
ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿರುವ ಹುಮಾಯೂನ್ ಸಮಾಧಿ ಆವರಣದಲ್ಲಿ ಮಸೀದಿಯ ಬಳಿಯ ಕೋಣೆಯ ಮೇಲ್ಛಾವಣಿ ಕುಸಿದು 6 ಮಂದಿ ಸಾವನ್ನಪ್ಪಿದ್ದಾರೆ. ಅವಶೇಷಗಳ ಅಡಿಯಲ್ಲಿ 7 ಮಂದಿ ಸಿಲುಕಿಕೊಂಡಿದ್ದು ಅವರ ರಕ್ಷಣೆಗೆ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಇಲ್ಲಿಯವರೆಗೆ 11ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಪೊಲೀಸ್ ಅಧಿಕಾರಿಗಳ ಜೊತೆಗೆ ಅಗ್ನಿಶಾಮಕ ಸಿಬ್ಬಂದಿ ಕೂಡ ಸ್ಥಳಕ್ಕೆ ತಲುಪಿದ್ದಾರೆ. ಎನ್‌ಡಿಆರ್‌ಎಫ್ ತಂಡ ಕೂಡ ಸ್ಥಳಕ್ಕೆ ತಲುಪಿದೆ.
ಘಟನೆ ಬಗ್ಗೆ ಮಾಹಿತಿ ಬಂದ ತಕ್ಷಣ ಪೊಲೀಸರು ಅಗ್ನಿಶಾಮಕ ದಳ ಮತ್ತು NDRF ತಂಡಗಳು ಸ್ಥಳಕ್ಕೆ ತಲುಪಿದ್ದು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಇಲ್ಲಿಯವರೆಗೆ 11 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ದೆಹಲಿ ಅಗ್ನಿಶಾಮಕ ಸೇವೆಯ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಸಂಜೆ 4.30 ರ ಸುಮಾರಿಗೆ ಗುಮ್ಮಟದ ಒಂದು ಭಾಗ ಬಿದ್ದಿದೆ ಎಂದು ವರದಿಯಾಗಿದೆ. ಆದಾಗ್ಯೂ, ಗುಮ್ಮಟ ಬಿದ್ದಿಲ್ಲ. ಮಸೀದಿಯ ಬಳಿ ನಿರ್ಮಿಸಲಾದ ಕೋಣೆಯ ಛಾವಣಿ ಬಿದ್ದಿದೆ.
ಹುಮಾಯೂನ್ ಸಮಾಧಿಯನ್ನು 16ನೇ ಶತಮಾನದಲ್ಲಿ ನಿರ್ಮಾಣ
ಹುಮಾಯೂನ್ ಸಮಾಧಿಯನ್ನು 1565-1572ರ ನಡುವೆ ದೆಹಲಿಯಲ್ಲಿ ನಿರ್ಮಿಸಲಾಯಿತು. ಇದನ್ನು ಹುಮಾಯೂನ್ ಪತ್ನಿ ಹಾಜಿ ಬೇಗಂ ನಿರ್ಮಿಸಿದರು. ಈ ಸಮಾಧಿ ಮೊಘಲ್ ವಾಸ್ತುಶಿಲ್ಪದ ಮೊದಲ ಪ್ರಮುಖ ಉದಾಹರಣೆಯಾಗಿದೆ. ತಾಜ್ ಮಹಲ್ ನಂತಹ ಇತರ ಸ್ಮಾರಕಗಳನ್ನು ಇದರಿಂದ ಸ್ಫೂರ್ತಿ ಪಡೆದು ನಿರ್ಮಿಸಲಾಗಿದೆ. ಸಮಾಧಿಯನ್ನು ಕೆಂಪು ಮರಳುಗಲ್ಲು ಮತ್ತು ಬಿಳಿ ಅಮೃತಶಿಲೆಯಿಂದ ನಿರ್ಮಿಸಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ, 2007-2013ರಲ್ಲಿ ಆಗಾ ಖಾನ್ ಟ್ರಸ್ಟ್ ದೊಡ್ಡ ಪ್ರಮಾಣದ ನವೀಕರಣವನ್ನು ಕೈಗೊಂಡಿತು. ಪರಿಸರ ಮಾಲಿನ್ಯ ಮತ್ತು ಹವಾಮಾನ ಪರಿಣಾಮಗಳಿಂದಾಗಿ ಕೆಲವು ಭಾಗಗಳು ಹಾನಿಗೊಳಗಾಗಿದ್ದರೂ, ಸಮಾಧಿ ಇನ್ನೂ ಬಲಿಷ್ಠವಾಗಿದೆ ಮತ್ತು ಇಂದಿಗೂ ಉತ್ತಮ ಸ್ಥಿತಿಯಲ್ಲಿದೆ. ಈ ಘಟನೆಯಲ್ಲಿ ಸಮಾಧಿ ಕುಸಿದಿಲ್ಲ. ಆದರೆ ಸಮಾಧಿ ಆವರಣದೊಳಗಿನ ಕೋಣೆಯ ಛಾವಣಿ ಕುಸಿದಿದೆ.
Advertisement