"ನ್ಯಾಯಾಲಯ ಹೇಳಿದ ಎಲ್ಲವೂ ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿದೆ: ಧಂಕರ್ ಗೆ ಕಪಿಲ್ ಸಿಬಲ್ ತಿರುಗೇಟು

ಸುಪ್ರೀಂ ಕೋರ್ಟ್ ಸಂವಿಧಾನವನ್ನು ಅರ್ಥೈಸುವ ಮತ್ತು ಸಂಪೂರ್ಣ ನ್ಯಾಯವನ್ನು ನೀಡುವ ಬಾಧ್ಯತೆಯನ್ನು ಹೊಂದಿದೆ(ಆರ್ಟಿಕಲ್ 142)" ಎಂದು ತಿಳಿಸಿದ್ದಾರೆ.
Rajya Sabha MP Kapil Sibal, Vice President Jagdeep Dhankhar
ಕಪಿಲ್ ಸಿಬಲ್, ಜಗದೀಪ್ ಧನಕರ್Photo | PTI
Updated on

ನವದೆಹಲಿ: ಸರ್ವೋಚ್ಛ ನ್ಯಾಯಾಲಯ ಹೇಳಿರುವುದು ಎಲ್ಲವೂ ದೇಶದ ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿದೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯನ್ನು ಒಳಗೊಂಡಿದೆ ಎಂದು ಸುಪ್ರೀಂ ಕೋರ್ಟ್‌ ವಿರುದ್ಧ ಮಂಗಳವಾರ ಮತ್ತೆ ವಾಗ್ದಾಳಿ ನಡೆಸಿದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರಿಗೆ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಅವರು ತಿರುಗೇಟು ನೀಡಿದ್ದಾರೆ.

ಸಂಸತ್ತೇ ಸರ್ವೋಚ್ಚ. ಸಾಂವಿಧಾನಿಕ ಪ್ರಾಧಿಕಾರದ ಪ್ರತಿಯೊಂದು ಪದವೂ ಸರ್ವೋಚ್ಚ ರಾಷ್ಟ್ರೀಯ ಹಿತಾಸಕ್ತಿಯಿಂದ ಮಾರ್ಗದರ್ಶಿಸಲ್ಪಡುತ್ತದೆ ಎಂದು ಜಗದೀಪ್ ಧನಕರ್ ಅವರು ಹೇಳಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜ್ಯಸಭೆಯ ಅಧ್ಯಕ್ಷರೂ ಆಗಿರುವ ಧನಕರ್, ಸಾಂವಿಧಾನಿಕ ಪ್ರಾಧಿಕಾರದ ಪ್ರತಿಯೊಂದು ಪದವೂ ರಾಷ್ಟ್ರದ ಸರ್ವೋಚ್ಚ ಶ್ರೇಷ್ಠ ಹಿತಾಸಕ್ತಿಯಿಂದ ಮಾರ್ಗದರ್ಶಿಸಲ್ಪಡುತ್ತದೆ ಎಂದು ಹೇಳಿದರು.

Rajya Sabha MP Kapil Sibal, Vice President Jagdeep Dhankhar
ನ್ಯಾಯಾಂಗ "ಸೂಪರ್ ಪಾರ್ಲಿಮೆಂಟ್" ಅಲ್ಲ; ಸಾಂವಿಧಾನಿಕ ನಿರ್ಧಾರಗಳ ಹಿಂದೆ ರಾಷ್ಟ್ರೀಯ ಹಿತಾಸಕ್ತಿ ಇರುತ್ತದೆ: ಉಪರಾಷ್ಟ್ರಪತಿ ಧಂಕರ್

ಧನಕರ್ ಹೇಳಿಕೆಗೆ X ಮೂಲಕ ಪ್ರತಿಕ್ರಿಯಿಸಿರುವ ಸಿಬಲ್, "ಸುಪ್ರೀಂ ಕೋರ್ಟ್: ಸಂಸತ್ತು ಕಾನೂನುಗಳನ್ನು ಅಂಗೀಕರಿಸುವ ಪೂರ್ಣ ಅಧಿಕಾರವನ್ನು ಹೊಂದಿವೆ. ಸುಪ್ರೀಂ ಕೋರ್ಟ್ ಸಂವಿಧಾನವನ್ನು ಅರ್ಥೈಸುವ ಮತ್ತು ಸಂಪೂರ್ಣ ನ್ಯಾಯವನ್ನು ನೀಡುವ ಬಾಧ್ಯತೆಯನ್ನು ಹೊಂದಿದೆ(ಆರ್ಟಿಕಲ್ 142)" ಎಂದು ತಿಳಿಸಿದ್ದಾರೆ.

"ನ್ಯಾಯಾಲಯ ಹೇಳಿದ ಎಲ್ಲವೂ: ನಮ್ಮ ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿದೆ; ರಾಷ್ಟ್ರೀಯ ಹಿತಾಸಕ್ತಿಯಿಂದ ಮಾರ್ಗದರ್ಶಿಸಲ್ಪಟ್ಟಿದೆ" ಎಂದು ಪಕ್ಷೇತರ ರಾಜ್ಯಸಭಾ ಸದಸ್ಯ ಹಾಗೂ ಮಾಜಿ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com