ತನಿಖೆಗಾಗಿ ನಿಮ್ಮ ವೋಟರ್ ಐಡಿ ಹಸ್ತಾಂತರಿಸಿ: RJD ನಾಯಕ ತೇಜಸ್ವಿಗೆ ಚುನಾವಣಾ ಆಯೋಗ ಸೂಚನೆ

ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಶನಿವಾರ ವಿಶೇಷ ತೀವ್ರ ಪರಿಷ್ಕರಣೆ (SIR) ಭಾಗವಾಗಿ ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಾಣೆಯಾಗಿದೆ ಎಂದು ಹೇಳಿದ್ದರು.
 Tejashwi Yadav
ತೇಜಸ್ವಿ ಯಾದವ್online desk
Updated on

ಪಾಟ್ನ: ಚುನಾವಣಾ ಆಯೋಗ ಭಾನುವಾರ ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಅವರನ್ನು 'ಅಧಿಕೃತವಾಗಿ ನೀಡದಿದ್ದರೂ' ಅವರು ಹೊಂದಿದ್ದಾರೆಂದು ಹೇಳಿಕೊಂಡ ಮತದಾರರ ಗುರುತಿನ ಚೀಟಿಯನ್ನು 'ತನಿಖೆಗೆ ಹಸ್ತಾಂತರಿಸುವಂತೆ' ಕೇಳಿದೆ.

ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಶನಿವಾರ ವಿಶೇಷ ತೀವ್ರ ಪರಿಷ್ಕರಣೆ (SIR) ಭಾಗವಾಗಿ ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಾಣೆಯಾಗಿದೆ ಎಂದು ಹೇಳಿದ್ದು EPIC ಸಂಖ್ಯೆಯೊಂದಿಗೆ ಆನ್‌ಲೈನ್ ಹುಡುಕಾಟವನ್ನು ಮಾಧ್ಯಮಗಳೆದುರು ಬಹಿರಂಗಪಡಿಸಿದ್ದರು ಮತ್ತು ಸಂಬಂಧಪಟ್ಟ ಅಧಿಕಾರಿಗಳುಈ ಅರೋಪವನ್ನು ನಿರಾಕರಿಸಿದ ನಂತರ, ಅವರ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು 'ಬದಲಾಯಿಸಲಾಗಿದೆ' ಎಂದು ಆರೋಪಿಸಿದ್ದರು.

 Tejashwi Yadav
ಬಿಹಾರ ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲ: ತೇಜಸ್ವಿ ಯಾದವ್

ಮಾಜಿ ಉಪಮುಖ್ಯಮಂತ್ರಿಯನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ, ದಿಘಾ ವಿಧಾನಸಭಾ ಕ್ಷೇತ್ರದ ಪಾಟ್ನಾ ಸದರ್-ಕಮ್-ಚುನಾವಣಾ ನೋಂದಣಿ ಅಧಿಕಾರಿ, "ಆಗಸ್ಟ್ 2 ರಂದು ಪತ್ರಿಕಾಗೋಷ್ಠಿಯಲ್ಲಿ ನೀವು ಉಲ್ಲೇಖಿಸಿದ EPIC ಸಂಖ್ಯೆಯನ್ನು ಅಧಿಕೃತವಾಗಿ ನೀಡಲಾಗಿಲ್ಲ ಎಂದು ನಮ್ಮ ಪ್ರಾಥಮಿಕ ತನಿಖೆ ಸೂಚಿಸುತ್ತದೆ. ಆದ್ದರಿಂದ ವಿವರವಾದ ತನಿಖೆಗಾಗಿ EPIC ಕಾರ್ಡ್ ಅನ್ನು ಮೂಲದಲ್ಲಿ ಹಸ್ತಾಂತರಿಸಲು ನಿಮ್ಮನ್ನು ವಿನಂತಿಸಲಾಗಿದೆ" ಎಂದು ಸೂಚಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com