲ್ಲಿ ಬಾಯ್ಫ್ರೆಂಡ್ ಆಗಾಗ್ಗೆಮನೆಗೆ ಬರುತ್ತಿದ್ದ. ಆದರೆ, ಯಾರಿಗೂ ಇಬ್ಬರ ಬಗ್ಗೆ ಯಾವುದೇ ಅನುಮಾನ ಬಂದಿರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಆ ಯುವಕ ಮತ್ತು ಭಾವಿ ಅತ್ತೆಯ ನಡುವೆ ಪ್ರಣಯ ಸಂಬಂಧವೂ ಬೆಳೆಯಿತು. ಇದರ ನಡುವೆ ವರನು ತನ್ನ ಭಾವಿ ಅತ್ತೆಗೆ ಮೊಬೈಲ್ ಫೋನ್ ಉಡುಗೊರೆಯಾಗಿ ನೀಡಿದನು. ಆದರೆ, ತಾಯಿ ಮತ್ತು ಮಗನ ನಡುವೆ ಇರುವ ಬಾಂದವ್ಯ ಅಂತ ಎಲ್ಲರೂ ಭಾವಿಸಿದ್ದರು. .
ಏಪ್ರಿಲ್ 16ರಂದು ತನ್ನ ಮಗಳ ವಿವಾಹ ನಡೆಯಬೇಕಿತ್ತು. ಮದುವೆಗೆ ಎಲ್ಲರನ್ನೂ ಆಹ್ವಾನಿಸಲಾಗಿತ್ತು. ಶಾಪಿಂಗ್‌ಗೆ ಹೋಗುವುದಾಗಿ ಹೇಳಿ ಇಬ್ಬರೂ ಮನೆಯಿಂದ ಹೊರಟರು. ಇದಾದ ನಂತರ, ಅವರಿಬ್ಬರು ಮನೆಗೆ ವಾಪಸ್ ಬರಲೇ ಇಲ್ಲ. ಅವರ ಬಗ್ಗೆ ಯಾವುದೇ ಸುದ್ದಿಯೂ ಸಿಗಲಿಲ್ಲ.
ಇಬ್ಬರನ್ನು ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ, ಅದು ಕೂಡ ಪ್ರಯೋಜನವಾಗಲಿಲ್ಲ. ಅನುಮಾನಗೊಂಡ ಹುಡುಗಿಯ ತಂದೆ, ಬೀರು ಪರಿಶೀಲಿಸಿದಾಗ ಚಿನ್ನ ಮತ್ತು ಹಣ ಕಾಣೆಯಾಗಿರುವುದು ಕಂಡುಬಂದಿದೆ. ಅಲ್ಲಿಗೆ ಇಬ್ಬರು ಓಡಿ ಹೋಗಿದ್ದಾರೆಂಬುದು ಖಚಿತವಾಗಿದೆ. ಈ ವಿಷಯ ಸದ್ಯ ಪಟ್ಟಣಾದ್ಯಂತ ಚರ್ಚೆಗೆ ಗ್ರಾಸವಾಗಿದೆ
Advertisement