ಹೊಸ ಬೆದರಿಕೆ ಸಂದೇಶ : ಸಲ್ಮಾನ್ ಖಾನ್ ಮನೆ ಹೊರಗೆ ಭದ್ರತೆ ಹೆಚ್ಚಳ!

ಈ ಸಂಬಂಧ ವರ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ.
ನಟ ಸಲ್ಮಾನ್ ಖಾನ್
ನಟ ಸಲ್ಮಾನ್ ಖಾನ್
Updated on

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಕಾರು ಸ್ಫೋಟಿಸುವುದಾಗಿ ಹೊಸ ಬೆದರಿಕೆ ಸಂದೇಶ ಬಂದ ನಂತರ ಅವರ ನಿವಾಸದ ಹೊರಗೆ ಭದ್ರತೆ ಹೆಚ್ಚಿಸಲಾಗಿದೆ.

ಮುಂಬೈ ಪೊಲೀಸರ ಪ್ರಕಾರ, ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡವುದಾಗಿ ಮತ್ತು ಅವರ ಕಾರನ್ನು ಸ್ಫೋಟಿಸುವುದಾಗಿ ವರ್ಲಿ ಸಂಚಾರಿ ಪೊಲೀಸರ ಅಧಿಕೃತ ಸಂಖ್ಯೆಗೆ ವಾಟ್ಸಾಪ್ ಮೂಲಕ ಬೆದರಿಕೆ ಸಂದೇಶ ಕಳುಹಿಸಲಾಗಿದೆ.

ಈ ಸಂಬಂಧ ವರ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ.

ನಟ ಸಲ್ಮಾನ್ ಖಾನ್
ಮನೆಗೆ ನುಗ್ಗಿ ಹೊಡೆಯುತ್ತೇವೆ, ಕಾರಿನಲ್ಲಿ ಬಾಂಬ್‌ ಇಟ್ಟು ಸ್ಫೋಟಿಸುತ್ತೇವೆ: ಸಲ್ಮಾನ್ ಖಾನ್‌ಗೆ ಹೊಸ ಬೆದರಿಕೆ, ಪ್ರಕರಣ ದಾಖಲು

ಇದಕ್ಕೂ ಮೊದಲು, ANI ಜೊತೆ ಮಾತನಾಡಿದ ಡಿಸಿಪಿ ದತ್ತಾ ಕಾಂಬ್ಳೆ ಅವರು, ಭಾನುವಾರ ವರ್ಲಿ ಸಂಚಾರಿ ಪೊಲೀಸರ ವಾಟ್ಸಾಪ್ ಸಹಾಯವಾಣಿಗೆ ಸಲ್ಮಾನ್ ಖಾನ್ ಅವರಿಗೆ ಕೊಲೆ ಬೆದರಿಕೆ ಸಂದೇಶ ಬಂದಿದೆ ಎಂದು ಹೇಳಿದರು.

ಈ ಬೆದರಿಕೆ ನಂತರ, ಮುಂಬೈ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತ(BNSS)ಯ "351(2) ಮತ್ತು 351(3)" ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com