
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 79 ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನವಾದ ಗುರುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದರು.
ಇಂದು ರಾತ್ರಿ ರಾಷ್ಟ್ರಪತಿ ಭವನದಲ್ಲಿ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಶ್ಲಾಘಿಸಿದರು. ಆಪರೇಷನ್ ಸಿಂಧೂರ್‌ನ ಯಶಸ್ಸನ್ನು ಎತ್ತಿ ತೋರಿಸಿದರು ಮತ್ತು ದೇಶದ ಏಕತೆ ಮತ್ತು ರಕ್ಷಣಾ ವಲಯದಲ್ಲಿ ಹೆಚ್ಚುತ್ತಿರುವ ಸ್ವಾವಲಂಬನೆಯನ್ನು ಒತ್ತಿ ಹೇಳಿದರು.
ಮುಗ್ಧ ಪ್ರವಾಸಿಗರ ಮೇಲಿನ ದಾಳಿ 'ಹೇಡಿತನದ್ದು ಮತ್ತು ಸಂಪೂರ್ಣವಾಗಿ ಅಮಾನವೀಯ ಕೃತ್ಯ' ಎಂದು ಖಂಡಿಸಿದರು. ನಮ್ಮ ಸಶಸ್ತ್ರ ಪಡೆಗಳು ಗಡಿಯುದ್ದಕ್ಕೂ ಭಯೋತ್ಪಾದಕ ಮೂಲಸೌಕರ್ಯವನ್ನು ನಾಶಮಾಡುವ ಮೂಲಕ 'ಕಾರ್ಯತಂತ್ರದ ಸ್ಪಷ್ಟತೆ ಮತ್ತು ತಾಂತ್ರಿಕ ಸಾಮರ್ಥ್ಯವನ್ನು' ಪ್ರದರ್ಶಿಸಿವೆ ಎಂದು ಪ್ರತಿಪಾದಿಸಿದರು.
ಭಯೋತ್ಪಾದನೆಯ ವಿರುದ್ಧದ ಜಾಗತಿಕ ಹೋರಾಟದಲ್ಲಿ ಆಪರೇಷನ್ ಸಿಂಧೂರ್ ಒಂದು ಹೆಗ್ಗುರುತು ಎಂದು ಮುರ್ಮು ಬಣ್ಣಿಸಿದರು.
"ಭಯೋತ್ಪಾದನೆಯ ವಿರುದ್ಧ ಮಾನವೀಯತೆಯ ಹೋರಾಟದಲ್ಲಿ ಆಪರೇಷನ್ ಸಿಂಧೂರ್ ಇತಿಹಾಸದಲ್ಲಿ ಒಂದು ಉದಾಹರಣೆಯಾಗಿ ಉಳಿಯುತ್ತದೆ ಎಂದು ನಾನು ನಂಬುತ್ತೇನೆ" ಎಂದು ಅವರು ಹೇಳಿದರು.
"...ನಾವು ಆಕ್ರಮಣಕಾರಿಯಾಗುವುದಿಲ್ಲ. ಆದರೆ ನಮ್ಮ ನಾಗರಿಕರ ರಕ್ಷಣೆಗಾಗಿ ಪ್ರತೀಕಾರ ತೀರಿಸಿಕೊಳ್ಳಲು ನಾವು ಹಿಂಜರಿಯುವುದಿಲ್ಲ ಎಂಬ ಭಾರತದ ನಿಲುವನ್ನು ಜಗತ್ತು ಗಮನಿಸಿದೆ" ಎಂದು ಅವರು ಹೇಳಿದರು.
ರಕ್ಷಣಾ ವಲಯದಲ್ಲಿ 'ಆತ್ಮನಿರ್ಭರ ಭಾರತ' (ಸ್ವಾವಲಂಬಿ ಭಾರತ) ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಯಶಸ್ಸಿಗೆ ಸಾಕ್ಷಿಯಾಗಿ ಎಂದು ರಾಷ್ಟ್ರಪತಿಗಳು ಹೇಳಿದರು.
ಸ್ವಾತಂತ್ರ್ಯ ದಿನವು ಕೇವಲ ಸ್ವಾತಂತ್ರ್ಯದ ಆಚರಣೆಯಲ್ಲ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತು ತ್ಯಾಗ ಮಾಡಿದ ಲೆಕ್ಕವಿಲ್ಲದಷ್ಟು ಪುರುಷರು ಮತ್ತು ಮಹಿಳೆಯರಿಗೆ ಗೌರವವಾಗಿದೆ ಎಂದು ರಾಷ್ಟ್ರಪತಿಗಳು ದೇಶಕ್ಕೆ ನೆನಪಿಸಿದರು.
Advertisement