
ಚಂಡೀಗಡ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳು 48 ಗಂಟೆಗಳ ಒಳಗೆ ದೇಶವನ್ನು ತೊರೆಯುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನಿ ಪ್ರಜೆಗಳನ್ನು ವಿವಾಹವಾದ ಭಾರತೀಯ ಮಹಿಳೆಯರು ಸಂದಿಗ್ದತೆಗೆ ಸಿಲುಕಿದ್ದಾರೆ.
ಭಾರತೀಯ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ಈ ಮಹಿಳೆಯರು ಈಗ ಅಟ್ಟಾರಿ ಗಡಿಯಲ್ಲಿ ಸಿಲುಕಿದ್ದಾರೆ. ಏಕೆಂದರೆ ವಲಸೆ ಅಧಿಕಾರಿಗಳು ದೇಶವನ್ನು ತೊರೆಯಲು ಬಿಡುತ್ತಿಲ್ಲ ಎಂದು ವರದಿಯಾಗಿದೆ.
ಆದರೆ ಪಾಕಿಸ್ತಾನಿ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ಅವರ ಅಪ್ರಾಪ್ತ ಮಕ್ಕಳನ್ನು ಗಡಿ ದಾಟಲು ಅನುಮತಿ ನೀಡಲಾಗುತ್ತಿದೆ, ಆದರೆ ಈ ಹೆಂಗಸರು ತಮ್ಮ ಮಕ್ಕಳೊಂದಿಗೆ ಪಾಕಿಸ್ತಾನದಲ್ಲಿರುವ ತಮ್ಮ ಮನೆಗಳಿಗೆ ವಾಪಸ್ ಕಳುಹಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಪಾಕಿಸ್ತಾನದ ಪ್ರಜೆಗಳೊಂದಿಗೆ ವಿವಾಹವಾಗಿರುವ ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಸಾದ್ವಿ ಅಲ್ವಿ ತನ್ನ ಮಗನೊಂದಿಗೆ ಹೊರಡಲು ಅಟ್ಟಾರಿ ಗಡಿಯನ್ನು ತಲುಪಿದರು. ಆದರೆ ಅಲ್ಲಿ ತಡೆದು ನಿಲ್ಲಿಸಲಾಯಿತು. ತಾನು ದೆಹಲಿಗೆ ಸೇರಿದವಳು ಮತ್ತು ಕರಾಚಿ ಪುರುಷನೊಂದಿಗೆ ಮದುವೆಯಾಗಿದ್ದೇನೆ, ಆದ್ದರಿಂದ ನಾನು ಅಲ್ಲಿಗೆ ಮರಳಬೇಕು.
ನನ್ನ ಐದು ವರ್ಷದ ಮಗ ಪಾಕಿಸ್ತಾನಿ ಪ್ರಜೆ, ಹೀಗಾಗಿ, ಎಲ್ಲಾ ಪಾಕಿಸ್ತಾನಿಗಳು 48 ಗಂಟೆಗಳಲ್ಲಿ ದೇಶವನ್ನು ತೊರೆಯಬೇಕು ಎಂದು ಭಾರತ ಸರ್ಕಾರ ಹೇಳಿದಂತೆ ಅವನು ಹಿಂತಿರುಗಬೇಕಾಗಿದೆ. ಆದರೆ ಅವನು ಒಬ್ಬನೇ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಪಾಕಿಸ್ತಾನದಲ್ಲಿ 10 ವರ್ಷಗಳ ಹಿಂದೆ ವಿವಾಹವಾದ ಭಾರತೀಯ ಪ್ರಜೆ ಮಜಿದಾ ಖಾನ್, ಭಾರತದಲ್ಲಿ ಜನಿಸಿದರೂ ಪಾಕಿಸ್ತಾನಿ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ತನ್ನ ಎರಡೂ ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದಾಳೆ. "ನನ್ನ ಕುಟುಂಬವನ್ನು ಭೇಟಿ ಮಾಡಲು ನಾನು ಫೆಬ್ರವರಿಯಲ್ಲಿ ಇಲ್ಲಿಗೆ ಬಂದಿದ್ದೇನೆ ಮತ್ತು ಈಗ, ಈ ಬೆಳವಣಿಗೆಯಿಂದಾಗಿ, ನಾವು 48 ಗಂಟೆಗಳ ಒಳಗೆ ಹೊರಡಬೇಕಾಯಿತು ಎಂದು ತಿಳಿಸಿದ್ದಾರೆ.
Advertisement