ಸಾಂದರ್ಭಿಕ ಚಿತ್ರ
ದೇಶ
ಅಮೆರಿಕದಲ್ಲಿ ಹಿಟ್ ಅಂಡ್ ರನ್ಗೆ ಆಂಧ್ರ ಪ್ರದೇಶ ವಿದ್ಯಾರ್ಥಿನಿ ಬಲಿ
ಏಪ್ರಿಲ್ 12 ರಂದು ಮೃತ ವಿ. ದೀಪ್ತಿ ಮತ್ತು ಗುಂಟೂರು ಜಿಲ್ಲೆಯ ಅವರ ಸ್ನೇಹಿತೆ ಸ್ನಿಗ್ಧಾ ಅವರು ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬಂದ ವಾಹನವೊಂದು ಡಿಕ್ಕಿ ಹೊಡೆದಿದೆ.
ಗುಂಟೂರು: ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದ ಆಂಧ್ರ ಪ್ರದೇಶದ ಗುಂಟೂರಿನ ವಿದ್ಯಾರ್ಥಿನಿಯೊಬ್ಬರು ಶುಕ್ರವಾರ ಟೆಕ್ಸಾಸ್‌ನ ಡೆಂಟನ್ ಸಿಟಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಏಪ್ರಿಲ್ 12 ರಂದು ಮೃತ ವಿ. ದೀಪ್ತಿ ಮತ್ತು ಗುಂಟೂರು ಜಿಲ್ಲೆಯ ಅವರ ಸ್ನೇಹಿತೆ ಸ್ನಿಗ್ಧಾ ಅವರು ಕ್ಯಾರಿಲ್ ಅಲ್ ಲಾಗೋ ಡ್ರೈವ್‌ನ 2300 ಬ್ಲಾಕ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ವೇಗವಾಗಿ ಬಂದ ವಾಹನವೊಂದು ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ದೀಪ್ತಿ ತಲೆಗೆ ಗಂಭೀರ ಗಾಯವಾಗಿದ್ದು, ಏಪ್ರಿಲ್ 15 ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಗಾಯಗೊಂಡ ಸ್ನಿಗ್ಧಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ದೀಪ್ತಿ ಈ ಮೇ ತಿಂಗಳಲ್ಲಿ ಪದವಿ ಪಡೆಯುವ ನಿರೀಕ್ಷೆಯಿತ್ತು. ಅವರ ತಾಯಿ ಗುರುವಾರ ಅವರೊಂದಿಗೆ ಮಾತನಾಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ