
ಪಾಟ್ನಾ: ಪಾಟ್ನಾದ ಖಿರಿಮೋರ್ ಪ್ರದೇಶದಲ್ಲಿ ವಿಷಕಾರಿ ಆಹಾರ ಸೇವಿಸಿ ಒಂದೇ ಕುಟುಂಬದ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಮೃತ ಮಕ್ಕಳನ್ನು ನಿಧಿ ಕುಮಾರಿ(8) ಮತ್ತು ಅವರ ಇಬ್ಬರು ಸಹೋದರರಾದ ವಿಕಾಸ್ ಕುಮಾರ್(6) ಹಾಗೂ ಮೋಹಿತ್ ಕುಮಾರ್(4) ಎಂದು ಗುರುತಿಸಲಾಗಿದೆ.
"ಸೋಮವಾರ ರಾತ್ರಿ ಮಕ್ಕಳು ತಮ್ಮ ಮನೆಯಲ್ಲಿ ಊಟ ಮಾಡಿದ ನಂತರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಅವರ ಸ್ಥಿತಿ ಹದಗೆಟ್ಟ ನಂತರ, ಅವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವಿಕಾಸ್ ಮತ್ತು ಮೋಹಿತ್ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ನಿಧಿಯನ್ನು ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ(PMCH) ಕರೆದೊಯ್ಯಲಾಯಿತು, ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು.
ವಿಷಕಾರಿ ಆಹಾರ ಸೇವಿಸಿ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ ಎಂದು SPO(ಪಾಲಿಗಂಜ್-1) ರಾಜೀವ್ ಚಂದ್ರ ಸಿಂಗ್ ವರದಿಗಾರರಿಗೆ ತಿಳಿಸಿದ್ದಾರೆ.
Advertisement