
ತಿರುಪತಿ: ಹೈದರಾಬಾದ್ ಮೂಲದ ಭಕ್ತ ಕೆ. ಶ್ರೀಕಾಂತ್ ಅವರು ಮಂಗಳವಾರ ವೆಂಕಟೇಶ್ವರ ಸ್ವಾಮಿ ದೇವಾಲಯದ ತಿರುಮಲ ತಿರುಪತಿ ದೇವಸ್ಥಾನಂಗೆ (TTD) ರೂ. 1 ಕೋಟಿ 10 ಲಕ್ಷ ದೇಣಿಗೆ ನೀಡಿದ್ದಾರೆ.
ಇದರಲ್ಲಿ ರೂ. 1 ಕೋಟಿಯನ್ನು ಎಸ್ ವಿ ಅನ್ನ ಪ್ರಸಾದಂ ಟ್ರಸ್ಟ್ ಗೆ ನೀಡಿದರೆ, ರೂ. 10 ಲಕ್ಷ ವನ್ನು ಎಸ್ ವಿ ಗೋ ಸಂರಕ್ಷಣಾ ಟ್ರಸ್ಟ್ ಗೆ ನೀಡಿದ್ದಾರೆ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.
ಶ್ರೀವಾರಿ ದೇವಸ್ಥಾನದೊಳಗಿನ ರಂಗನಾಯಕುಲ ಮಂಟಪದಲ್ಲಿ ಶ್ರೀಕಾಂತ್ ಅವರು ತಮ್ಮ ದೇಣಿಗೆಯ ಡಿಮ್ಯಾಂಡ್ ಡ್ರಾಫ್ಟ್‌ಗಳನ್ನು (DD)ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಸಿ ವೆಂಕಯ್ಯ ಚೌಧರಿ ಅವರಿಗೆ ಹಸ್ತಾಂತರಿಸಿದರು.
ಮಾಜಿ ಮುಖ್ಯಮಂತ್ರಿ ಎನ್ ಟಿ ರಾಮರಾವ್ (NTR) ಅವರು ದಿನಕ್ಕೆ 2,000 ಯಾತ್ರಾರ್ಥಿಗಳಿಗೆ ಉಚಿತವಾಗಿ ಆಹಾರ ನೀಡಲು ವೆಂಕಟೇಶ್ವರ ನಿತ್ಯ ಅನ್ನದಾನ ದತ್ತಿ ಯೋಜನೆಯನ್ನು 1985 ರಲ್ಲಿ ಪ್ರಾರಂಭಿಸಿದರು. ನಂತರ, ಇದು 1994 ರಲ್ಲಿ ಶ್ರೀ ವೆಂಕಟೇಶ್ವರ ನಿತ್ಯ ಅನ್ನದಾನ ಟ್ರಸ್ಟ್ ಎಂಬ ಹೆಸರಿನಿಂದ ಸ್ವತಂತ್ರ ಟ್ರಸ್ಟ್ ಆಗಿ ಮತ್ತು 2014 ರಲ್ಲಿ ಶ್ರೀ ವೆಂಕಟೇಶ್ವರ ಅನ್ನಪ್ರಸಾದ ಟ್ರಸ್ಟ್ ಆಗಿ ರೂಪಾಂತರಗೊಂಡಿತು.
ಪ್ರಪಂಚದಾದ್ಯಂತ ದೇಣಿಗೆಗಳ ಮೂಲಕ ನಡೆಸಲ್ಪಡುವ ಟ್ರಸ್ಟ್ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹಣವನ್ನು ಠೇವಣಿ ಇಡುತ್ತದೆ. ಅದರ ಮೇಲೆ ಗಳಿಸಿದ ಬಡ್ಡಿಯ ಮೂಲಕ ಭಕ್ತರಿಗೆ ಆಹಾರ ಪೂರೈಸಲು ಅದರ ವೆಚ್ಚವನ್ನು ಪೂರೈಸುತ್ತದೆ. TTD ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇಗುಲವನ್ನು ನಡೆಸುತ್ತಿದೆ.
Advertisement