ದೇಶ ವಿರೋಧಿ ಚಟುವಟಿಕೆ: ಮತ್ತೆ ಇಬ್ಬರು ಸರ್ಕಾರಿ ನೌಕರರನ್ನು ವಜಾಗೊಳಿಸಿದ ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್

ಸಂವಿಧಾನದ 311ನೇ ವಿಧಿಯನ್ನು ಅನ್ವಯಿಸುವ ಮೂಲಕ ಪೊಲೀಸ್ ಇಲಾಖೆಯಲ್ಲಿ ಸಹಾಯಕ ವೈರ್‌ಲೆಸ್ ಆಪರೇಟರ್ ಆಗಿದ ಬಷರತ್ ಅಹ್ಮದ್ ಮಿರ್ ಮತ್ತು ಸಾರ್ವಜನಿಕ ಕಾರ್ಯ(ಆರ್ & ಬಿ) ಇಲಾಖೆಯಲ್ಲಿ ಹಿರಿಯ ಸಹಾಯಕರಾಗಿದ್ದ ಇಶ್ತಿಯಾಕ್ ಅಹ್ಮದ್ ಮಲಿಕ್ ಅವರನ್ನು ವಜಾಗೊಳಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ
Updated on

ಶ್ರೀನಗರ: ದೇಶ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಗುರುವಾರ ಇಬ್ಬರು ಸರ್ಕಾರಿ ನೌಕರರನ್ನು ಸೇವೆಯಿಂದ ವಜಾಗೊಳಿಸಿದ್ದಾರೆ.

ಸಿನ್ಹಾ ಅವರು ಸಂವಿಧಾನದ 311ನೇ ವಿಧಿಯನ್ನು ಅನ್ವಯಿಸುವ ಮೂಲಕ ಪೊಲೀಸ್ ಇಲಾಖೆಯಲ್ಲಿ ಸಹಾಯಕ ವೈರ್‌ಲೆಸ್ ಆಪರೇಟರ್ ಆಗಿದ ಬಷರತ್ ಅಹ್ಮದ್ ಮಿರ್ ಮತ್ತು ಸಾರ್ವಜನಿಕ ಕಾರ್ಯ(ಆರ್ & ಬಿ) ಇಲಾಖೆಯಲ್ಲಿ ಹಿರಿಯ ಸಹಾಯಕರಾಗಿದ್ದ ಇಶ್ತಿಯಾಕ್ ಅಹ್ಮದ್ ಮಲಿಕ್ ಅವರನ್ನು ವಜಾಗೊಳಿಸಿದ್ದಾರೆ.

"ಈ ಇಬ್ಬರು ನೌಕರರು ರಾಜ್ಯದ ಹಿತಾಸಕ್ತಿಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ ಎಂಬುದು ಕಾನೂನು ಜಾರಿ ಮತ್ತು ಗುಪ್ತಚರ ಸಂಸ್ಥೆಗಳ ಗಮನಕ್ಕೆ ಬಂದಿದೆ. ಇದು ಭಯೋತ್ಪಾದನೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಸಾಬೀತುಪಡಿಸುತ್ತದೆ" ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ
ಜಮ್ಮು-ಕಾಶ್ಮೀರ: ಉಗ್ರರೊಂದಿಗೆ ನಂಟು, ಇಬ್ಬರು ಪೊಲೀಸರು ಸೇರಿದಂತೆ 4 ಸರ್ಕಾರಿ ನೌಕರರ ವಜಾ

ಶ್ರೀನಗರದ ನಿವಾಸಿ ಬಷರತ್ ಅಹ್ಮದ್ ಮಿರ್ ಪಾಕಿಸ್ತಾನ ಗುಪ್ತಚರ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಏಜೆನ್ಸಿಗಳಿಂದ ಬಂದ ಹೆಚ್ಚು ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ವಜಾಗೊಳಿಸಲಾದ ಮತ್ತೊಬ್ಬ ಉದ್ಯೋಗಿ, ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ನಿವಾಸಿ ಇಶ್ತಿಯಾಕ್ ಅಹ್ಮದ್ ಮಲಿಕ್, ನಿಷೇಧಿತ ಕಾನೂನುಬಾಹಿರ ಸಂಘಟನೆಯಾದ ಜಮಾತ್-ಇ-ಇಸ್ಲಾಮಿಯ ಜಮ್ಮು ಮತ್ತು ಕಾಶ್ಮೀರ ಸಕ್ರಿಯ ಸದಸ್ಯ ಮತ್ತು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಹಿಜ್ಬುಲ್ ಮುಜಾಹಿದ್ದೀನ್‌ನ ಸಹಚರ ಎಂದು ಪಟ್ಟಿ ಮಾಡಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com