
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮತಕಳ್ಳತನ ಬಗ್ಗೆ ತಾವು ನೀಡುವ ವಿವರಣೆ ಸತ್ಯವಾಗಿದೆ ಎಂದು ಹೇಳುವುದಾದರೆ, ಚುನಾವಣಾ ನಿಯಮಗಳ ಅಡಿಯಲ್ಲಿ ಘೋಷಣೆಗೆ ಸಹಿ ಹಾಕಲಿ ಮತ್ತು ಮತದಾರರ ಪಟ್ಟಿಯಿಂದ ತಪ್ಪಾಗಿ ಸೇರಿಸಲಾದ ಅಥವಾ ತೆಗೆದುಹಾಕಲಾದ ಹೆಸರುಗಳನ್ನು ಸಲ್ಲಿಸಲಿ ಎಂದು ಚುನಾವಣಾ ಆಯೋಗ ಸವಾಲು ಹಾಕಿದೆ ಎಂದು ತಿಳಿದುಬಂದಿದೆ.
ಕನಿಷ್ಠ ಮೂರು ರಾಜ್ಯಗಳಲ್ಲಿ ಮತ ಕಳ್ಳತನ ನಡೆದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದು ಈ ಬಗ್ಗೆ ಇಂದು ವಿಡಿಯೊ ಮೂಲಕ ವಿವರಣೆ ನೀಡಿದ್ದಾರೆ ಮತ್ತು ಬೆಂಗಳೂರಿನಲ್ಲಿ ಇಂದು ನಡೆದ ರ‍್ಯಾಲಿಯಲ್ಲಿ ಚುನಾವಣಾ ಆಯೋಗ ಮತ್ತು ಮೋದಿ ಸರ್ಕಾರ ವಿರುದ್ಧ ಹರಿಹಾಯ್ದಿದ್ದಾರೆ.
ಇದೀಗ ರಾಹುಲ್ ಗಾಂಧಿಯವರು ಮಾಡುತ್ತಿರುವ ಆರೋಪಗಳು, ಕೊಡುತ್ತಿರುವ ವಿವರಣೆಗಳ ಬಗ್ಗೆ ಸಹಿ ಮಾಡದಿದ್ದರೆ, ಅವರು ತಮ್ಮ ವಿಶ್ಲೇಷಣೆಯಲ್ಲಿ ನಂಬಿಕೆ ಇಟ್ಟುಕೊಂಡಿಲ್ಲ ಎಂದರ್ಥ ಮತ್ತು ಇದರಿಂದ ಅವರು ಮಾಡುತ್ತಿರುವುದು ಅಸಂಬದ್ಧ ಆರೋಪ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ ಎಂದು ಹೇಳಿದೆ. ಒಂದು ವೇಳೆ ವಿಫಲವಾದರೆ ರಾಷ್ಟ್ರದ ಮುಂದೆ ಕ್ಷಮೆಯಾಚಿಸಬೇಕಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ.
ಮೂರು ರಾಜ್ಯಗಳ ಚುನಾವಣಾ ಆಯೋಗಗಳು
ನಿನ್ನೆ ರಾಹುಲ್ ಗಾಂಧಿಯವರು ಮೂರು ರಾಜ್ಯಗಳಲ್ಲಿ ಮತದಾರರ ಪಟ್ಟಿಯಿಂದ ತಪ್ಪಾಗಿ ಸೇರಿಸಲಾಗಿದೆ ಅಥವಾ ಹೊರಗಿಡಲಾಗಿದೆ ಎಂದು ಹೇಳಲಾದ ಮತದಾರರ ಹೆಸರುಗಳನ್ನು ಹಂಚಿಕೊಳ್ಳಲು ಮತ್ತು ಈ ವಿಷಯದಲ್ಲಿ ಅಗತ್ಯ ಕ್ರಮಗಳನ್ನು ಪ್ರಾರಂಭಿಸಲು ಚುನಾವಣಾ ಅಧಿಕಾರಿಗಳಿಗೆ ಸಹಿ ಮಾಡಿದ ಘೋಷಣೆಯೊಂದಿಗೆ ಹಂಚಿಕೊಳ್ಳಲು ಚುನಾವಣಾ ಆಧಿಕಾರಿಗಳು ಕೇಳಿಕೊಂಡಿದ್ದರು.
ನಿನ್ನೆ ರಾಹುಲ್ ಗಾಂಧಿಯವರು, ಕರ್ನಾಟಕದ ಒಂದು ಕ್ಷೇತ್ರದಲ್ಲಿ 1,00,250 ಮತಗಳ ಕಳ್ಳತನವಾಗಿದ್ದು, ಈ ಕ್ಷೇತ್ರದಲ್ಲಿ 11,965 ನಕಲಿ ಮತದಾರರು, ನಕಲಿ ಮತ್ತು ಅಮಾನ್ಯ ವಿಳಾಸಗಳನ್ನು ಹೊಂದಿರುವ 40,009 ಮತದಾರರು, 10,452 ಬಹು ಸಂಖ್ಯಾತ ಮತದಾರರು ಅಥವಾ ಏಕ ವಿಳಾಸ ಮತದಾರರು, ಅಮಾನ್ಯ ಫೋಟೋಗಳನ್ನು ಹೊಂದಿರುವ 4,132 ಮತದಾರರು, 33,692 ಮತದಾರರು ಹೊಸ ಮತದಾರರ ನಮೂನೆ 6 ನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದರು.
Advertisement