K ಫಾರ್ ಕಾಬಾ, M ಫಾರ್ ಮಸೀದಿ: ಹಿಂದಿ ವರ್ಣಮಾಲೆಯಲ್ಲಿ ಮಕ್ಕಳಿಗೆ ಬೋಧನೆ; ಪ್ರಾಂಶುಪಾಲರ ವಿರುದ್ಧ ತನಿಖೆಗೆ ಆದೇಶ

ಮಧ್ಯಪ್ರದೇಶದಲ್ಲಿ ಇಸ್ಲಾಂ ಧರ್ಮದ ಪದಗಳ ಉಲ್ಲೇಖವಿರುವ ಹಿಂದಿ ವರ್ಣಮಾಲೆ ಚಾರ್ಟ್ ಅನ್ನು ವಿದ್ಯಾರ್ಥಿಗಳಿಗೆ ವಿತರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ವಿವಾದ ಭುಗಿಲೆದ್ದಿದ್ದು, ಶಿಕ್ಷಣ ಇಲಾಖೆ ತನಿಖೆ ಆರಂಭಿಸಿದೆ.
Representation purpose only
ಸಂಗ್ರಹ ಚಿತ್ರ
Updated on

ಮಧ್ಯಪ್ರದೇಶದಲ್ಲಿ ಇಸ್ಲಾಂ ಧರ್ಮದ ಪದಗಳ ಉಲ್ಲೇಖವಿರುವ ಹಿಂದಿ ವರ್ಣಮಾಲೆ ಚಾರ್ಟ್ ಅನ್ನು ವಿದ್ಯಾರ್ಥಿಗಳಿಗೆ ವಿತರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ವಿವಾದ ಭುಗಿಲೆದ್ದಿದ್ದು, ಶಿಕ್ಷಣ ಇಲಾಖೆ ತನಿಖೆ ಆರಂಭಿಸಿದೆ.

ಮಧ್ಯಪ್ರದೇಶದ ರೈಸನ್ ಜಿಲ್ಲೆಯ ಕಾನ್ವೆಂಟ್ ಶಾಲೆಯ ಪ್ರಾಂಶುಪಾಲ ಐಎ ಖುರೇಷಿ ವಿದ್ಯಾರ್ಥಿಗಳಿಗೆ ಹಿಂದಿ ವರ್ಣಮಾಲೆಯ ಚಾರ್ಟ್‌ಗಳನ್ನು ನೀಡಿದ್ದಾರೆ. ಚಾರ್ಟ್ ನಲ್ಲಿ 'ಕ' ಎಂದರೆ 'ಕಾಬಾ', 'ಎಂ' ಎಂದರೆ 'ಮಸೀದಿ' ಮತ್ತು 'ಎನ್' ಎಂದರೆ 'ನಮಾಜ್' ಎಂದ ಪದಗಳನ್ನು ಬಳಸಲಾಗಿದೆ. ಈ ಘಟನೆ ಬಯಲಿಗೆ ಬರುತ್ತಿದ್ದಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸದಸ್ಯರು ಪ್ರತಿಭಟನೆ ನಡೆಸಿ ಖುರೇಷಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರು ಉದ್ವಗ್ನಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO) ಪ್ರತಿಭಾ ಶರ್ಮಾ ಅವರು ಎಂದು ಹೇಳಿದರು. ಆರೋಪಗಳನ್ನು ತನಿಖೆ ಮಾಡಲಾಗುತ್ತಿದೆ ಎಂದು ಡಿಇಒ ಡಿಡಿ ರಜಕ್ ಹೇಳಿದರು. ಶಿಕ್ಷಣ ಇಲಾಖೆಯ ಮಾರ್ಗಸೂಚಿಗಳ ಪ್ರಕಾರ, ಒಂದು ನಿರ್ದಿಷ್ಟ ಧರ್ಮದ ಧಾರ್ಮಿಕ ಚಿಹ್ನೆಗಳನ್ನು ಹೊಂದಿರುವ ಅಧ್ಯಯನ ಸಾಮಗ್ರಿಗಳನ್ನು ಶಾಲೆಗಳಲ್ಲಿ ಕಲಿಸಲಾಗುವುದಿಲ್ಲ ಎಂದು ಅವರು ಹೇಳಿದರು.

Representation purpose only
ಜಗದೀಪ್ ಧಂಖರ್-ಸತ್ಯಪಾಲ್ ಮಲಿಕ್ ಅವರನ್ನು ನಡೆಸಿಕೊಂಡ ರೀತಿಗೆ ಟೀಕೆ: ಪಕ್ಷದ ವಕ್ತಾರನನ್ನು ಉಚ್ಛಾಟಿಸಿದ BJP

ಪ್ರಾಂಶುಪಾಲ ಖುರೇಷಿ ತಮ್ಮ ಅಜಾಗರೂಕ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಉರ್ದು-ಹಿಂದಿ ಮಿಶ್ರಿತ ಕೋಷ್ಟಕಗಳನ್ನು ಹೊಂದಿರುವ ಒಂದು ಅಥವಾ ಎರಡು ಪುಸ್ತಕಗಳು ವಿದ್ಯಾರ್ಥಿಗಳನ್ನು ತಲುಪಿವೆ ಎಂದು ಹೇಳಿದರು. ವರ್ಣಮಾಲೆಯ ಚಾರ್ಟ್‌ಗಳನ್ನು ಭೋಪಾಲ್‌ನಿಂದ ಆರ್ಡರ್ ಮಾಡಲಾಗಿತ್ತು. ಮಾರಾಟಗಾರರ ತಪ್ಪಿನಿಂದಾಗಿ, ಮದರಸಾಗಳಲ್ಲಿ ಸಾಮಾನ್ಯವಾಗಿ ಬಳಸುವ ಮೂರು ಅಥವಾ ನಾಲ್ಕು ವಸ್ತುಗಳನ್ನು ಸೇರಿಸಲಾಗಿದೆ ಎಂದು ಅವರು ಹೇಳಿಕೊಂಡರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com