ಎಲ್.ಕೆ ಅಡ್ವಾಣಿ ದಾಖಲೆ ಮುರಿದ Amit Shah: ಅತಿ ದೀರ್ಘಾವಧಿ ಸೇವೆ ಸಲ್ಲಿಸಿದ ಕೇಂದ್ರ ಗೃಹ ಸಚಿವ; ಪ್ರಧಾನಿ ಮೋದಿ ಶ್ಲಾಘನೆ

ಆಪರೇಷನ್ ಸಿಂದೂರ್ ಕುರಿತ ನಿರ್ಣಯವನ್ನು ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಅಂಗೀಕರಿಸಲಾಯಿತು.
Narendra Modi-Amit Shah
ನರೇಂದ್ರ ಮೋದಿ-ಅಮಿತ್ ಶಾ
Updated on

ನವದೆಹಲಿ: ದೆಹಲಿಯಲ್ಲಿ ಇಂದು ಮಂಗಳವಾರ ನಡೆದ ಎನ್‌ಡಿಎ ಮೈತ್ರಿಕೂಟ ಸಭೆಯಲ್ಲಿ ಅಮಿತ್ ಶಾ ಅವರನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಇದುವರೆಗೆ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಕೇಂದ್ರ ಗೃಹ ಸಚಿವರಾಗಿದ್ದಾರೆ ಎಂದು ಹೇಳಿದ್ದಾರೆ.

ಆಪರೇಷನ್ ಸಿಂದೂರ್ ಕುರಿತ ನಿರ್ಣಯವನ್ನು ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಅಂಗೀಕರಿಸಲಾಯಿತು. 'ಪಹಲ್ಗಾಮ್ ದಾಳಿಗೆ ಕಾರಣವಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ನ್ನು ಅಮೆರಿಕ ವಿದೇಶಿ ಭಯೋತ್ಪಾದಕ ಸಂಸ್ಥೆ (FTO) ಮತ್ತು ವಿಶೇಷವಾಗಿ ಗೊತ್ತುಪಡಿಸಿದ ಜಾಗತಿಕ ಭಯೋತ್ಪಾದಕ (SDGT) ಎಂದು ಹೆಸರಿಸಿದೆ.

ಪಹಲ್ಗಾಮ್ ದಾಳಿಯನ್ನು ಖಂಡಿಸುವ ಬ್ರಿಕ್ಸ್ ಜಂಟಿ ಘೋಷಣೆ, ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ ತೋರಿಸುವುದು, ಭಯೋತ್ಪಾದನೆಯನ್ನು ಎದುರಿಸುವಲ್ಲಿ ದ್ವಿಮುಖ ಮಾನದಂಡಗಳನ್ನು ತಿರಸ್ಕರಿಸುವುದು, ಪಾಕಿಸ್ತಾನವು ತನ್ನ ನೆಲದಲ್ಲಿ ಹೇರಿದ ಭಯೋತ್ಪಾದನೆ ವಿರುದ್ಧ ಭಾರತದ ರಾಜತಾಂತ್ರಿಕ ನಿಲುವಿನ ಗೆಲುವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳುವ ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಎಲ್ ಕೆ ಆಡ್ವಾಣಿ ಹಿಂದಿಕ್ಕಿದ ಅಮಿತ್ ಶಾ

ಅಮಿತ್ ಶಾ ಅವರು ಭಾರತದಲ್ಲಿ ಅತಿ ಹೆಚ್ಚು ಕಾಲ ಕೇಂದ್ರ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ, ಮೇ 30, 2019 ರಂದು ಅಧಿಕಾರ ವಹಿಸಿಕೊಂಡಾಗಿನಿಂದ 2,258 ದಿನಗಳನ್ನು ಪೂರೈಸಿದ್ದಾರೆ. ಇದರೊಂದಿಗೆ, ಮಾರ್ಚ್ 19, 1998 ರಿಂದ ಮೇ 22, 2004 ರವರೆಗೆ 2,256 ದಿನಗಳ ಕಾಲ ಈ ಹುದ್ದೆಯನ್ನು ಅಲಂಕರಿಸಿದ್ದ ಹಿರಿಯ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರ ಅಧಿಕಾರಾವಧಿಯನ್ನು ಅಮಿತ್ ಶಾ ಮೀರಿಸಿದ್ದಾರೆ.

ಜನವರಿ 10, 1955 ರಿಂದ ಮಾರ್ಚ್ 7, 1961 ರವರೆಗೆ ಸೇವೆ ಸಲ್ಲಿಸಿದ ಕಾಂಗ್ರೆಸ್ ನಾಯಕ ಗೋವಿಂದ್ ಬಲ್ಲಭ್ ಪಂತ್ ಅವರ ಅಧಿಕಾರಾವಧಿಯನ್ನು ಅಮಿತ್ ಶಾ ಹಿಂದಿಕ್ಕಿದ್ದಾರೆ, ಅವರು 6 ವರ್ಷ 56 ದಿನಗಳನ್ನು ಈ ಹುದ್ದೆಯಲ್ಲಿ ಪೂರ್ಣಗೊಳಿಸಿದ್ದಾರೆ. ಅಮಿತ್ ಶಾ ಅವರು 2019 ರಲ್ಲಿ ಸಂಸತ್ತಿನಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸಾಂವಿಧಾನಿಕ ಸ್ಥಾನಮಾನವನ್ನು ಕೊನೆಗೊಳಿಸಿ 370 ನೇ ವಿಧಿಯನ್ನು ರದ್ದುಗೊಳಿಸುವುದಾಗಿ ಘೋಷಿಸಿದರು.

Narendra Modi-Amit Shah
ನೀವು PoK ಬಿಟ್ಟುಕೊಟ್ಟಿದ್ದೀರಿ, ಅದನ್ನು ವಾಪಸ್ ಪಡೆಯುವುದು ನಮ್ಮ ಕರ್ತವ್ಯ: ಕಾಂಗ್ರೆಸ್ ವಿರುದ್ಧ ಅಮಿತ್ ಶಾ ವಾಗ್ದಾಳಿ

ಅಮಿತ್ ಶಾ ಮೊದಲು ಮೇ 30, 2019 ರಂದು ಕೇಂದ್ರ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಜೂನ್ 9, 2024 ರವರೆಗೆ ಆ ಹುದ್ದೆಯಲ್ಲಿ ಮುಂದುವರೆದರು. ಹೊಸ ಸರ್ಕಾರ ರಚನೆಯಾದ ನಂತರ ಜೂನ್ 10, 2024 ರಂದು ಮತ್ತೆ ಅಧಿಕಾರ ವಹಿಸಿಕೊಂಡರು. ಗೃಹ ಸಚಿವಾಲಯದ ಜೊತೆಗೆ, ಅವರು ಕೇಂದ್ರ ಸಹಕಾರ ಸಚಿವರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಮಿತ್ ಶಾ ಅವರ ಅಧಿಕಾರಾವಧಿಯು ಆಂತರಿಕ ಭದ್ರತೆ ಮತ್ತು ಆಡಳಿತ ಚೌಕಟ್ಟಿನಲ್ಲಿ ಹಲವಾರು ಮಹತ್ವದ ಬೆಳವಣಿಗೆಗಳನ್ನು ಕಂಡಿದೆ. ಅವುಗಳಲ್ಲಿ ಪ್ರಮುಖವಾದುದು 2019 ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ 370 ನೇ ವಿಧಿಯನ್ನು ರದ್ದುಗೊಳಿಸುವ ನಿರ್ಧಾರ. ಅಂದಿನಿಂದ ಈ ಪ್ರದೇಶವು ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ತೀವ್ರ ಸುಧಾರಣೆಯನ್ನು ಕಂಡಿದೆ.

ಅವರ ಅಧಿಕಾರಾವಧಿಯಲ್ಲಿ ನಡೆದ ಇತರ ಬೆಳವಣಿಗೆಗಳಲ್ಲಿ ಎಡಪಂಥೀಯ ಉಗ್ರವಾದ ಮತ್ತು ಮಾವೋವಾದಿ ಚಟುವಟಿಕೆಗಳಿಗೆ ಸಂಬಂಧಿಸಿದ ಹಿಂಸಾಚಾರದಲ್ಲಿ ಗಣನೀಯ ಇಳಿಕೆ, ಪೌರತ್ವ ತಿದ್ದುಪಡಿ ಕಾಯ್ದೆ (CAA) ಹಂತ ಹಂತವಾಗಿ ಅನುಷ್ಠಾನ ಮತ್ತು ರಾಮ ಜನ್ಮಭೂಮಿ ದೇವಾಲಯ ನಿರ್ಮಾಣದ ಶಾಂತಿಯುತ ಪ್ರಗತಿ ಸೇರಿವೆ. ಈಶಾನ್ಯ ರಾಜ್ಯಗಳಲ್ಲಿ ಸಹಿ ಹಾಕಲಾದ ಹಲವಾರು ಶಾಂತಿ ಒಪ್ಪಂದಗಳು ಈ ಪ್ರದೇಶದಲ್ಲಿ ದೀರ್ಘಕಾಲದಿಂದ ಇದ್ದ ದಂಗೆಗಳನ್ನು ಪರಿಹರಿಸಲು ಸಹಕಾರಿಯಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com