
ಕಾಲಿವುಡ್ ನಟ ಅಜಿತ್ ಕುಮಾರ್ ಅಭಿನಯಿಸಿರುವ ‘ಗುಡ್ ಬ್ಯಾಡ್ ಅಗ್ಲಿʼ ಚಿತ್ರಕ್ಕೆ ಪಾಸಿಟವ್ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ರಿಲೀಸ್ ಆಗಿ ಐದು ದಿನ ಕಳೆದರೂ ಚಿತ್ರದ ಬಗೆಗಿನ ಕ್ರೇಜ್ ಕಡಿಮೆ ಆಗುತ್ತಿಲ್ಲ.
ಯಶಸ್ಸಿನ ಖುಷಿಯಲ್ಲಿರುವಾಗಲೇ ‘ಗುಡ್ ಬ್ಯಾಡ್ ಅಗ್ಲಿʼಗೆ ಕಾನೂನು ಸಂಕಷ್ಟ ಎದುರುರಾಗಿದೆ. ಕಾಪಿ ರೈಟ್ಸ್ ಆರೋಪ ಮಾಡಿ ಖ್ಯಾತ ಹಿರಿಯ ಸಂಗೀತ ನಿರ್ದೇಶಕ ಇಳಯರಾಜ ಚಿತ್ರತಂಡಕ್ಕೆ ನೊಟೀಸ್ ಕಳುಹಿಸಿದ್ದಾರೆ.
ತಮಿಳು ಆ್ಯಕ್ಷನ್-ಕಾಮಿಡಿ ‘ಗುಡ್ ಬ್ಯಾಡ್ ಅಗ್ಲಿ’ ನಿರ್ಮಾಪಕರಿಗೆ ಸಂಗೀತ ಮಾಂತ್ರಿಕ ಇಳಯರಾಜ ಲೀಗಲ್ ನೊಟೀಸ್ ಕಳುಹಿಸಿದ್ದಾರೆ. ಇಳಯರಾಜ ಅವರ ‘ಓತ ರುಬಾಯುಮ್ ತಾರೆನ್’, ‘ಇಲಮೈ ಇದೋ ಇಧೋ’ ಮತ್ತು ‘ಏನ್ ಜೋಡಿ ಮಂಜ ಕುರುವಿ’ ಹಾಡುಗಳ ಬದಲಾದ ಆವೃತ್ತಿಗಳನ್ನು ಬಳಸಿದ್ದಕ್ಕಾಗಿ ಚಿತ್ರತಂಡಕ್ಕೆ ಕಾನೂನು ಸಂಕಷ್ಟ ಎದುರಾಗಿದೆ.
ನಮ್ಮ ಕ್ಲೈಂಟ್‌ನ ‘ನಟ್ಟುಪುರ ಪಟ್ಟು’ ಚಿತ್ರದ ‘ಒಥ ರುಬಾಯುಮ್ ತರೇನ್’, ‘ಸಕಲಕಲಾ ವಲ್ಲವನ್’ ಚಿತ್ರದ ‘ಇಲಮೈ ಇಧೋ ಇಧೋ’ ಮತ್ತು ‘ವಿಕ್ರಮ್’ ಚಿತ್ರದ ‘ಎನ್ ಜೋಡಿ ಮಂಜ ಕುರುವಿ’ ಹಾಡುಗಳನ್ನು ಸ್ಪಷ್ಟ ಒಪ್ಪಿಗೆ/ಅನುಮತಿ ಪಡೆಯದೆ ಚಿತ್ರದಲ್ಲಿ ಬಳಸಲಾಗಿದೆ. ಹಾಡುಗಳನ್ನು ಮಾರ್ಪಡಿಸಿ ಚಿತ್ರದಲ್ಲಿ ಬಳಸಿರುವುದು ಗಮನಕ್ಕೆ ಬಂದಿದೆ ಎಂದು ನೊಟೀಸ್‌ನಲ್ಲಿ ತಿಳಿಸಲಾಗಿದೆ. ಇದು ಅನಧಿಕೃತ ಬಳಕೆ, ಸ್ವಾಧೀನ ಆಗಿದ್ದು, ನಮ್ಮ ಕ್ಲೈಂಟ್‌ನ ಹಕ್ಕುಸ್ವಾಮ್ಯ ಮತ್ತು ನೈತಿಕ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ.
ಚಿತ್ರದಲ್ಲಿನ ನನ್ನ ಶೀಘ್ರವೇ ಹಾಡುಗಳನ್ನು ತೆಗೆದು ಹಾಕಬೇಕು. ಇಲ್ಲದಿದ್ರೆ ಚಿತ್ರದ ಬಾಕ್ಸ್ ಆಫೀಸ್ ಗಳಿಕೆಯಲ್ಲಿ 5 ಕೋಟಿ ರೂಪಾಯಿ ಪರಿಹಾರವನ್ನು ನೀಡಬೇಕೆಂದು ನೊಟೀಸ್‌ನಲ್ಲಿ ತಿಳಿಸಲಾಗಿದೆ.
Advertisement