ಭೂ ಅವ್ಯವಹಾರ ಪ್ರಕರಣ: ಸತತ ಎರಡನೇ ದಿನ ED ಮುಂದೆ ವಿಚಾರಣೆಗೆ ರಾಬರ್ಟ್ ವಾದ್ರಾ ಹಾಜರು

ಕೇರಳದ ವಯನಾಡಿನ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಇದ್ದರು. ನಿನ್ನೆ ಅವರನ್ನು ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು.
Robert Vadra
ರಾಬರ್ಟ್ ವಾದ್ರಾ
Updated on

ನವದೆಹಲಿ: 2008 ರ ಹರಿಯಾಣ ಭೂ ವ್ಯವಹಾರಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಸತತ ಎರಡನೇ ದಿನವಾದ ಇಂದು ಬುಧವಾರ ಕೂಡ ಸಂಸದೆ ಪ್ರಿಯಾಂಕಾ ವಾದ್ರಾ ಪತಿ ರಾಬರ್ಟ್ ವಾದ್ರಾ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾದರು.

ಕೇರಳದ ವಯನಾಡಿನ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಇದ್ದರು. ನಿನ್ನೆ ಅವರನ್ನು ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಫೆಡರಲ್ ತನಿಖಾ ಸಂಸ್ಥೆ ಅವರ ಹೇಳಿಕೆಯನ್ನು ದಾಖಲಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

56 ವರ್ಷದ ರಾಬರ್ಟ್ ವಾದ್ರಾ ಇಡಿ ಕ್ರಮವನ್ನು ರಾಜಕೀಯ ದ್ವೇಷ ಎಂದು ಕರೆದಿದ್ದರು. ಅವರು ಯಾವಾಗಲೂ ತನಿಖಾ ಸಂಸ್ಥೆಗಳೊಂದಿಗೆ ಸಹಕರಿಸುತ್ತಿದ್ದಾರೆ ಮತ್ತು ಅಪಾರ ಪ್ರಮಾಣದ ದಾಖಲೆಗಳನ್ನು ಒದಗಿಸಿದ್ದಾರೆ, 20 ವರ್ಷಗಳಷ್ಟು ಹಳೆಯದಾದ ಪ್ರಕರಣಗಳನ್ನು ಮುಕ್ತಾಯಗೊಳಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ರಾಬರ್ಟ್ ವಾದ್ರಾ ವಿರುದ್ಧದ ತನಿಖೆಯು ಹರಿಯಾಣದ ಮಾನೇಸರ್-ಶಿಕೋಪುರ (ಈಗ ಸೆಕ್ಟರ್ 83) ಗುರುಗ್ರಾಮ್‌ನಲ್ಲಿ ನಡೆದ ಭೂ ವ್ಯವಹಾರಕ್ಕೆ ಸಂಬಂಧಿಸಿದೆ.

ಫೆಬ್ರವರಿ 2008 ರ ಭೂ ವ್ಯವಹಾರವನ್ನು ರಾಬರ್ಟ್ ವಾದ್ರಾ ಈ ಹಿಂದೆ ನಿರ್ದೇಶಕರಾಗಿದ್ದ ಸ್ಕೈಲೈಟ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯು ಶಿಕೋಪುರದಲ್ಲಿ 3.5 ಎಕರೆ ಭೂಮಿಯನ್ನು ಓಂಕಾರೇಶ್ವರ ಪ್ರಾಪರ್ಟೀಸ್ ಎಂಬ ಸಂಸ್ಥೆಯಿಂದ 7.5 ಕೋಟಿ ರೂ.ಗೆ ಖರೀದಿಸಿದ್ದರು. ಆ ಸಮಯದಲ್ಲಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು.

ನಾಲ್ಕು ವರ್ಷಗಳ ನಂತರ, ಸೆಪ್ಟೆಂಬರ್ 2012 ರಲ್ಲಿ, ಕಂಪನಿಯು ಈ 3.53 ಎಕರೆ ಭೂಮಿಯನ್ನು ರಿಯಾಲ್ಟಿ ಪ್ರಮುಖ ಡಿಎಲ್‌ಎಫ್‌ಗೆ 58 ಕೋಟಿ ರೂಪಾಯಿಗೆ ಮಾರಾಟ ಮಾಡಿತು.

Robert Vadra
National Herald Case: ಸೋನಿಯಾ-ರಾಹುಲ್ ವಿರುದ್ಧ ED ಚಾರ್ಚ್'ಶೀಟ್; ಕೇಂದ್ರದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾಂಗ್ರೆಸ್ ಮುಂದು!

ಹರಿಯಾಣದ ಭೂ ಕ್ರೋಢೀಕರಣ ಮತ್ತು ಭೂ ದಾಖಲೆಗಳ-ಮತ್ತು- ಇನ್ಸ್‌ಪೆಕ್ಟರ್-ಜನರಲ್ ಆಫ್ ನೋಂದಣಿಯ ಮಹಾನಿರ್ದೇಶಕರಾಗಿ ನೇಮಕಗೊಂಡಿದ್ದ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರು ಈ ವ್ಯವಹಾರವನ್ನು ರಾಜ್ಯ ಕ್ರೋಢೀಕರಣ ಕಾಯ್ದೆ ಮತ್ತು ಕೆಲವು ಸಂಬಂಧಿತ ಕಾರ್ಯವಿಧಾನಗಳ ಉಲ್ಲಂಘನೆ ಎಂದು ವರ್ಗೀಕರಿಸುವ ರೂಪಾಂತರವನ್ನು ರದ್ದುಗೊಳಿಸಿದ ನಂತರ 2012ರಲ್ಲಿ ಭೂ ಒಪ್ಪಂದವು ವಿವಾದಕ್ಕೆ ಸಿಲುಕಿತು,

ಈ ಪ್ರಕರಣವನ್ನು ಭೂ ವ್ಯವಹಾರಗಳಲ್ಲಿನ ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಪಕ್ಷದ ಸೋನಿಯಾ ಗಾಂಧಿ ಕುಟುಂಬದೊಳಗಿನ ಸ್ವಜನಪಕ್ಷಪಾತ ಎಂದು ಹರಿಯಾಣ ಬಿಜೆಪಿ ನಂತರ ಕರೆದಿತ್ತು. ಈ ಒಪ್ಪಂದದ ತನಿಖೆಗಾಗಿ ಹರಿಯಾಣ ಪೊಲೀಸರು 2018 ರಲ್ಲಿ ಎಫ್‌ಐಆರ್ ದಾಖಲಿಸಿದ್ದರು.

ಈ ಹಿಂದೆ ಎರಡು ಹಣ ವರ್ಗಾವಣೆ ಪ್ರಕರಣಗಳಲ್ಲಿ ರಾಬರ್ಟ್ ವಾದ್ರಾ ಅವರನ್ನು ಫೆಡರಲ್ ತನಿಖಾ ಸಂಸ್ಥೆ ಹಲವು ಬಾರಿ ಪ್ರಶ್ನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com