ರಾಷ್ಟ್ರೀಯ ಭದ್ರತಾ ಮಂಡಳಿಯ ಪರಿಷ್ಕರಣೆ: RAW ಮಾಜಿ ಮುಖ್ಯಸ್ಥ ಅಲೋಕ್ ಜೋಶಿ ನೂತನ ಅಧ್ಯಕ್ಷ

ಅವರು ಭಾರತದ ಮಿಲಿಟರಿ, ಪೊಲೀಸ್ ಮತ್ತು ವಿದೇಶಿ ಸೇವೆಗಳ ನಿವೃತ್ತ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಏಳು ಸದಸ್ಯರ ಮಂಡಳಿಯನ್ನು ಮುನ್ನಡೆಸಲಿದ್ದಾರೆ.
Meeting held under PM Narendra Modi leadership
ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆ
Updated on

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಕೇಂದ್ರ ಸರ್ಕಾರವು ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯನ್ನು (NSAB) ಪರಿಷ್ಕರಿಸಿದೆ, ಸಶಸ್ತ್ರ ಪಡೆಗಳು, ಗುಪ್ತಚರ, ರಾಜತಾಂತ್ರಿಕತೆ ಮತ್ತು ಪೊಲೀಸ್ ಸೇವೆಗಳ ಉನ್ನತ ಮಾಜಿ ಅಧಿಕಾರಿಗಳನ್ನು ಮಂಡಳಿಗೆ ಸೇರಿಸಿಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಇದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ನಡೆಸುತ್ತಿರುವ ವಿಶಾಲವಾದ ರಾಷ್ಟ್ರೀಯ ಭದ್ರತಾ ಮರುಮಾಪನದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಮಾಜಿ ಸಂಶೋಧನಾ ಮತ್ತು ವಿಶ್ಲೇಷಣಾ ವಿಭಾಗದ (R&AW) ಮುಖ್ಯಸ್ಥ ಅಲೋಕ್ ಜೋಶಿ ಅವರನ್ನು ಎನ್ ಎಸ್ ಎಬಿಯ ಹೊಸ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅವರು ಭಾರತದ ಮಿಲಿಟರಿ, ಪೊಲೀಸ್ ಮತ್ತು ವಿದೇಶಿ ಸೇವೆಗಳ ನಿವೃತ್ತ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಏಳು ಸದಸ್ಯರ ಮಂಡಳಿಯನ್ನು ಮುನ್ನಡೆಸಲಿದ್ದಾರೆ. ಇವರಲ್ಲಿ ಮಾಜಿ ಪಶ್ಚಿಮ ವಾಯು ಕಮಾಂಡರ್ ಏರ್ ಮಾರ್ಷಲ್ ಪಿ.ಎಂ. ಸಿನ್ಹಾ, ಮಾಜಿ ದಕ್ಷಿಣ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಎ.ಕೆ. ಸಿಂಗ್ ಮತ್ತು ಸಶಸ್ತ್ರ ಪಡೆಗಳ ರಿಯರ್ ಅಡ್ಮಿರಲ್ ಮಾಂಟಿ ಖನ್ನಾ ಸೇರಿದ್ದಾರೆ. ಒಟ್ಟು ಆರು ಮಂದಿ ಸದಸ್ಯರನ್ನು ಮಂಡಳಿಗೆ ಸೇರ್ಪಡೆ ಮಾಡಲಾಗಿದೆ.

Meeting held under PM Narendra Modi leadership
Pahalgam Terror Attack: 'ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಕಾರ್ಯಾಚರಣೆ ಸ್ವಾತಂತ್ರ್ಯ'; ಪ್ರಧಾನಿ ಮೋದಿ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರ

ಮಂಡಳಿಯಲ್ಲಿ ಭಾರತೀಯ ಪೊಲೀಸ್ ಸೇವೆಯ ನಿವೃತ್ತ ಅಧಿಕಾರಿಗಳಾದ ರಾಜೀವ್ ರಂಜನ್ ವರ್ಮಾ, ಮನಮೋಹನ್ ಸಿಂಗ್ ಮತ್ತು ನಿವೃತ್ತ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿ ಬಿ. ವೆಂಕಟೇಶ್ ವರ್ಮಾ ಕೂಡ ಇದ್ದಾರೆ.

2019ರಲ್ಲಿ ಪುಲ್ವಾಮಾ ದಾಳಿಯ ನಂತರ ಕೊನೆಯದಾಗಿ ಸಭೆ ಸೇರಿದ ರಾಜಕೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯನ್ನು ಇತ್ತೀಚಿನ ದಾಳಿಯ ನಂತರ ಮತ್ತೆ ಸಕ್ರಿಯಗೊಳಿಸಲಾಗಿದೆ, ಇದು ಮುಂದೆ ಸಂಭಾವ್ಯ ಬಲವಾದ ಕ್ರಮವನ್ನು ಕೇಂದ್ರ ಸರ್ಕಾರ ಕೈಗೊಳ್ಳುವ ಬಗ್ಗೆ ಸುಳಿವು ನೀಡುತ್ತದೆ.

ಇದಕ್ಕೂ ಮುನ್ನ, ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಅವರು ಅರೆಸೈನಿಕ ಪಡೆಗಳ ಮುಖ್ಯಸ್ಥರು ಮತ್ತು ಹಿರಿಯ ಭದ್ರತಾ ಅಧಿಕಾರಿಗಳು ಭಾಗವಹಿಸಿದ್ದ ಪ್ರತ್ಯೇಕ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಇದು ಬಿಕ್ಕಟ್ಟಿಗೆ ಕೇಂದ್ರೀಕೃತ ಪ್ರತಿಕ್ರಿಯೆಯನ್ನು ಮತ್ತಷ್ಟು ಒತ್ತಿಹೇಳುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com