ಭಯೋತ್ಪಾದಕನಿಗೆ ಯಾವುದೇ ಧರ್ಮವಿಲ್ಲ, ಅವನಲ್ಲಿ ದುಷ್ಟತನದ ಮುಖವಲ್ಲದೆ ಬೇರೇನೂ ಇಲ್ಲ: ಮುಸ್ಲಿಮರಿಗೆ RSS ಸಂದೇಶ

ಜಮ್ಮು ಮತ್ತು ಕಾಶ್ಮೀರ ಮತ್ತು ದೇಶಾದ್ಯಂತದ ಮುಸ್ಲಿಮರು ಹತ್ಯೆಗೀಡಾದ ಭಯೋತ್ಪಾದಕರ ಅಂತ್ಯಕ್ರಿಯೆಯನ್ನು ನಿರಾಕರಿಸಬೇಕೆಂದು ಅವರು ಕರೆ ನೀಡಿದರು.
Kashmiri traders hold a candlelight vigil to condemn the Pahalgam attack, in Srinagar
ಪಹಲ್ಗಾಮ್ ದಾಳಿಯನ್ನು ಖಂಡಿಸಿ ಕಾಶ್ಮೀರದಲ್ಲಿ ಮೋಂಬತ್ತಿ ಮೆರವಣಿಗೆ
Updated on

ಪಹಲ್ಗಾಮ್ ದಾಳಿಯನ್ನು ಖಂಡಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಇಂದ್ರೇಶ್ ಕುಮಾರ್, ಭಯೋತ್ಪಾದಕರ ಅಂತ್ಯಕ್ರಿಯೆಗಳಲ್ಲಿ ಭಾಗವಹಿಸುವುದನ್ನು ಮತ್ತು ಅವರಿಗೆ ಸಮಾಧಿ ಸ್ಥಳಗಳಲ್ಲಿ ಜಾಗ ನೀಡುವುದನ್ನು ದೇಶದ ಮುಸಲ್ಮಾನರು ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ.

ಒಬ್ಬ ಭಯೋತ್ಪಾದಕನಿಗೆ ಯಾವುದೇ ಧರ್ಮವಿಲ್ಲ.ಅವನಲ್ಲಿ ದುಷ್ಟತನದ ಮುಖವಲ್ಲದೆ ಬೇರೇನೂ ಅಲ್ಲ. ನೀವು ಭಯೋತ್ಪಾದಕನಿಗೆ ನಮಾಜ್ ಮಾಡುವಾಗ, ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಾಗ ಅಥವಾ ಅವರಿಗೆ ಸಮಾಧಿ ನೀಡುವಾಗ, ಅವರು ಒಂದು ಧರ್ಮಕ್ಕೆ ಸೇರಿದವರು ಎಂದು ಹೇಳುವುದು ನಿಲ್ಲಬೇಕು ಎಂದು ಇಂದ್ರೇಶ್ ಕುಮಾರ್ ಜಮ್ಮುವಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರ ಮತ್ತು ದೇಶಾದ್ಯಂತದ ಮುಸ್ಲಿಮರು ಹತ್ಯೆಗೀಡಾದ ಭಯೋತ್ಪಾದಕರ ಅಂತ್ಯಕ್ರಿಯೆಯನ್ನು ನಿರಾಕರಿಸಬೇಕೆಂದು ಅವರು ಕರೆ ನೀಡಿದರು.

Kashmiri traders hold a candlelight vigil to condemn the Pahalgam attack, in Srinagar
ವಿಭಜನೆಯ ಅಂಚಿನಲ್ಲಿ ಪಾಕಿಸ್ತಾನ: ಭಾರತದ ವಿರುದ್ಧ ದ್ವೇಷದ ಮೂಲಕ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ- RSS

ಇಂತಹ ದೃಢ ಹೆಜ್ಜೆಯನ್ನು 20-30 ವರ್ಷಗಳ ಹಿಂದೆ ತೆಗೆದುಕೊಂಡಿದ್ದರೆ, ಜಮ್ಮು ಮತ್ತು ಕಾಶ್ಮೀರವು ನಾವು ಕಂಡ ದುರಂತಗಳನ್ನು ಅನುಭವಿಸುತ್ತಿರಲಿಲ್ಲ. ಭಯೋತ್ಪಾದನೆಯನ್ನು ವೈಭವೀಕರಿಸುವುದನ್ನು ತಿರಸ್ಕರಿಸುವ ಮತ್ತು ಬೇರ್ಪಡಿಸುವ ಸಮಯ ಈಗ ಬಂದಿದೆ ಎಂದರು.

ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿದ ಅವರು, ಇದು ಮಾನವೀಯತೆಯ ವಿರುದ್ಧದ ಅಪರಾಧ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಕುಮಾರ್, ಈ ರೀತಿ ಪ್ರಧಾನಿಯವರನ್ನು ಟೀಕಿಸುವುದು ಕಾಂಗ್ರೆಸ್ ನವರಿಗೆ ಚಾಳಿಯಾಗಿದೆ. ಕಾಂಗ್ರೆಸ್ ನಾಯಕರು ಪ್ರಧಾನಿಯನ್ನು ನಿಂದಿಸದಿದ್ದರೆ ಅವರಿಗೆ ತಿಂದ ಆಹಾರ ಜೀರ್ಣವಾಗುವುದಿಲ್ಲ. ಸೇನೆಯು ಭಯೋತ್ಪಾದನೆ ವಿರುದ್ಧ ಹೋರಾಡುವಾಗ ಅವರು ಸೇನಾ ಕಮಾಂಡರ್ ನ್ನು ಸಹ ವಿರೋಧಿಸುತ್ತಾರೆ. ಇದು ಅವರ ರಾಜಕೀಯ ವಿಧಾನವಾಗಿದೆ ಮತ್ತು ಇದು ಅತ್ಯಂತ ಖಂಡನೀಯ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com