ಶಶಿ ತರೂರ್ ಕಾಂಗ್ರೆಸ್ ಜೊತೆಗಿದ್ದಾರೆಯೇ ಅಥವಾ ಬಿಜೆಪಿಗೆ 'ಕೈ' ಜೋಡಿಸಿದ್ದಾರೆಯೇ?: ಪಹಲ್ಗಾಮ್ ಹೇಳಿಕೆಗೆ ಕಿಡಿ; Video

"ನಾನು ಶಶಿ ತರೂರ್ ಅವರನ್ನು ಕೇಳಲು ಬಯಸುತ್ತೇನೆ, ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆಯೇ ಅಥವಾ ಬಿಜೆಪಿಯಲ್ಲಿದ್ದಾರೆಯೇ? ಅವರು ಸೂಪರ್-ಬಿಜೆಪಿ ವ್ಯಕ್ತಿಯಾಗಲು ಪ್ರಯತ್ನಿಸುತ್ತಿದ್ದಾರೆಯೇ?
ಕಾಂಗ್ರೆಸ್ ಮುಖಂಡ ಶಶಿ ತರೂರ್
ಕಾಂಗ್ರೆಸ್ ಮುಖಂಡ ಶಶಿ ತರೂರ್
Updated on

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರದ ಘಟನೆಗಳ ಕುರಿತು ಶಶಿ ತರೂರ್ ಅವರ ಹೇಳಿಕೆಗಳಿಗೆ ಕಾಂಗ್ರೆಸ್ ನಾಯಕ ಉದಿತ್ ರಾಜ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಅವರ ರಾಜಕೀಯ ನಿಷ್ಠೆಯನ್ನು ಪ್ರಶ್ನಿಸಿದ್ದಾರೆ.

"ನಾನು ಶಶಿ ತರೂರ್ ಅವರನ್ನು ಕೇಳಲು ಬಯಸುತ್ತೇನೆ, ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆಯೇ ಅಥವಾ ಬಿಜೆಪಿಯಲ್ಲಿದ್ದಾರೆಯೇ? ಅವರು ಸೂಪರ್-ಬಿಜೆಪಿ ವ್ಯಕ್ತಿಯಾಗಲು ಪ್ರಯತ್ನಿಸುತ್ತಿದ್ದಾರೆಯೇ? ಸರ್ಕಾರ ಪಿಒಕೆಯನ್ನು ಯಾವಾಗ ತನ್ನ ವಶಕ್ಕೆ ತೆಗೆದುಕೊಳ್ಳುತ್ತಿದೆ ಎಂದು ಶಶಿ ತರೂರ್ ಬಿಜೆಪಿಯನ್ನು ಕೇಳಬೇಕು. ಶಶಿ ತರೂರ್ ಬಿಜೆಪಿಯ ವಕ್ತಾರರಾಗಿದ್ದಾರೆಯೇ?" ಎಂದು ಉದಿತ್ ರಾಜ್ ವಾಗ್ದಾಳಿ ನಡೆಸಿದ್ದಾರೆ.

ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿ ಬಹುಶಃ ಗುಪ್ತಚರ ವೈಫಲ್ಯದಿಂದ ಸಂಭವಿಸಿದೆ ಎಂದು ಶಶಿ ತರೂರ್ ಭಾನುವಾರ ಹೇಳಿದ್ದರು. ಅಲ್ಲದೆ ಅಕ್ಟೋಬರ್ 7 (2023) ರಂದು ಭಯೋತ್ಪಾದಕ ಸಂಘಟನೆ ಹಮಾಸ್ ನಡೆಸಿದ ದಾಳಿಗೆ ಇದನ್ನು ಹೋಲಿಸಿದ ನಂತರ ಕಾಂಗ್ರೆಸ್ ನಾಯಕನಿಂದ ಈ ಪ್ರತಿಕ್ರಿಯೆ ಬಂದಿದೆ.

"ಖಂಡಿತ, ಗುಪ್ತಚರ ಮಾಹಿತಿ ಇರಲಿಲ್ಲ. ಕೆಲವು ವೈಫಲ್ಯಗಳು ಇದ್ದವು... ಆದರೆ ಎಲ್ಲರ ಪ್ರಕಾರ ವಿಶ್ವದ ಅತ್ಯುತ್ತಮ ಗುಪ್ತಚರ ಸೇವೆಯಾದ ಇಸ್ರೇಲ್‌ ಸಹ ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ದಾಳಿ ಆಘಾತ ಉಂಟು ಮಾಡಿತ್ತು. ಇದಕ್ಕೆ ಇಸ್ರೇಲ್ ಗುಪ್ತಚರ ವೈಫಲ್ಯ ಕಾರಣ. ಅದೇ ರೀತಿ, ನಾವು ಸಹ ಪ್ರಸ್ತುತ ಬಿಕ್ಕಟ್ಟನ್ನು ಪರಿಹರಿಸಬೇಕು ಮತ್ತು ನಂತರ ಸರ್ಕಾರದಿಂದ ಉತ್ತರದಾಯಿತ್ವವನ್ನು ಕೋರಬೇಕು ಎಂದು ನಾನು ಭಾವಿಸುತ್ತೇನೆ. ಯಾವುದೇ ದೇಶವು ಎಂದಿಗೂ ಶೇ. 100 ರಷ್ಟು ಗುಪ್ತಚರ ಮಾಹಿತಿ ಹೊಂದಲು ಸಾಧ್ಯವಿಲ್ಲ" ಎಂದು ಪರೋಕ್ಷವಾಗಿ ಮೋದಿ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದರು.

ತರೂರ್ ಅವರ ನಿಲುವಿನ ಬಗ್ಗೆ ಸ್ಪಷ್ಟೀಕರಣ ಕೇಳಿದ ರಾಜ್, ನಿರ್ದಿಷ್ಟವಾಗಿ ರಾಷ್ಟ್ರೀಯ ಭದ್ರತೆ ಮತ್ತು ಜಾಗತಿಕ ಭಯೋತ್ಪಾದನೆಯ ಬಗ್ಗೆ ಕಾಂಗ್ರೆಸ್ ನಾಯಕನ ಹೇಳಿಕೆಯನ್ನು ಪ್ರಶ್ನಿಸಿದರು. "9/11 ರ ನಂತರ ಅಮೆರಿಕದಲ್ಲಿ ಯಾವ ಭಯೋತ್ಪಾದಕ ಘಟನೆ ನಡೆದಿದೆ ಎಂದು ನಾನು ಅವರನ್ನು ಕೇಳಲು ಬಯಸುತ್ತೇನೆ? ಬಿಜೆಪಿ ಅವರನ್ನು ತನ್ನ ವಕ್ತಾರರನ್ನಾಗಿ ನೇಮಿಸಿದೆಯೇ?" ಎಂದು ಪ್ರಶ್ನಿಸಿದರು ಮತ್ತು ಸೂಕ್ಷ್ಮ ವಿಷಯಗಳ ಬಗ್ಗೆ ತರೂರ್ ಅವರ ನಿಲುವಿನ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಭಾನುವಾರ ANI ಜೊತೆ ಮಾತನಾಡಿದ ಶಶಿ ತರೂರ್, ಭಯೋತ್ಪಾದಕ ದಾಳಿಗಳನ್ನು ಯಶಸ್ವಿಯಾಗಿ ತಡೆಯುವುದು ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ, ಆದರೆ ವೈಫಲ್ಯಗಳನ್ನು ಎತ್ತಿ ತೋರಿಸಲಾಗುತ್ತದೆ ಎಂದು ಗಮನಸೆಳೆದರು.

"ಯಶಸ್ವಿಯಾಗಿ ತಡೆಯಲಾದ ವಿವಿಧ ಭಯೋತ್ಪಾದಕ ದಾಳಿಗಳ ಬಗ್ಗೆ ನಮಗೆ ಎಂದಿಗೂ ತಿಳಿಯುವುದಿಲ್ಲ. ಆದರೆ "ನಾವು ತಡೆಯಲು ವಿಫಲರಾದವರ ಬಗ್ಗೆ ಮಾತ್ರ ಮಾತನಾಡುತ್ತೇವೆ. ಯಾವುದೇ ದೇಶದಲ್ಲಿ ಇದು ಸಾಮಾನ್ಯ. ವೈಫಲ್ಯಗಳು ಇದ್ದೇ ಇರುತ್ತವೆ. ನಾನು ಒಪ್ಪುತ್ತೇನೆ, ಆದರೆ ಅದು ಈಗ ನಮ್ಮ ಮುಖ್ಯ ಗಮನವಾಗಿರಬಾರದು..." ಎಂದು ಶಶಿ ತರೂರ್ ಹೇಳಿದ್ದರು.

ಕಾಂಗ್ರೆಸ್ ಮುಖಂಡ ಶಶಿ ತರೂರ್
Watch | ಬಿಲಾವಲ್ ಹೇಳಿಕೆ ಚೈಲ್ಡಿಶ್, ಅವರ ತಾಯಿಯನ್ನು ಅಲ್ಲಿನ ಉಗ್ರರೇ ಕೊಂದಿದ್ದು...: Owaisi

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com