ಮುರ್ಷಿದಾಬಾದ್ ನಲ್ಲಿ ಗಲಭೆ ಪೀಡಿತ ಜನರ ಭೇಟಿ ಮಾಡಿ ಧೈರ್ಯ ತುಂಬಿದ NCW ತಂಡ

ಮುರ್ಷಿದಾಬಾದ್ ನಲ್ಲಿ ಗಲಭೆ ಪೀಡಿತ ಜನರ ಭೇಟಿ ಮಾಡಿ ಧೈರ್ಯ ತುಂಬಿದ NCW ತಂಡ

ಹಿಂಸಾತ್ಮಕ ದಿನಗಳಲ್ಲಿ ಬಾಧಿತ ಮಹಿಳೆಯರು ತಮ್ಮ ದುಃಸ್ಥಿತಿಯನ್ನು ವಿವರಿಸಿದರು ಮತ್ತು ಜಿಲ್ಲೆಯ ಆಯ್ದ ಪ್ರದೇಶಗಳಲ್ಲಿ ಶಾಶ್ವತ BSF ಶಿಬಿರಗಳನ್ನು ಸ್ಥಾಪಿಸಬೇಕು ಮತ್ತು ಮೂರು ಜೀವಗಳನ್ನು ಬಲಿ ಪಡೆದ ಕೋಮು ಘರ್ಷಣೆಗಳ ಬಗ್ಗೆ NIA ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
Published on

ರಾಷ್ಟ್ರೀಯ ಮಹಿಳಾ ಆಯೋಗದ (NCW) ಅಧ್ಯಕ್ಷೆ ವಿಜಯಾ ರಹತ್ಕರ್ ನೇತೃತ್ವದ ನಿಯೋಗ ಶನಿವಾರ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಗಲಭೆ ಪೀಡಿತ ಜನರನ್ನು ಭೇಟಿ ಮಾಡಿ, ಭವಿಷ್ಯದಲ್ಲಿ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಭರವಸೆ ನೀಡಿತು.

ಹಿಂಸಾತ್ಮಕ ದಿನಗಳಲ್ಲಿ ಬಾಧಿತ ಮಹಿಳೆಯರು ತಮ್ಮ ದುಃಸ್ಥಿತಿಯನ್ನು ವಿವರಿಸಿದರು ಮತ್ತು ಜಿಲ್ಲೆಯ ಆಯ್ದ ಪ್ರದೇಶಗಳಲ್ಲಿ ಶಾಶ್ವತ BSF ಶಿಬಿರಗಳನ್ನು ಸ್ಥಾಪಿಸಬೇಕು ಮತ್ತು ಮೂರು ಜೀವಗಳನ್ನು ಬಲಿ ಪಡೆದ ಕೋಮು ಘರ್ಷಣೆಗಳ ಬಗ್ಗೆ NIA ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಕೇಂದ್ರವು ಅವರ ಪರವಾಗಿದೆ, 'ಚಿಂತೆಗೆ ಯಾವುದೇ ಕಾರಣವಿಲ್ಲ' ಎಂದು NCW ಮುಖ್ಯಸ್ಥರು ಸಂತ್ರಸ್ತರಿಗೆ ಧೈರ್ಯ ತುಂಬಿದ್ದಾರೆ.

"ನಿಮ್ಮ ಕಷ್ಟವನ್ನು ನೋಡಲು ನಾವು ಇಲ್ಲಿಗೆ ಬಂದಿದ್ದೇವೆ. ದಯವಿಟ್ಟು ಚಿಂತಿಸಬೇಡಿ. ದೇಶ ಮತ್ತು ಆಯೋಗ ನಿಮ್ಮೆಲ್ಲರೊಂದಿಗಿದೆ. ನೀವು ಒಬ್ಬಂಟಿಯಾಗಿದ್ದೀರಿ ಎಂದು ಭಾವಿಸಬೇಡಿ" ಎಂದು ರಹತ್ಕರ್ ಮುರ್ಷಿದಾಬಾದ್‌ನ ಬೆಟ್‌ಬೋನಾ ಪಟ್ಟಣದಲ್ಲಿ ಸಂತ್ರಸ್ತರಿಗೆ ತಿಳಿಸಿದರು.

ಮುರ್ಷಿದಾಬಾದ್ ನಲ್ಲಿ ಗಲಭೆ ಪೀಡಿತ ಜನರ ಭೇಟಿ ಮಾಡಿ ಧೈರ್ಯ ತುಂಬಿದ NCW ತಂಡ
Watch | ಮುರ್ಷಿದಾಬಾದ್ ಗಲಭೆ ಪೂರ್ವ ಯೋಜಿತ; ಬಿಜೆಪಿ, ಬಿಎಸ್‌ಎಫ್, ಕೇಂದ್ರ ಸಂಸ್ಥೆಗಳ ವೈಫಲ್ಯ- ಮಮತಾ ಆರೋಪ

NCW ತನ್ನ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಿದೆ ಎಂದು ಇದೇ ವೇಳೆ ಅವರು ಹೇಳಿದರು. NCW ತಂಡ ಶುಕ್ರವಾರ ಮಾಲ್ಡಾ ಜಿಲ್ಲೆಯ ಪರಿಹಾರ ಶಿಬಿರಕ್ಕೆ ಭೇಟಿ ನೀಡಿ ಮುರ್ಷಿದಾಬಾದ್ ಗಲಭೆಯಿಂದ ಸ್ಥಳಾಂತರಗೊಂಡವರನ್ನು ಭೇಟಿ ಮಾಡಿತ್ತು.

ರಾಜ್ಯದ ಕೆಲವು ಭಾಗಗಳಲ್ಲಿ ಇತ್ತೀಚೆಗೆ ನಡೆದ ಕೋಮು ಹಿಂಸಾಚಾರದಿಂದ ಬಾಧಿತರಾದ ಮಹಿಳೆಯರ ಸ್ಥಿತಿಯನ್ನು ಆಯೋಗ ನಿರ್ಣಯಿಸಿತ್ತು.

ಏಪ್ರಿಲ್ 11 ಮತ್ತು 12 ರಂದು ಮುರ್ಷಿದಾಬಾದ್‌ನ ಶಂಶೇರ್‌ಗಂಜ್, ಸುಟಿ, ಧುಲಿಯನ್ ಮತ್ತು ಜಂಗಿಪುರ ಪ್ರದೇಶಗಳಲ್ಲಿ ಭುಗಿಲೆದ್ದ ಹಿಂಸಾಚಾರದ ಬಗ್ಗೆ ಎನ್‌ಸಿಡಬ್ಲ್ಯೂ ಈ ಹಿಂದೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿತ್ತು. ಕೇಂದ್ರ ವಕ್ಫ್ ಕಾಯ್ದೆಗೆ ತಿದ್ದುಪಡಿಗಳ ವಿರುದ್ಧದ ಪ್ರತಿಭಟನೆಗಳ ನಡುವೆ, ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ನಡೆದ ಘರ್ಷಣೆಯಲ್ಲಿ ಮೂವರು ಜನರು ಸಾವನ್ನಪ್ಪಿದರು ಮತ್ತು ನೂರಾರು ಜನರು ನಿರಾಶ್ರಿತರಾಗಿದ್ದಾರೆ.

Follow KannadaPrabha channel on WhatsApp

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com