
ಶ್ರೀನಗರ: ದಕ್ಷಿಣ ಕಾಶ್ಮೀರದ ಪಹಲ್ಗಾಮ್ ಬಳಿ 26 ಜನರನ್ನು ಹತ್ಯೆಗೈದ ಉಗ್ರರ ದಾಳಿಯಲ್ಲಿ ಭಾಗಿಯಾಗಿರುವ ಶಂಕಿತ ಮೂವರ ರೇಖಾಚಿತ್ರಗಳನ್ನು ಭದ್ರತಾ ಸಂಸ್ಥೆಗಳು ಬುಧವಾರ ಬಿಡುಗಡೆ ಮಾಡಿವೆ.
ಶಂಕಿತ ಮೂವರನ್ನು ಆಸಿಫ್ ಫೌಜಿ, ಸುಲೇಮಾನ್ ಶಾ ಮತ್ತು ಅಬು ತಲ್ಹಾ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂಸಾ, ಯೂನಸ್ ಮತ್ತು ಆಸಿಫ್ ಎಂಬ ಕೋಡ್ ಹೆಸರುಗಳನ್ನು ಹೊಂದಿದ್ದ ಮೂವರು ಉಗ್ರರು ಪೂಂಚ್‌ನಲ್ಲಿ ನಡೆದ ಭಯೋತ್ಪಾದನೆ ಸಂಬಂಧಿತ ಘಟನೆಗಳಲ್ಲಿ ಭಾಗಿಯಾಗಿದ್ದರು.
ಪೈಶಾಚಿಕ ದಾಳಿಯಿಂದ ಬದುಕುಳಿದಿರುವವರ ಸಹಾಯದಿಂದ ರೇಖಾಚಿತ್ರಗಳನ್ನು ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದರು.
ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಗುಂಪಿನ ಸಂಘಟನೆಯಾದ 'ರೆಸಿಸ್ಟೆನ್ಸ್ ಫ್ರಂಟ್ (TRF)ಮಂಗಳವಾರ ಮಧ್ಯಾಹ್ನ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು.
Advertisement