
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಬಾಂಧವ್ಯ ದೇಶಕ್ಕೆ ದುಬಾರಿಯಾಗ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಮಂಗಳವಾರ ಲೇವಡಿ ಮಾಡಿದ್ದಾರೆ.
ಅವರಿಬ್ಬರು ಹಳೆಯ ಸ್ನೇಹಿತರು ಎಂಬುದನ್ನು ಬಲಪಡಿಸಲು ಫೋಟೋ ಆಪ್ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಎಂದು ಹೇಳುವ ಮೂಲಕ ಟ್ರಂಪ್ ಮತ್ತು ಪಿಎಂ ಮೋದಿ ಸ್ನೇಹ ಸಂಬಂಧದ ಹೇಳಿಕೆಗಳನ್ನು ಲೇವಡಿ ಮಾಡಿದ್ದಾರೆ.
"ದೋಸ್ತ್ ದೋಸ್ತ್ ನ ರಹಾ' ಎಂಬ ಜನಪ್ರಿಯ ಗೀತೆ ಇದೆ. ಪ್ರಧಾನಿಗೂ ಈ ಹಾಡು ಗೊತ್ತಿರಬೇಕು. 'ದೋಸ್ತ್ ದೋಸ್ತ್ ನ ರಹಾ, ಟ್ರಂಪ್ ಯಾರ್ ಹಮೇಂ ತೇರಾ ಐತ್ಬಾರ್ ನ ರಹಾ'. ಅವರಿಬ್ಬರು Howdy ಮೋದಿ' ಮತ್ತು 'ನಮಸ್ತೆ ಟ್ರಂಪ್' ಕಾರ್ಯಕ್ರಮ ನಡೆಸಿದ್ದರು. 'ಅಬ್ಕಿ ಬಾರ್ ಟ್ರಂಪ್ ಸರ್ಕಾರ್' ಎಂದು ಹೇಳಿದ್ದರು. photo ops ಕೂಡಾ ನಡೆದಿತ್ತು. ಟ್ರಂಪ್ ಅಧಿಕಾರ ವಹಿಸಿಕೊಂಡ ದಿನದಂದು ನಮ್ಮ ವಿದೇಶಾಂಗ ಸಚಿವರು ಮೊದಲ ಸಾಲಿನಲ್ಲಿ ಕುಳಿತಿದ್ದರು. ಅಧ್ಯಕ್ಷ ಟ್ರಂಪ್ ಅವರೊಂದಿಗೆ ವಿಶೇಷ ಬಾಂಧ್ಯವನ್ನು ಹಂಚಿಕೊಳ್ಳುವುದರೊಂದಿಗೆ ಅವರು ಅವರು ಹಳೆಯ ಸ್ನೇಹಿತರು ಎಂದು ಮೋದಿ ಹೇಳುತ್ತಿದ್ದರು.
ಅದೆಲ್ಲದರ ಫಲವೇನು? ಹೆಚ್ಚುವರಿ ಸುಂಕ ವಿಧಿಸುವ ಮೂಲಕ ಭಾರತಕ್ಕೆ "ಬೆದರಿಕೆ ಹಾಕಲಾಗುತ್ತಿದೆ. ರಷ್ಯಾದಿಂದ ತೈಲವನ್ನು ಖರೀದಿಸದಂತೆ ಒತ್ತಡ ಹಾಕಲಾಗುತ್ತಿದೆ. ಇದು ಉಭಯ ನಾಯಕರ ನಡುವಿನ "ವಿಶೇಷ ಬಾಂಧವ್ಯ" ದ ಪರಿಣಾಮವಾಗಿದೆ.ಈ ನಿರ್ಧಾರಗಳಿಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸುವಂತೆ ಒತ್ತಾಯಿಸಿದ್ದಾರೆ.
ತನ್ನಿಂದಾಗಿ ಆಪರೇಷನ್ ಸಿಂಧೂರ್ ಸ್ಥಗಿತಗೊಂಡಿದೆ ಎಂದು ಟ್ರಂಪ್ 32 ಬಾರಿ ಹೇಳಿಕೊಂಡಿದ್ದಾರೆ. ಈ ಕುರಿತು ಪ್ರಧಾನಿ ಮೋದಿ ಮೌನ ವಹಿಸಿದ್ದಾರೆ. ಅಮೆರಿಕದೊಂದಿಗಿನ ಭಾರತದ ದ್ವಿಪಕ್ಷೀಯ ಸಂಬಂಧಗಳು ಹದಗೆಟ್ಟಿದೆ ಜೊತೆಗೆ ಪಾಕಿಸ್ತಾನ ಮತ್ತು ಚೀನಾದ ಜೊತೆಗೆ ದೇಶಕ್ಕೆ ಸವಾಲಾಗಿದೆ ಎಂದು ಜೈರಾಮ್ ರಮೇಶ್ ಕಿಡಿಕಾರಿದರು.
Advertisement