ಪತಿ ಕೊಲ್ಲಲು ಪತ್ನಿ ಪ್ಲಾನ್: ಪಹಲ್ಗಾಮ್ ದಾಳಿಯಲ್ಲಿ ಹತ್ಯೆಯಾದ ಮೃತನ ಪತ್ನಿಯ ಬಗ್ಗೆ ಒಸಾಫ್ ಖಾನ್‌ ಆಕ್ಷೇಪಾರ್ಹ ಕಮೆಂಟ್!

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಇಡೀ ದೇಶವೇ ಆಘಾತಕ್ಕೊಳಗಾಗಿದೆ.
ಪತಿ ಕೊಲ್ಲಲು ಪತ್ನಿ ಪ್ಲಾನ್: ಪಹಲ್ಗಾಮ್ ದಾಳಿಯಲ್ಲಿ ಹತ್ಯೆಯಾದ ಮೃತನ ಪತ್ನಿಯ ಬಗ್ಗೆ ಒಸಾಫ್ ಖಾನ್‌ ಆಕ್ಷೇಪಾರ್ಹ ಕಮೆಂಟ್!
Updated on

ಜಬಲ್ಪುರ(ಮಧ್ಯಪ್ರದೇಶ): ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಇಡೀ ದೇಶವೇ ಆಘಾತಕ್ಕೊಳಗಾಗಿದೆ. ಅಲ್ಲಿ ಜನರು ಮೃತರಿಗೆ ಗೌರವ ಸಲ್ಲಿಸುತ್ತಿರುವಾಗ ಮೊಹಮ್ಮದ್ ಒಸಾಫ್ ಎಂಬಾತ ಸಾಮಾಜಿಕ ಮಾಧ್ಯಮ ವೇದಿಕೆಯಾದ ಫೇಸ್‌ಬುಕ್‌ನಲ್ಲಿ ಈ ಸೂಕ್ಷ್ಮ ವಿಷಯದ ಕುರಿತು ಪ್ರಚೋದನಕಾರಿ ಕಾಮೆಂಟ್ ಮಾಡಿದ್ದಾನೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಬಜರಂಗದಳದ ಜಬಲ್ಪುರ ವಿಭಾಗದ ಭದ್ರತಾ ಮುಖ್ಯಸ್ಥ ವಿಕಾಸ್ ಖರೆ, ಅಭಯ್ ಶ್ರೀವಾಸ್ತವ, ಸಿದ್ಧಾರ್ಥ್ ರಾಯ್ಕ್ವಾರ್ ಈ ಪೋಸ್ಟ್‌ಗೆ ಆಕ್ಷೇಪ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು ಈ ಸಂಬಂಧ ಪೊಲೀಸ್ ಠಾಣೆಯ ಉಸ್ತುವಾರಿ ಧೀರಜ್ ರಾಜ್ ಈ ಪೋಸ್ಟ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆನಂದ್ ನಗರದ ನಿವಾಸಿ ಓಸಾಫ್ ಖಾನ್ ನನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದರು.

ಪಹಲ್ಗಾಮ್ ಹತ್ಯಾಕಾಂಡದಲ್ಲಿ ಭಯೋತ್ಪಾದಕರಿಂದ ಹತ್ಯೆಯಾದ ಗಂಡನನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಮಹಿಳೆಯ ಬಗ್ಗೆ ಒಸಾಫ್ ಖಾನ್ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸ್ಟೇಷನ್ ಹೌಸ್ ಅಧಿಕಾರಿ ಧೀರಜ್ ರಾಜ್ ಹೇಳಿದ್ದಾರೆ. ಆತನ ವಿರುದ್ಧ ಸೆಕ್ಷನ್ 196(1) ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಮಾಡಿದ ಕೃತ್ಯದಿಂದ ಜನರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಆದ್ದರಿಂದ ಪೊಲೀಸರು ಆತನನ್ನು ಸೆಕ್ಷನ್ 170 ಬಿಎನ್‌ಎಸ್‌ಎಸ್ ಅಡಿಯಲ್ಲಿ ಬಂಧಿಸಿದ್ದಾರೆ.

ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿರುವುದು ಅತ್ಯಂತ ಕ್ರೂರ ಘಟನೆ. ದಾಳಿಕೋರರು 25 ಪ್ರವಾಸಿಗರನ್ನು ಕ್ರೂರವಾಗಿ ಕೊಂದಿದ್ದಾರೆ. ಈ ಘಟನೆಯ ನಂತರ ಇಡೀ ದೇಶವೇ ದುಃಖದಲ್ಲಿದೆ. ಸೇನೆಯು ಭಯೋತ್ಪಾದಕರಿಗಾಗಿ ಹುಡುಕಾಟ ನಡೆಸುತ್ತಿದೆ.

ಪತಿ ಕೊಲ್ಲಲು ಪತ್ನಿ ಪ್ಲಾನ್: ಪಹಲ್ಗಾಮ್ ದಾಳಿಯಲ್ಲಿ ಹತ್ಯೆಯಾದ ಮೃತನ ಪತ್ನಿಯ ಬಗ್ಗೆ ಒಸಾಫ್ ಖಾನ್‌ ಆಕ್ಷೇಪಾರ್ಹ ಕಮೆಂಟ್!
ಜಮ್ಮು-ಕಾಶ್ಮೀರ: LET ಟಾಪ್ ಕಮಾಂಡರ್​ ಹತ್ಯೆ; ಬಂಡಿಪೋರಾ ಎನ್ ಕೌಂಟರ್ ನಲ್ಲಿ ಅಲ್ತಾಫ್ ಲಲ್ಲಿ ಫಿನಿಶ್!

ಸಾಮಾಜಿಕ ಮಾಧ್ಯಮದಲ್ಲಿ ಘಟನೆಗೆ ಬರುವ ಪ್ರತಿಕ್ರಿಯೆಯನ್ನು ಗಮನಿಸಲು ಮತ್ತು ನಿರಂತರವಾಗಿ ಮೇಲ್ವಿಚಾರಣೆ ಮಾಡಲು, ಜಬಲ್ಪುರ ಪೊಲೀಸ್ ವರಿಷ್ಠಾಧಿಕಾರಿ ಸಂಪತ್ ಉಪಾಧ್ಯಾಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕಲಾದ್ಗಿ ಅವರು ಸಾಮಾಜಿಕ ಮಾಧ್ಯಮಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್‌ಗಳು ಮತ್ತು ಕಾಮೆಂಟ್‌ಗಳ ಮೇಲೆ ನಿರಂತರವಾಗಿ ನಿಗಾ ಇಡುವಂತೆ ನಿರ್ದೇಶಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ರೀತಿಯ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಂಚಿಕೊಳ್ಳಬೇಡಿ ಅಥವಾ ಫಾರ್ವರ್ಡ್ ಮಾಡಬೇಡಿ ಎಂದು ಎಸ್‌ಪಿ ಜಬಲ್ಪುರ್ ಜನರು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com