ಉತ್ತರ ಸಿಕ್ಕಿಂನಲ್ಲಿ ಭಾರೀ ಮಳೆ, ಭೂಕುಸಿತ: ಸಂಕಷ್ಟದಲ್ಲಿ ಸಿಲುಕಿದ 1,000 ಪ್ರವಾಸಿಗರು; Video

ಗುರುವಾರ ಚುಂಗ್‌ಥಾಂಗ್‌ನಲ್ಲಿ ಸುಮಾರು 200 ಪ್ರವಾಸಿ ವಾಹನಗಳು ಸಿಲುಕಿಕೊಂಡಿದ್ದು, ನಿವಾಸಿಗಳು ಅಲ್ಲಿನ ಗುರುದ್ವಾರದಲ್ಲಿ ತಂಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Landslides and heavy rain leave 1,000 tourists stranded in North Sikkim
ಉತ್ತರ ಸಿಕ್ಕಿಂನಲ್ಲಿ ಸಿಲುಕಿದ ಪ್ರವಾಸಿಗರು
Updated on

ಗ್ಯಾಂಗ್ ಟೋಕ್: ಹಿಮಾಲಯನ್ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಸಂಭವಿಸಿದ ಭೂಕುಸಿತದಿಂದಾಗಿ ಉತ್ತರ ಸಿಕ್ಕಿಂನಲ್ಲಿ ಸುಮಾರು 1,000 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಚುಂಗ್‌ಥಾಂಗ್‌ನಲ್ಲಿ ಸುಮಾರು 200 ಪ್ರವಾಸಿ ವಾಹನಗಳು ಸಿಲುಕಿಕೊಂಡಿದ್ದು, ನಿವಾಸಿಗಳು ಅಲ್ಲಿನ ಗುರುದ್ವಾರದಲ್ಲಿ ತಂಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಚುಂಗ್‌ಥಾಂಗ್ ರಾಜ್ಯ ರಾಜಧಾನಿ ಗ್ಯಾಂಗ್‌ಟಾಕ್‌ನಿಂದ ಸುಮಾರು 100 ಕಿ.ಮೀ ದೂರದಲ್ಲಿದೆ.

ಲಾಚೆನ್-ಚುಂಗ್‌ಥಾಂಗ್ ರಸ್ತೆಯ ಮುನ್ಶಿಥಾಂಗ್‌ನಲ್ಲಿ ಮತ್ತು ಲಾಚುಂಗ್-ಚುಂಗ್‌ಥಾಂಗ್ ರಸ್ತೆಯ ಲೆಮಾ/ಬಾಬ್‌ನಲ್ಲಿ ಭಾರಿ ಭೂಕುಸಿತಗಳು ಸಂಭವಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ.

ಶುಕ್ರವಾರ ಮತ್ತು ಮುಂದಿನ ಸೂಚನೆ ಬರುವವರೆಗೆ ಉತ್ತರ ಸಿಕ್ಕಿಂಗೆ ಪ್ರವಾಸಿಗರನ್ನು ಕಳುಹಿಸದಂತೆ ಜಿಲ್ಲಾಡಳಿತವು ಎಲ್ಲಾ ಪ್ರವಾಸಿ ನಿರ್ವಾಹಕರಿಗೆ ಸೂಚನೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್ 25 ರಂದು ಪ್ರವಾಸಿಗರಿಗೆ ಈ ಪ್ರದೇಶಕ್ಕೆ ಭೇಟಿ ನೀಡಲು ನೀಡಲಾದ ಎಲ್ಲಾ ಪರವಾನಗಿಗಳನ್ನು ಅಧಿಕಾರಿಗಳು ರದ್ದುಗೊಳಿಸಿದ್ದಾರೆ. ಸ್ಥಳೀಯ ಆಡಳಿತದ ಪ್ರಕಾರ, ಲಾಚುಂಗ್ ಮತ್ತು ಲಾಚೆನ್‌ಗೆ ಪ್ರವೇಶ ರಸ್ತೆಗಳು ತೀವ್ರವಾಗಿ ಕುಸಿದಿವೆ, ಪರಿಣಾಮ ಸುಮಾರು 1,000 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ.

ಲಾಚುಂಗ್ ಮತ್ತು ಲಾಚೆನ್ ಗಿರಿಧಾಮಗಳಾಗಿದ್ದು, ಅವುಗಳ ನೈಸರ್ಗಿಕ ಸೌಂದರ್ಯ ಮತ್ತು ಗುರುಡೊಂಗ್ಮಾರ್ ಸರೋವರ ಮತ್ತು ಯುಮ್ಥಾಂಗ್ ಕಣಿವೆಯಂತಹ ಜನಪ್ರಿಯ ಪ್ರವಾಸಿ ತಾಣಗಳಿಗೆ ಹತ್ತಿರದಲ್ಲಿವೆ.

Landslides and heavy rain leave 1,000 tourists stranded in North Sikkim
ಭಾರತದ 91 ಜಿಲ್ಲೆಗಳಲ್ಲಿ ಬರಗಾಲದ ಅಪಾಯ; 51 ಜಿಲ್ಲೆಗಳು ಹೆಚ್ಚಿನ ಪ್ರವಾಹ ಭೀತಿ: ಅಧ್ಯಯನ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com