ಪಹಲ್ಗಾಮ್ ದಾಳಿಯ ಹಿಂದಿನ ದಿನ ಶಂಕಿತ ಉಗ್ರ ನನ್ನೊಂದಿಗೆ ಮಾತನಾಡಿದ್ದ: ಮಹಾರಾಷ್ಟ್ರ ವ್ಯಕ್ತಿ

"ಹಿಂದೂ ಹೋ ಕ್ಯಾ, ನೀವು ಕಾಶ್ಮೀರದವರಂತೆ ಕಾಣುತ್ತಿಲ್ಲ" ಎಂದು ಕಳೆದ ಏಪ್ರಿಲ್ 21 ರಂದು ಬೈಸರನ್ ಕಣಿವೆಯ ಆಹಾರ ಅಂಗಡಿಯಲ್ಲಿ ಶಂಕಿತ ಉಗ್ರ ತನ್ನನ್ನು ಪ್ರಶ್ನಿಸಿದ್ದ ಎಂದು ಆದರ್ಶ್ ರಾವತ್ ಎಂಬ ಯುವಕ ಹೇಳಿದ್ದಾರೆ.
ಶಂಕಿತ ಉಗ್ರರು
ಶಂಕಿತ ಉಗ್ರರು
Updated on

ಜಲ್ನಾ: ಪಹಲ್ಗಾಮ್ ಭಯೋತ್ಪಾದನಾ ದಾಳಿಕೋರರಲ್ಲಿ ಒಬ್ಬ ಹತ್ಯಾಕಾಂಡದ ಒಂದು ದಿನ ಮುಂಚೆ ತನ್ನೊಂದಿಗೆ ಮಾತನಾಡಿದ್ದರು ಎಂದು ಇತ್ತೀಚೆಗೆ ಕಾಶ್ಮೀರದಿಂದ ಹಿಂದಿರುಗಿದ ಮಹಾರಾಷ್ಟ್ರದ ಜಲ್ನಾ ನಗರದ ಯುವಕನೊಬ್ಬ ಹೇಳಿಕೊಂಡಿದ್ದಾನೆ.

"ಹಿಂದೂ ಹೋ ಕ್ಯಾ. ನೀವು ಕಾಶ್ಮೀರದವರಂತೆ ಕಾಣುತ್ತಿಲ್ಲ" ಎಂದು ಕಳೆದ ಏಪ್ರಿಲ್ 21 ರಂದು ಬೈಸರನ್ ಕಣಿವೆಯ ಆಹಾರ ಅಂಗಡಿಯಲ್ಲಿ ಶಂಕಿತ ಉಗ್ರ ತನ್ನನ್ನು ಪ್ರಶ್ನಿಸಿದ್ದ ಎಂದು ಆದರ್ಶ್ ರಾವತ್ ಎಂಬ ಯುವಕ ಹೇಳಿದ್ದಾರೆ.

ಏಪ್ರಿಲ್ 22 ರಂದು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಜನಪ್ರಿಯ ಪ್ರವಾಸಿ ಪಟ್ಟಣವಾದ ಪಹಲ್ಗಾಮ್ ಬಳಿಯ ಹುಲ್ಲುಗಾವಲಿನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಇಪ್ಪತ್ತಾರು ಪ್ರವಾಸಿಗರು ಸಾವನ್ನಪ್ಪಿದರು ಮತ್ತು ಹಲವರು ಗಾಯಗೊಂಡಿದ್ದರು.

ಪ್ರವಾಸಿಗರ ಹತ್ಯಾಕಾಂಡದ ಕೆಲವು ದಿನಗಳ ನಂತರ, ಭದ್ರತಾ ಸಂಸ್ಥೆಗಳು ಮೂವರು ಶಂಕಿತ ದಾಳಿಕೋರರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಅವರಲ್ಲಿ ಒಬ್ಬ ತನ್ನೊಂದಿಗೆ ಮಾತನಾಡಿದ ವ್ಯಕ್ತಿಯನ್ನು ಹೋಲುತ್ತಾರೆ ಎಂದು ರಾವತ್ ಮಂಗಳವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ರಾವತ್ ಪ್ರಕಾರ, ಏಪ್ರಿಲ್ 21 ರಂದು ಪಹಲ್ಗಾಮ್‌ನಲ್ಲಿ ಕುದುರೆ ಸವಾರಿ ಹೋಗಿದ್ದ ಅವರು ಊಟಕ್ಕಾಗಿ "ಮ್ಯಾಗಿ ಸ್ಟಾಲ್" ನಲ್ಲಿ ನಿಲ್ಲಿಸಿದಾಗ ಒಬ್ಬ ವ್ಯಕ್ತಿ ಅವರನ್ನು ಸಂಪರ್ಕಿಸಿ ನೀವು ಹಿಂದೂವೇ ಎಂದು ಕೇಳಿದರು. ಅಲ್ಲದೆ ನೀನು ಕಾಶ್ಮೀರಿಯಂತೆ ಕಾಣುತ್ತಿಲ್ಲ ಎಂದು ರಾವತ್‌ಗೆ ಹೇಳಿದ್ದರು.

ಶಂಕಿತ ಉಗ್ರರು
ಪಹಲ್ಗಾಮ್ ದಾಳಿಯಿಂದ ಧ್ವಜ ಸಭೆ ರದ್ದು: ಪಾಕಿಸ್ತಾನ ಪ್ರದೇಶಕ್ಕೆ ಆಕಸ್ಮಿಕವಾಗಿ ಹೋದ BSF ಯೋಧನ ವಾಪಸಾತಿ ಮತ್ತಷ್ಟು ವಿಳಂಬ

"ನಂತರ ಶಂಕಿತನು ತನ್ನ ಸಹಚರನ ಕಡೆಗೆ ತಿರುಗಿ, 'ಇಂದು ಜನಸಂದಣಿ ಕಡಿಮೆ ಇದೆ' ಎಂದು ಹೇಳಿದನು" ಎಂದು ರಾವತ್ ತಿಳಿಸಿದ್ದಾರೆ.

"ಎನ್‌ಐಎ(ರಾಷ್ಟ್ರೀಯ ತನಿಖಾ ಸಂಸ್ಥೆ) ಬಿಡುಗಡೆ ಮಾಡಿದ ರೇಖಾಚಿತ್ರಗಳನ್ನು ನೋಡಿದ ನಂತರ, ತನ್ನೊಂದಿಗೆ ಮಾತನಾಡಿದ ವ್ಯಕ್ತಿ ನೆನಪಾದರು" ಎಂದು ಅವರು ಹೇಳಿದ್ದಾರೆ.

ಕಾಶ್ಮೀರದಲ್ಲಿ ತಮಗಾದ ಅನುಭವವನ್ನು ವಿವರವಾಗಿ ಎನ್‌ಐಎಗೆ ಇಮೇಲ್ ಮಾಡಿದ್ದೇನೆ. ನನಗೆ ನೆನಪಿರುವ ಎಲ್ಲವನ್ನೂ ನಾನು ಬರೆದಿದ್ದೇನೆ. ನೆಟ್‌ವರ್ಕ್ ಸಮಸ್ಯೆಗಳಿಂದಾಗಿ ಮ್ಯಾಗಿ ಸ್ಟಾಲ್ ಮಾಲೀಕರಿಗೆ ಆರಂಭದಲ್ಲಿ ಹಣ ಪಾವತಿಸಲು ಸಾಧ್ಯವಾಗಲಿಲ್ಲ ಎಂದು ಸಹ ಉಲ್ಲೇಖಿಸಿದ್ದೇನೆ. ಬೆಟ್ಟದಿಂದ ಕೆಳಗೆ ಬಂದ ನಂತರ ನಾನು ಅವರ ಫೋನ್ ಸಂಖ್ಯೆಯನ್ನು ತೆಗೆದುಕೊಂಡು ಅವರಿಗೆ ಹಣ ನೀಡಿದ್ದೇನೆ" ಎಂದು ರಾವತ್ ತಿಳಿಸಿದ್ದಾರೆ.

NIA ಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದ ರಾವತ್, "ಅವರು ನನ್ನನ್ನು ಸಂಪರ್ಕಿಸಿದರೆ ನಾನು ಅವರೊಂದಿಗೆ ಸಾಧ್ಯವಿರುವ ಎಲ್ಲ ರೀತಿಯ ಸಹಕಾರ ನೀಡುತ್ತೇನೆ" ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com