
ನವದೆಹಲಿ: ಅರಾವಳಿ ಅರಣ್ಯದ ಸಂರಕ್ಷಿತ ಪ್ರದೇಶಗಳಲ್ಲಿ ಗಣಿಗಾರಿಕೆ ಹಕ್ಕುಗಳನ್ನು ಹರಾಜು ಹಾಕುವ ಬಗ್ಗೆ, ವಿಶೇಷವಾಗಿ ಗ್ರೇಟ್ ನಿಕೋಬಾರ್ ದ್ವೀಪದಲ್ಲಿ ಭೂ ವಿನಿಮಯದ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ವಿವರ ಕೇಳಿದೆ.
ಗಣಿಗಾರಿಕೆ ಮತ್ತು ಕಲ್ಲು ಪುಡಿಮಾಡುವಿಕೆಗೆ ಸಂರಕ್ಷಿತ ಅರಣ್ಯ ಭೂಮಿಯನ್ನು ಪರಿವರ್ತಿಸಿರುವ ಬಗ್ಗೆ ರಾಜವಾಸ್ ಗ್ರಾಮಸ್ಥರ ಮಧ್ಯಸ್ಥಿಕೆ ಅರ್ಜಿಯನ್ನು ಸ್ವೀಕರಿಸಿದ ಎನ್ ಜಿಟಿ, ಗಣಿಗಾರಿಕೆ ಚಟುವಟಿಕೆಗಳಿಗೆ ಸಂರಕ್ಷಿತ ಪ್ರದೇಶಗಳನ್ನು ಹೇಗೆ ಹರಾಜು ಮಾಡಬಹುದು ಎಂದು ಸಚಿವಾಲಯವನ್ನು ಕೇಳಿದೆ.
ಈ ಹರಾಜು ಪ್ರಕ್ರಿಯೆ, ನಿಕೋಬಾರ್ ದ್ವೀಪದಲ್ಲಿ ಅರಣ್ಯ ಪ್ರದೇಶವನ್ನು ಹಾಳುಮಾಡುವ ಬೃಹತ್ ಮೂಲಸೌಕರ್ಯ ಯೋಜನೆಯ ಸ್ಥಾಪನೆಗೆ ಸಂಬಂಧಿಸಿದೆ. ಹರಿಯಾಣದ ಅರಾವಳಿ ವ್ಯಾಪ್ತಿಯಲ್ಲಿ 24,535 ಹೆಕ್ಟೇರ್ ಭೂಮಿಯನ್ನು ಅರಣ್ಯವೆಂದು ಗೊತ್ತುಪಡಿಸುವ ಮೂಲಕ ಪರಿಹಾರವನ್ನು ಯೋಜಿಸಲಾಗಿದೆ. ಹೆಚ್ಚುವರಿಯಾಗಿ, ರಾಜವಾಸ್ ಗ್ರಾಮದಲ್ಲಿ ಗೊತ್ತುಪಡಿಸಿದ ಅರಣ್ಯ ಪ್ರದೇಶಗಳ ಒಂದು ಭಾಗ, ನಿರ್ದಿಷ್ಟವಾಗಿ 204 ಹೆಕ್ಟೇರ್ ನ್ನು ಅಧಿಕೃತವಾಗಿ 'ಸಂರಕ್ಷಿತ ಅರಣ್ಯ' ಎಂದು ಗುರುತಿಸಲಾಗಿದೆ.
ಗಣಿಗಾರಿಕೆ ಮತ್ತು ಕಲ್ಲು ಪುಡಿಮಾಡುವಿಕೆಗೆ ಗೊತ್ತುಪಡಿಸಿದ ಅರಣ್ಯ ಪ್ರದೇಶದ ಕಾಲು ಭಾಗವನ್ನು ಈಗಾಗಲೇ ಸಚಿವಾಲಯ ಹರಾಜು ಮಾಡಿದೆ. ಗಣಿಗಾರಿಕೆ ಮತ್ತು ಕಲ್ಲು ಪುಡಿಮಾಡುವಿಕೆಗೆ ಸಂರಕ್ಷಿತ ಅರಣ್ಯ ಭೂಮಿಯನ್ನು ಹಂಚಿಕೆ ಮಾಡುವುದರ ವಿರುದ್ಧದ ಹಸ್ತಕ್ಷೇಪ ಅರ್ಜಿಯನ್ನು ಎನ್ ಜಿಟಿ ಸ್ವೀಕರಿಸಿದ್ದು ನಮಗೆ ಸಮಾಧಾನ ತಂದಿದೆ ಎಂದು ಅರ್ಜಿದಾರರಲ್ಲಿ ಒಬ್ಬರಾದ ರಾಜವಾಸ್ ಗ್ರಾಮದ ನಂಬರ್‌ದಾರ್ ಸತ್ಯನಾರಾಯಣ್ ಹೇಳಿದ್ದಾರೆ.
ಗ್ರಾಮದ ಗೊತ್ತುಪಡಿಸಿದ ಅರಣ್ಯ ಪ್ರದೇಶಗಳು ಗಣಿಗಾರಿಕೆ ಮತ್ತು ಕಲ್ಲು ಪುಡಿಮಾಡುವಿಕೆಯಂತಹ ಯಾವುದೇ ಪರಿಸರ ವಿನಾಶಕಾರಿ ಚಟುವಟಿಕೆಗಳಿಗೆ ನಡೆಸಬಾರದು ಎಂಬುದು ನಮ್ಮ ಮನವಿಯಾಗಿದೆ ಎನ್ನುತ್ತಾರೆ ಗ್ರಾಮಸ್ಥರು. ಅಗತ್ಯ ಅನುಮತಿಯಿಲ್ಲದೆ ಗಣಿಗಾರಿಕೆ ಮತ್ತು ಕಲ್ಲು ಪುಡಿಮಾಡುವಿಕೆಯನ್ನು ಮುಂದುವರಿಸದಂತೆ ಎನ್ ಜಿಟಿ ಹರಿಯಾಣ ಸರ್ಕಾರಕ್ಕೆ ನಿರ್ದೇಶನ ನೀಡಿ ಮುಂದಿನ ವಿಚಾರಣೆಯನ್ನು ಆಗಸ್ಟ್ 7ಕ್ಕೆ ಮುಂದೂಡಿದೆ.
Advertisement