
ಜಲ್ನಾ: ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಅವರು ಆಗಸ್ಟ್ 29 ರಂದು ಮುಂಬೈನಲ್ಲಿ ಹೊಸದಾಗಿ ಪ್ರತಿಭಟನೆ ಆರಂಭಿಸುವುದಾಗಿ ಗುರುವಾರ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಜಾರಂಗೆ, ಮರಾಠಾ ಸಮುದಾಯದ ಇತರ ಸದಸ್ಯರೊಂದಿಗೆ ಆಗಸ್ಟ್ 27 ರಂದು ಜಲ್ನಾ ಜಿಲ್ಲೆಯ ತಮ್ಮ ಅಂತರವಾಲಿ ಸಾರತಿ ಗ್ರಾಮದಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ಮುಂಬೈಗೆ ಹೊರಡುವುದಾಗಿ ತಿಳಿಸಿದ್ದಾರೆ.
ಎಲ್ಲಾ ಮರಾಠರನ್ನು(ಕುಂಬಿಸ್) ಇತರ ಹಿಂದುಳಿದ ವರ್ಗಗಳ ಕೋಟಾದಡಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಜಾರಂಗೆ ಅವರು ಅನೇಕ ಬಾರಿ ಉಪವಾಸ ಸತ್ಯಾಗ್ರಹಗಳನ್ನು ಕೈಗೊಂಡಿದ್ದಾರೆ.
"ನಾವು ಆಗಸ್ಟ್ 27 ರಂದು ಬೆಳಗ್ಗೆ 10 ಗಂಟೆಗೆ ಅಂತರವಾಲಿ ಸಾರ್ತಿಯಿಂದ ಮುಂಬೈಗೆ ಹೊರಡುತ್ತೇವೆ. ಪುಣೆ ಜಿಲ್ಲೆಯ ಜುನ್ನಾರ್ ಪ್ರದೇಶದ ಶಿವನೇರಿ ಕೋಟೆಯ ಬಳಿ ನಾವು ಉಳಿದುಕೊಳ್ಳುತ್ತೇವೆ. ಅಂತರವಾಲಿಯಿಂದ ಶೇವ್‌ಗಾಂವ್, ಅಹಲ್ಯಾನಗರ ಮತ್ತು ಅಲೆಫಾಟಾ ಮೂಲಕ ಶಿವನೇರಿಗೆ ಹೋಗುತ್ತೇವೆ ಮತ್ತು ಮಳೆಗಾಲದ ಕಾರಣ ಮಲ್ಶೇಜ್ ಘಾಟ್ ಮೂಲಕ ಹೋಗುವುದಿಲ್ಲ" ಎಂದು ಜಾರಂಗೆ ತಿಳಿಸಿದ್ದಾರೆ.
Advertisement