ಜಮ್ಮು-ಕಾಶ್ಮೀರ: ಅರುಂಧತಿ ರಾಯ್ ಪುಸ್ತಕ ಸೇರಿ ಪ್ರತ್ಯೇಕತಾವಾದಿ ನಿರೂಪಣೆ ಉತ್ತೇಜಿಸುವ 25 ಪುಸ್ತಕಗಳಿಗೆ ನಿಷೇಧ!

ರೂಟ್ಲೆಡ್ಜ್, ಸ್ಟ್ಯಾನ್‌ಫೋರ್ಡ್ ಯೂನಿವರ್ಸಿಟಿ ಪ್ರೆಸ್, ಜುಬಾನ್ ಬುಕ್ಸ್ ಮತ್ತು ಹಾರ್ಪರ್ ಕಾಲಿನ್ಸ್‌ನಂತಹ ಪ್ರಮುಖ ಪ್ರಕಾಶಕರು ಪಟ್ಟಿಯಲ್ಲಿದ್ದಾರೆ.
File photo of Arundhati Roy
ಅರುಂಧತಿ ರಾಯ್ online desk
Updated on

ಸುಳ್ಳು ನಿರೂಪಣೆಗಳನ್ನು ಉತ್ತೇಜಿಸುವುದು, ಭಯೋತ್ಪಾದನೆಯನ್ನು ವೈಭವೀಕರಿಸುವುದು ಮತ್ತು ಈ ಪ್ರದೇಶದಲ್ಲಿ ಪ್ರತ್ಯೇಕತಾವಾದವನ್ನು ಪ್ರಚೋದಿಸುವ ಆರೋಪದ ಮೇಲೆ 25 ಪುಸ್ತಕಗಳನ್ನು ನಿಷೇಧಿಸಿ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಜಮ್ಮು-ಕಾಶ್ಮೀರ ಸರ್ಕಾರ ಆದೇಶಿಸಿದೆ.

ಭಾರತೀಯ ನ್ಯಾಯ ಸಂಹಿತಾ 2023 ರ ಸೆಕ್ಷನ್ 98 ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕಟಣೆಗಳು ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡುವಲ್ಲಿ ಮತ್ತು ಭಾರತೀಯ ರಾಜ್ಯದ ವಿರುದ್ಧ ಸಾರ್ವಜನಿಕ ಅಭಿಪ್ರಾಯವನ್ನು ದಾರಿ ತಪ್ಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ ಎಂದು ವರದಿಯಾದ ತನಿಖೆಗಳ ನಂತರ ಸರ್ಕಾರ ಈ ಕ್ರಮ ಕೈಗೊಂಡಿರುವುದಾಗಿ ಬುಧವಾರ ಅಧಿಸೂಚನೆಯಲ್ಲಿ ತಿಳಿಸಿದೆ.

ಆಗಸ್ಟ್ 5, 2025 ರಂದು ಗೃಹ ಇಲಾಖೆ ಹೊರಡಿಸಿದ ಅಧಿಸೂಚನೆಯ ಪ್ರಕಾರ, ನಿಷೇಧಿತ ಸಾಹಿತ್ಯವು ಐತಿಹಾಸಿಕ ಸಂಗತಿಗಳನ್ನು ವಿರೂಪಗೊಳಿಸುವ, ಭಯೋತ್ಪಾದಕರನ್ನು ವೈಭವೀಕರಿಸುವ, ಭದ್ರತಾ ಪಡೆಗಳನ್ನು ನಿಂದಿಸುವ ಮತ್ತು ಪರಕೀಯತೆ ಮತ್ತು ಧಾರ್ಮಿಕ ಮೂಲಭೂತೀಕರಣವನ್ನು ಉತ್ತೇಜಿಸುವ ಅಂಶಗಳನ್ನು ಒಳಗೊಂಡಿದೆ.

ಅಂತಹ ವಿಷಯವು 'ಭಯೋತ್ಪಾದಕ ಸಂಸ್ಕೃತಿ'ಗೆ ಕೊಡುಗೆ ನೀಡುತ್ತದೆ ಎಂದು ಅಧಿಸೂಚನೆಯು ಎಚ್ಚರಿಸಿದೆ. ನಿಷೇಧಿತ ಶೀರ್ಷಿಕೆಗಳಲ್ಲಿ ಮೊಹಮ್ಮದ್ ಯೂಸುಫ್ ಸರಾಫ್ ಅವರ ಕಾಶ್ಮೀರೀಸ್ ಫೈಟ್ ಫಾರ್ ಫ್ರೀಡಮ್, ಹಫ್ಸಾ ಕಾಂಜ್ವಾಲ್ ಅವರ ಕಾಲೋನೈಜಿಂಗ್ ಕಾಶ್ಮೀರ್, ಅರುಂಧತಿ ರಾಯ್ ಅವರ ಆಜಾದಿ, ಕ್ರಿಸ್ಟೋಫರ್ ಸ್ನೆಡೆನ್ ಅವರ ಇಂಡಿಪೆಂಡೆಂಟ್ ಕಾಶ್ಮೀರ್ ಮತ್ತು ತಾರಿಕ್ ಅಲಿ, ಅರುಂಧತಿ ರಾಯ್ ಮತ್ತು ಇತರರ ಕಾಶ್ಮೀರ್: ದಿ ಕೇಸ್ ಫಾರ್ ಫ್ರೀಡಮ್ ಸೇರಿವೆ.

File photo of Arundhati Roy
ಜಮ್ಮು-ಕಾಶ್ಮೀರ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ನಿಧನ

ರೂಟ್ಲೆಡ್ಜ್, ಸ್ಟ್ಯಾನ್‌ಫೋರ್ಡ್ ಯೂನಿವರ್ಸಿಟಿ ಪ್ರೆಸ್, ಜುಬಾನ್ ಬುಕ್ಸ್ ಮತ್ತು ಹಾರ್ಪರ್ ಕಾಲಿನ್ಸ್‌ನಂತಹ ಪ್ರಮುಖ ಪ್ರಕಾಶಕರು ಪಟ್ಟಿಯಲ್ಲಿದ್ದಾರೆ. ಈ ಪುಸ್ತಕಗಳ ನಿರಂತರ ಪ್ರಸರಣ ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡಿದೆ ಮತ್ತು ಆದ್ದರಿಂದ, ಅವುಗಳ ಪ್ರಕಟಣೆ, ವಿತರಣೆ ಅಥವಾ ಸ್ವಾಧೀನವನ್ನು ಈಗ ನಿಷೇಧಿಸಲಾಗಿದೆ ಎಂದು ಸರ್ಕಾರ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com